ಕೊಪ್ಪಳ: ಕೊರೋನಾ ಸೋಂಕಿತ ಗರ್ಭೀಣಿಯರಿಗೆ ಶುಭ ಸುದ್ದಿ!

ಜಿಲ್ಲಾಸ್ಪತ್ರೆಯಲ್ಲಿ 54 ಸೋಂಕಿತ ಗರ್ಭೀಣಿಯರಿಗೆ ಹೆರಿಗೆ ಮಾಡಿಸಿದ್ದು. ಅದರಲ್ಲಿ 28 ಜನರಿಗೆ ಶಸ್ತ್ರಚಿಕಿತ್ಸೆ ಮುಖಾಂತರ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ: ಈಗ ರಾಜ್ಯದಲ್ಲಿ ಕೊರೊನಾದಿಂದ ಸಾವು ನೋವುಗಳಾಗುತ್ತಿವೆ. ಎರಡನೆಯ ಅಲೆಯ ನಂತರ ಮೂರನೆಯ ಅಲೆ ಬರಲಿದ್ದು ಈ ಅಲೆಯು ಚಿಕ್ಕಮಕ್ಕಳ‌ ಮೇಲೆ ಪರಿಣಾಮ ಬೀರುತ್ತದೆ ಎಂಬ ತಜ್ಞರ ಅಭಿಪ್ರಾಯವಿದೆ. ಕೊರೊನಾ ಬಂದಾಗ ಗರ್ಭೀಣಿಯರಿಗೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯ ವೂ ಇದೆ, ಈ ಮಧ್ಯೆ ಕೊರೊನಾ ಸೋಂಕಿತ ಗರ್ಭೀಣಿಯರಿಗೆ ಒಂದು ಗುಡ್ ನ್ಯೂಸ್ ಕೊಪ್ಪಳದಲ್ಲಿ ವರದಿಯಾಗಿದೆ.ಕೊಪ್ಪಳದಲ್ಲಿ ಕೊರೊನಾ ಎರಡನೆಯ ಅಲೆ ಅಬ್ಬರ ಇನ್ನೂ ಇದೆ. ಈ ಮಧ್ಯೆ ಕೊರೊನಾವು ಗರ್ಭೀಣಿಯರಲ್ಲಿಯೂ ಕಾಣಿಸಿಕೊಳ್ಳುತ್ತಿದೆ.

ಗರ್ಭೀಣಿಯರಲ್ಲಿ ಸೋಂಕು ಕಾಣಿಸಿಕೊಂಡಾಗ ಸಹಜವಾಗಿ ಆತಂಕಕ್ಕೊಳಗಾಗುವದು ಸ್ವಾಭಾವಿಕ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಗರ್ಭೀಣಿಯರಲ್ಲಿ ಸೋಂಕು ಕಾಣಿಸಿಕೊಂಡರು ಅವರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಇಲ್ಲಿ ಒಬ್ಬರೂ ಸೋಂಕಿತ ಗರ್ಭೀಣಿಯರು ಹೆರಿಗೆ ಹಾಗು ಹೆರಿಗೆಯ ನಂತರ ಸಾವುಗಳು ಸಂಭವಿಸಿಲ್ಲ. ಮೊದಲು ಅಲೆಯಲ್ಲಿ ಸುಮಾರು 100.ಜನ ಗರ್ಭೀಣಿರಲ್ಲಿ ಸೋಂಕು ಕಾಣಸಿಕೊಂಡಿದ್ದು ಅದರಲ್ಲಿ 87 ಜನರಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ.

ಉಳಿದವರು ಸೋಂಕಿನಿಂದ ಗುಣಮುಖರಾದ ನಂತರ ಬೇರೆ ಕಡೆ ಮಗುವಿಗೆ ಜನ್ಮ ನೀಡಿದ್ದಾರೆ.ಇನ್ನೂ ಎರಡನೆಯ ಅಲೆಯ ಸಂದರ್ಭದಲ್ಲಿ ಇಲ್ಲಿಯವರೆಗೂ ಒಟ್ಟು 172 ಜನ ಗರ್ಭೀಣಿಯರಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 122 ಜನರಿಗೆ ಹೆರಿಗೆಯಾಗಿದೆ. ಹೆರಿಗೆಯಾದ ನಂತರ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಜಿಲ್ಲೆಗೆ ಹೊರಗಡೆ ಯಿಂದ ಹೆರಿಗೆಯಾದ ನಂತರ ಬಂದ ಐದು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡು ಮಕ್ಕಳು ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ: PM Caresಗೆ 2.5 ಲಕ್ಷ ದೇಣಿಗೆ ನೀಡಿದ್ದವನ ತಾಯಿ ಬೆಡ್ ಸಿಗದೆ ಸಾವು; ಇನ್ನೆಷ್ಟು ದೇಣಿಗೆ ಬೇಕು ಎಂದ ವ್ಯಕ್ತಿ

ಜಿಲ್ಲಾಸ್ಪತ್ರೆಯಲ್ಲಿ 54 ಸೋಂಕಿತ ಗರ್ಭೀಣಿಯರಿಗೆ ಹೆರಿಗೆ ಮಾಡಿಸಿದ್ದು. ಅದರಲ್ಲಿ 28 ಜನರಿಗೆ ಶಸ್ತ್ರಚಿಕಿತ್ಸೆ ಮುಖಾಂತರ ಹೆರಿಗೆ ಮಾಡಿಸಲಾಗಿದೆ. ಗರ್ಭೀಣಿಯರು ಗರ್ಭಾವ ಸ್ಥೆಯಲ್ಲಿ ಎಚ್ಚರಿಕೆಯಿಂದ‌ ಇರಬೇಕು. ಸಭೆ ಸಮಾರಂಭಗಳಲ್ಲಿ ಗುಂಪಿನಲ್ಲಿರಬಾರದು, ಸೋಂಕಿತ ಗರ್ಭೀಣಿಯರ ಹೆರಿಗೆ ಮಾಡಿಸುವಾಗ ಸಾಮಾನ್ಯವಾಗಿ ಶ್ವಾಸಕೋಶದಲ್ಲಿ ತೊಂದರೆ ಇರುತ್ತದೆ, ತಾಯಿಯಿಂದ ಮಗುವನ್ನು ಹೊಕ್ಕಳ ಬಳ್ಳಿಯಿಂದ ಬೇರ್ಪಡಿಸುವಾ ದೇಹದಲ್ಲಿ ಆಕ್ಸಿಜನ್ ಏರುಪೇರಾಗುತ್ತದೆ. ಈ ಮುಂಜಾನೆಯಿಂದ ಕೊಪ್ಪಳ ಜಿಲ್ಲಾಸ್ಪತ್ರೆಯ 8. ಜನರ ತಂಡ ಸುರಕ್ಷಿತ ಹೆರಿಗೆ ಮಾಡಿಸಿದ್ದು ವಿಶೇಷ ವಾಗಿದೆ.

ಇದನ್ನೂ ಓದಿ: Corona Death: ಕಳೆದ ಹತ್ತು‌ ದಿನದಲ್ಲಿ 170 ಸಾವು, ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ!

ಇದರಿಂದಾಗಿ ಕೊಪ್ಪಳ ಜಿಲ್ಲಾಸ್ಪತ್ರೆಯು ಸೋಂಕಿತ ಗರ್ಭೀಣಿಯರಿಗೆ ಗುಡ್ ನ್ಯೂಸ್ ನೀಡುತ್ತಿದೆ. ಈಗಲೂ ಕೊರೊನಾ ಅಬ್ಬರಿಸುತ್ತಿದೆ, ಕೊರೊನಾ ನಂತರ ಮತ್ತೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಎಂಬ ಮಾರಿ ಆವರಿಸಿದೆ, ಇದರಿಂದ ತಪ್ಪಿಸಿಕೊಳ್ಳಲು ಮುಖ್ಯವಾಗಿ ಕೊರೊನಾ ಸೋಂಕು ಬಾರದಂತೆ ಸ್ವಯಂ ಪ್ರೇರಣೆಯಿಂದ ನಿರ್ಬಂಧ ಹಾಕಿಕೊಳ್ಳಬೇಕಾಗಿದೆ. ಅದರಲ್ಲಿಯೂ ಮಗುವಿಗೆ ಜನ್ಮ ನೀಡುವ ತಾಯಿಯು ಸಾಕಷ್ಟು ಮುಂಜಾಗ್ರತೆಯನ್ಜು ವಹಿಸಿಕೊಳ್ಳಬೇಕಾಗಿದೆ.

ಗರ್ಭೀಣಿಯರು ಮನೆಯಲ್ಲಿಯೇ ಇರಬೇಕು, ಕೊರೊನಾ ಸೋಂಕು ತಗುಲದಂತೆ ಆಗಾಗ ಕೈ ತೊಳೆದುಕೊಂಡು, ಮಾಸ್ಕ್ ಹಾಕಿಕೊಂಡು ಪೌಷ್ಠಿಕ ಆಹಾರ ಸೇವಿಸಿ ಸೋಂಕು ಬರದಂತೆ ನೋಡಿಕೊಳ್ಳಬೇಕಾಗಿದೆ.ಮೊದಲೇ ಗರ್ಭೀಣಿಯರಾದ ದೈಹಿಕವಾಗಿ ಒಂದಿಷ್ಟು ಏರುಪೇರು ಗಳಾವುದು ಸಹಜ ಈ ಸಂದರ್ಭದಲ್ಲಿ ಸೋಂಕು ಬಾಧಿಸಿದರೆ ಇನ್ನಷ್ಟು ಆರೋಗ್ಯ ಹಾಗು ಮಾನಸಿಕವಾಗಿ ಕುಗ್ಗುವುದು ಸಹಜ, ಈ ಕಾರಣಕ್ಕೆ ಗರ್ಭೀಣಿಯರು ಹಾಗು ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಹೇಳಿದ್ದಾರೆ.
Published by:MAshok Kumar
First published: