KOMUL: ರೈತರ ಪಾಲಿಗೆ ಅಧಿಕಾರಿಯೇ ವಿಲನ್, 12 ಲಕ್ಷ ರೂಪಾಯಿ ನಾಮ ಹಾಕಿದ ಆರೋಪ

ಕೋಮುಲ್

ಕೋಮುಲ್

ರೈತರು ಕೇಂದ್ರಕ್ಕೆ ಹಾಲು ನೀಡುವಾಗ ತೂಕದಲ್ಲಿ ಕಾರ್ಯದರ್ಶಿ ನಾರಾಯಣಮೂರ್ತಿ ವಂಚಿಸಿ, ರೈತರ ಹಾಲನ್ನೇ ಬೇರಯವರ ಹೆಸರಲ್ಲಿ ನೋಂದಾಯಿಸಿಕೊಂಡು, ಅದೇ ಹಾಲಿನ ಹಣವನ್ನ ಪಡೆದುಕೊಂಡು ವಂಚಿಸಿದ್ದಾರೆ ಎನ್ನುವ ಆರೋಪ ಬೆಳಮಾರನಹಳ್ಳಿ ಗ್ರಾಮಸ್ಥರದ್ದಾಗಿದೆ. ಕಳೆದ 21 ತಿಂಗಳ ಮಾಹಿತಿಯನ್ನ ಮಾತ್ರ ರೈತರು ಪಡೆದುಕೊಂಡಿದ್ದು, ತಾವು ಡೈರಿಗೆ ಹಾಕಿರುವ ಹಾಲಿನಷ್ಟು ಹಣ ಏಕೆ ಬಂದಿಲ್ಲ ಎಂದು ಪರಿಶೀಲನೆ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಕೋಲಾರ(ಏಪ್ರಿಲ್ 13): ಕೋಲಾರ ತಾಲೂಕಿನ ಬೆಳಮಾರನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ, ಸಂಘದ ಕಾರ್ಯದರ್ಶಿಯೇ 12 ಲಕ್ಷ ರೂಪಾಯಿಗಳನ್ನ ಹಾಲು ಉತ್ಪಾದಕರಿಗೆ ವಂಚಿಸಿರೋ ಆರೋಪ ಕೇಳಿಬಂದಿದೆ. ಸಂಘದಲ್ಲಿ ಕಳೆದ 21 ತಿಂಗಳಿಂದ ಕೆಲ ರೈತರ ಹೆಸರಲ್ಲಿ ಬೇರೆಯ ಬ್ಯಾಂಕ್ ಖಾತೆಗಳನ್ನ ನೀಡಿ, ಸುಮಾರು 12 ಲಕ್ಷ ರೂಪಾಯಿಗಳನ್ನ ಕಾರ್ಯದರ್ಶಿ ನಾರಾಯಣಮೂರ್ತಿ ತಮಗೆ ಪರಿಚಯವಿರುವ ಐದು ಕಾರ್ಯದರ್ಶಿಗಳ ಖಾತೆಗಳಿಗೆ ಹಣವನ್ನ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಬೆಳಮಾರನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ 150 ಕ್ಕು ಹೆಚ್ಚು ಹಾಲು ಉತ್ಪಾದಕರಿದ್ದು, ಪ್ರತಿದಿನ 2 ಸಾವಿರ ಲೀಟರ್‍ಗು ಹೆಚ್ಚು ಹಾಲು ಇಲ್ಲಿನ ಬಿಎಂಸಿ ಕೇಂದ್ರದಲ್ಲಿ ಶೇಖರಣೆಯಾಗುತ್ತಿದೆ.


ಇಲ್ಲಿ ರೈತರು ಕೇಂದ್ರಕ್ಕೆ ಹಾಲು ನೀಡುವಾಗ ತೂಕದಲ್ಲಿ ಕಾರ್ಯದರ್ಶಿ ನಾರಾಯಣಮೂರ್ತಿ ವಂಚಿಸಿ, ರೈತರ ಹಾಲನ್ನೇ ಬೇರಯವರ ಹೆಸರಲ್ಲಿ ನೋಂದಾಯಿಸಿಕೊಂಡು, ಅದೇ ಹಾಲಿನ ಹಣವನ್ನ ಪಡೆದುಕೊಂಡು ವಂಚಿಸಿದ್ದಾರೆ ಎನ್ನುವ ಆರೋಪ ಬೆಳಮಾರನಹಳ್ಳಿ ಗ್ರಾಮಸ್ಥರದ್ದಾಗಿದೆ. ಕಳೆದ 21 ತಿಂಗಳ ಮಾಹಿತಿಯನ್ನ ಮಾತ್ರ ರೈತರು ಪಡೆದುಕೊಂಡಿದ್ದು, ತಾವು ಡೈರಿಗೆ ಹಾಕಿರುವ ಹಾಲಿನಷ್ಟು ಹಣ ಏಕೆ ಬಂದಿಲ್ಲ ಎಂದು ಪರಿಶೀಲನೆ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ ಎಂದು ತಿಳಿದುಬಂದಿದೆ.


ಇನ್ನು ಇದೇ ವಿಚಾರವಾಗಿ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿರುವ  ಹಾಲು ಉತ್ಪಾದಕರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೇ ವಿಚಾರವಾಗಿ ಕಳೆದ ಮಾರ್ಚ್ 6 ರಂದು ಬೆಳಮಾರನಹಳ್ಳಿ ಸಂಘಕ್ಕೆ ಭೇಟಿ ನೀಡಿದ್ದ, ಕೋಲಾರ ವಿಭಾಗದ ಆಗಿನ ಕೋಮುಲ್ ಡಿವಿಷನ್ ಮ್ಯಾನೇಜರ್ ಶ್ರೀನಿವಾಸ್, ಕಾರ್ಯದರ್ಶಿ ನಾರಾಯಣಮೂರ್ತಿಗೆ ಸರಿಯಾಗಿಯೇ ಬೈದು  ಹಣವನ್ನ ವಾಪಾಸ್ ನೀಡುವಂತೆ ಸೂಚನೆ ನೀಡಿದ್ದಾರೆ. ರೈತರು ನೀಡಿದ ದೂರಿನ ಸಂಬಂಧ ದಾಖಲೆಗಳನ್ನ ಪರಿಶೀಲನೆ ಮಾಡಲಾಗಿದೆ. ಸುಮಾರು 10 ಲಕ್ಷಕ್ಕು ಅಧಿಕ ಹಣವನ್ನ ರೈತರಿಗೆ ನೀಡದೆ, ವಂಚಿಸಲಾಗಿದೆ ಎಂದು ಅಧಿಕಾರಿ ಶ್ರೀನಿವಾಸ್ ತಿಳಿಸಿ, ಕೂಡಲೇ ಹಣವನ್ನ ವಾಪಾಸ್ ಕಟ್ಟುವಂತೆ ಸೂಚನೆ ನೀಡಿರುವ ವಿಡಿಯೋ ದೃಶ್ಯಗಳನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.


ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ 5-6 ಲಕ್ಷ ಹಣ ವಾಪಾಸ್ ನೀಡುವುದಾಗಿ ಒಪ್ಪಿಕೊಂಡಿದ್ದ ಕಾರ್ಯದರ್ಶಿ ನಾರಾಯಣಮೂರ್ತಿ ಇನ್ನು ಹಣವನ್ನ ಸಂಘಕ್ಕೆ ಕಟ್ಟಿಲ್ಲ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ಯದರ್ಶಿ ನಾರಾಯಣಮೂರ್ತಿ, ನಾನು ರೈತರಿಗೆ ವಂಚಿಸಿಲ್ಲ. ಅದೆಲ್ಲಾ ಸತ್ಯಕ್ಕೆ ದೂರವಾದ ಆರೋಪವಾಗಿದೆ, ಯಾವುದೊ ವಿಚಾರದಲ್ಲಿ ಏರುಪೇರಾಗಿ ಹಣ ದುರ್ಬಳಕೆಯಾಗಿದೆ, ಅದೆಲ್ಲಾ ಜಸ್ಟ್ ಮಿಸ್ ಆಗಿ ಆಗೋಗಿದೆ. ಬೇರೆನೋ ಯೋಜನೆಗೆ ಹಣ ಬಳಸಲಾಗಿದೆ, ಇದು ನನಗಾಗಿ ನಾನು ಮಾಡಿದ್ದಲ್ಲ ಬೇರೆಯವರ ಪರವಾಗಿ ಮಾಡಿರೊ ಕೆಲಸವಾಗಿದೆ, ಎನ್ನುತ್ತಾ ತನಿಖೆಗೆ ಸಹಕಾರ ನೀಡೊದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

top videos


    ಒಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಲವು ವರ್ಷದಿಂದ ರೈತರ ಹಣ ಗುಳುಂ ಮಾಡಿರುವ ಆರೋಪ ಕೇಳಿಬಂದಿದ್ದು, ಕಳೆದ 2 ವರ್ಷದಲ್ಲೆ 12 ಲಕ್ಷ ಅವ್ಯವಹಾರ ನಡೆದಿರುವುದು ತಿಳಿದುಬಂದಿದೆ. ಉಳಿದ ಅವಧಿಯಲ್ಲಿ ಮತ್ತಷ್ಟು ಅವ್ಯವಹಾರ ನಡೆದಿರುವ ಶಂಕೆಯು ಇದೆ. ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು ಹಾಗು ಹಾಲು ಉತ್ಪಾದಕರು ನಾವು ಹಾಕುವಷ್ಟು ಹಾಲಿಗೆ ಪ್ರತಿಯಾಗಿ ನಮಗೆ ಹಣ ಸಿಗುತ್ತಿಲ್ಲ, ಇವತ್ತು ಒಂದು ಲೀಟರ್ ಹಾಲು ಪಡೆಯಬೇಕೆಂದರೆ ಅದರ ಹಿಂದೆ ಎಷ್ಟು ಶ್ರಮ ಇದೆಯೆಂದು ನಮಗೆ ಗೊತ್ತಿದೆ. ರೈತರಿಗೆ ವಂಚನೆ ಮಾಡಿರುವ ಇಂತಹವರ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.


    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲಾರ ಚಿಕ್ಕಬಳ್ಳಾಪುರ ಕೋಮುಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ತಿಪ್ಪಾರೆಡ್ಡಿ, ಡಿವಿಷನ್ ಮ್ಯಾನೇಜರ್‍ರಿಂದ ಪ್ರಕರಣ ಬಗ್ಗೆ ಮಾಹಿತಿ ಕೇಳಿದ್ದೇನೆ, ಅಕ್ರಮವಾಗಿ ಹಣ ಬಳಸಿ ಹಣ ವಾಪಾಸ್ ಕಟ್ಟಿದರೂ, ಅದು ಅಪರಾಧವೇ. ತನಿಖೆಯ ನಂತರ ಸತ್ಯಾಸತ್ಯತೆ ಅರಿತು ಶಿಸ್ತುಕ್ರಮ ಜರುಗಿಸುವೆ ಎಂದು ಭರವಸೆ ನೀಡಿದ್ದಾರೆ.

    First published: