• Home
  • »
  • News
  • »
  • district
  • »
  • ಸೋಂಕಿತನೊಂದಿಗೆ ಕ್ರಿಕೆಟ್ ಆಡಿದ 11 ಮಂದಿಗೆ ಕೊರೋನಾ ಭೀತಿ; ಕ್ವಾರಂಟೈನ್​ನಲ್ಲಿ ಯುವಕರು

ಸೋಂಕಿತನೊಂದಿಗೆ ಕ್ರಿಕೆಟ್ ಆಡಿದ 11 ಮಂದಿಗೆ ಕೊರೋನಾ ಭೀತಿ; ಕ್ವಾರಂಟೈನ್​ನಲ್ಲಿ ಯುವಕರು

ಕೋಲಾರದಲ್ಲಿ ಸೀಲ್​ಡೌನ್ ಆಗಿರುವುದು

ಕೋಲಾರದಲ್ಲಿ ಸೀಲ್​ಡೌನ್ ಆಗಿರುವುದು

ಯುವಕನಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೋಲಾರದ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಸೋಂಕಿತನ ನಿವಾಸವಿದ್ದ ಕಡೆಯಿಂದ ಮುಂದಿನ ನಾಲ್ಕು ರಸ್ತೆಗಳನ್ನ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತನೊಂದಿಗೆ ಕ್ರಿಕೆಟ್ ಆಡಿದ ಯುವಕರು ಸಹಜವಾಗಿ ಭಯಭೀತರಾಗಿಯೇ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.

ಮುಂದೆ ಓದಿ ...
  • Share this:

ಕೋಲಾರ(ಜೂನ್ 29): ಕೋಲಾರ ತಾಲೂಕಿನಲ್ಲಿ ಭಾನುವಾರ 6 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಛತ್ರಕೋಡಿಹಳ್ಳಿ ಗ್ರಾಮದ 28 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ. ಈ ಸೋಂಕಿತನೊಂದಿಗೆ ಎರಡು ದಿನ ಕ್ರಿಕೆಟ್ ಆಡಿದ್ದ 11 ಯುವಕರಿಗೆ  ಕೊರೊನಾ ಭೀತಿ ಶುರುವಾಗಿದೆ.

P-12002 ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಂತರರಾಜ್ಯ ಓಡಾಟದಿಂದ ಇತ್ತೀಚೆಗೆ ಕೊರೊನಾ ಪರೀಕ್ಷೆಗೆ ಒಳಪಗಾಗಿದ್ದರು. ಅದರ ವರದಿ ಭಾನುವಾರ ಬಂದಿದ್ದು, ಆತನಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದರೆ ವರದಿ ಬರುವ ಮುನ್ನವೇ ಯುವಕ‌ ಊರೆಲ್ಲಾ ಸುತ್ತಾಡಿದ್ದಾನೆ. ಗೆಳೆಯರ ಜೊತೆ ಎರಡು ದಿನ ಕ್ರಿಕೆಟ್ ಕೂಡ ಆಡಿದ್ದಾನೆ. ಎರಡು ದಿನಗಳಿಂದ ಸೋಂಕಿತನ ಜೊತೆಗಿದ್ದು, ಕ್ರಿಕೆಟ್ ಆಟವಾಡಿದ ಕಾರಣ 11 ಯುವಕರ ಗಂಟಲು ದ್ರವ  ಸಂಗ್ರಹಿಸಿ ಹೋಮ್ ಕ್ವಾರೆಂಟೈನ್ ಮಾಡಲಾಗಿದೆ.

ಯುವಕನಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಸೋಂಕಿತನ ನಿವಾಸವಿದ್ದ ಕಡೆಯಿಂದ ಮುಂದಿನ ನಾಲ್ಕು ರಸ್ತೆಗಳನ್ನ ಸೀಲ್ ಡೌನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕಿತನೊಂದಿಗೆ ಕ್ರಿಕೆಟ್ ಆಡಿದ ಯುವಕರು ಸಹಜವಾಗಿ ಭಯಭೀತರಾಗಿಯೇ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಮೇಲೆ ಸಿಎಂ ಬಿಎಸ್​ ಯಡಿಯೂರಪ್ಪ ಗರಂ; ಚಿಕಿತ್ಸೆ ನೀಡಲು ಒಪ್ಪದಿದ್ದರೆ ನೀರು, ವಿದ್ಯುತ್ ಬಂದ್​ಗೆ ಚಿಂತನೆ

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇತ್ತ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲೂ ಸತತ ಎರಡು ದಿನ‌ 10 ಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ ಸೋಂಕಿತರ ಸಂಖ್ಯೆ 116 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ತಾಲೂಕುಗಳಾದ ಕೋಲಾರದಲ್ಲಿ 6, ಮುಳಬಾಗಿಲುನಲ್ಲಿ 1, ಮಾಲೂರಿನಲ್ಲಿ 2, ಬಂಗಾರಪೇಟೆಯಲ್ಲಿ 2, ಶ್ರೀನಿವಾಸಪುರ ತಾಲೂಕಿನಲ್ಲಿ 1 ಪ್ರಕರಣ ಖಚಿತಪಟ್ಟಿವೆ. ಜಿಲ್ಲೆಯಲ್ಲಿ ಇದುವರೆಗೆ 52 ಮಂದಿ ಗುಣಮುಖರಾಗಿದ್ದು, ಈಗ 63 ಮಂದಿ ಸಕ್ರಿಯ ಪ್ರಕರಣಗಳಿವೆ ಎಂದು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ.ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಝೋನ್​ಗಳು ಹೆಚ್ಚುತ್ತಿದ್ದು ಜನರಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಿಂದೊಮ್ಮೆ ಮುಳಬಾಗಿಲು ತಾಲೂಕಿನ ಕುಗ್ರಾಮವೊಂದರಲ್ಲಿ ಸೋಂಕು ಪತ್ತೆಯಾದ ಕಾರಣ ರ್ಯಾಂಡಮ್ ಟೆಸ್ಟ್ ಮಾಡುವ ಮೂಲಕ ಆರೋಗ್ಯ ಇಲಾಖೆ ಗಮನ ಸೆಳೆದಿತ್ತು. ಇದೀಗ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿರುವ ವ್ಯಕ್ತಿಗಳಿಗೆ ಸೋಂಕು ಹೆಚ್ಚುತ್ತಿರುವ ಕಾರಣ, ಒಂದೇ ಗ್ರಾಮದಲ್ಲಿ ಮೂರಕ್ಕು ಹೆಚ್ಚು  ಸೋಂಕಿತರು ಪತ್ತೆಯಾದರೆ ರ್ಯಾಂಡಮ್ ಟೆಸ್ಟ್ ಮಾಡುವ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ಚೀನೀ ಆ್ಯಪ್​ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

First published: