ಕೋಲಾರದಲ್ಲಿ ಟೊಮೆಟೊ ಬೆಲೆ ಏರಿಳಿತಕ್ಕೆ ರೈತರು ಕಂಗಾಲು; ಪ್ರತಿನಿತ್ಯ ಬೆಳೆ ಕಟಾವು ಮಾಡುವ ಬೆಳೆಗಾರರ ಸ್ಥಿತಿ ಅಯೋಮಯ!

ಗುಣಮಟ್ಟದ ಟೊಮೆಟೊ ನಿತ್ಯ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಟೊಮೆಟೊ ಲಭ್ಯವಿದ್ದರು, ರೈತರಿಗೆ ಮಾತ್ರ ಸೂಕ್ತ ಬೆಲೆ ಸಿಗದಿರುವುದು ದುರದೃಷ್ಟಕರ ಎಂದರು ತಪ್ಪಾಗಲಾರದು.

ಟೊಮ್ಯಾಟೋ

ಟೊಮ್ಯಾಟೋ

  • Share this:
ಕೋಲಾರ: ಏಷ್ಯಾದಲ್ಲಿಯೆ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯೆಂದು, ಕೋಲಾರದ ಎಪಿಎಂಸಿ ಮಾರುಕಟ್ಟೆ ಹೆಸರುವಾಸಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಟೊಮೆಟೊ ಸೀಸನ್ ನಡೆಯುತ್ತಿದ್ದರು, ಇದೀಗ ಬೆಲೆ ಮಾತ್ರ ರೈತರ ಕೈಗೆ ಎಟುಕದಂತಾಗಿದೆ. ಹೌದು ಪ್ರತಿನಿತ್ಯ ಮಾರಾಟದ ಸಮಯದಲ್ಲಿ ಮಾರಾಟವಾಗುತ್ತಿರುವ ಬೆಲೆಗಳಲ್ಲಿ ಅಜ ಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಆಗಸ್ಟ್ 15 ರಂದು ಟೊಮೆಟೊ ಬೆಲೆ ಗಮನಿಸುವುದಾದರೆ, ನಾಟಿ 15 ಕೆಜಿ ತೂಕದ ಒಂದು ಬಾಕ್ಸ್  ಟೊಮೆಟೊ ಬೆಲೆ  ಕನಿಷ್ಠ 130 ರೂಪಾಯಿ, ಗರಿಷ್ಠ 300 ರೂಪಾಯಿ ಮೀರಿದೆ. ಇನ್ನು 15 ಕೆಜಿ ತೂಕದ ಸೀಡ್ಸ್ ಟೊಮೆಟೊ ಕನಿಷ್ಠ 30 ರೂಪಾಯಿ ಇದ್ದು, ಗರಿಷ್ಠ 230 ರ ಗಡಿ ದಾಟಿದೆ. ಈಗ ಟೊಮೆಟೊ ಸೀಸನ್ ಹಿನ್ನಲೆಯಲ್ಲಿ ಕೋಲಾರ ಮಾರುಕಟ್ಟೆಗೆ ನಿತ್ಯ ಸಾವಿರಾರು ಬಾಕ್ಸ್ ಟೊಮೆಟೊ ಆವಕ‌ ಆಗುತ್ತಿದೆ. ಇಲ್ಲಿಂದ ಮಹಾರಾಷ್ಟ್ರ, ಗುಜರಾತ್, ಆಂಧ್ರ, ತಮಿಳುನಾಡು ರಾಜ್ಯಗಳಿಗೆ ಯಥೇಚ್ಚವಾಗಿ ಟೊಮೆಟೊ ರಫ್ತಾಗುತ್ತಿದೆ.

ಬೆಲೆ ಏರಿಳಿತದಿಂದ ರೈತ ಕಂಗಾಲು

ಕಳೆದ 1 ತಿಂಗಳ ಹಿಂದೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹಣ್ಣು  ಮತ್ತೊಮ್ಮೆ ಅತ್ಯಂತ ಕನಿಷ್ಠ ಬೆಲೆಗೆ ಮಾರಾಟವಾಗಿತ್ತು. ಅಂದರೆ ಗರಿಷ್ಠ ಬೆಲೆಯೇ 100 ರ ಗಡಿ ದಾಟುವುದು ಕಷ್ಟಕರವಾಗಿತ್ತು. ಕಾಯಿಯ ಗುಣಮಟ್ಟದ ಮೇಲೆ ಬೆಲೆಯನ್ನ ನಿಗದಿ ಮಾಡಲಾಗುತ್ತಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಪಾರ್ಸೆಲ್ ಹೋಗುವ ಕಾಯಿಗೆ ಮಾತ್ರ ಹೆಚ್ಚಿನ ಬೆಲೆ‌ ಸಿಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದಿಂದ ಆಗಾಗ್ಗೆ ಉತ್ತಮ ಬೆಲೆ‌ ಸಿಗುತ್ತಿರುವ ಹಿನ್ನಲೆ, ರೈತರು ಉತ್ಸಾಹದಿಂದ  ಮಾರುಕಟ್ಟೆಗೆ ಟೊಮೆಟೊ ತರುತ್ತಿದ್ದಾರೆ, ಆದರೆ ಬೆಲೆ ಏರಿಳಿತದಿಂದ ರೈತರು ಕಂಗಾಲಾಗಿದ್ದಾರೆ. ಇವತ್ತಿನ ಬೆಲೆ ನಾಳೆ ಅಜಗಜಾಂತರ ವ್ಯತ್ಯಾಸದಲ್ಲಿ ಇಳಿಕೆಯಾಗುತ್ತಿದ್ದು, ಟೊಮೆಟೊ ತಂದು ಮಾರಾಟ ಮಾಡುತ್ತಿರುವ ರೈತರು ಬೆಲೆ‌ ಏರಿಳಿತದಿಂದ ಹೈರಾಣಾಗಿದ್ದಾರೆ. ನಾಳೆ ಬೆಲೆ‌ ಸಿಗುವ ಉದ್ದೇಶದಿಂದ ಹೆಚ್ಚು ಟೊಮೆಟೊ ಕಟಾವು ಮಾಡಿದರೆ ಆ ದಿನ‌, ಕಡಿಮೆ ಬೆಲೆಗೆ ಮಾರಾಟವಾಗುವುದು, ಹಾಗು ಟೊಮೆಟೊ ಕಡಿಮೆ ಪ್ರಮಾಣದಲ್ಲಿ ಕಟಾವು ಮಾಡಿ ತಂದ ದಿನ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿರುವುದು, ಇಂತಹ ಬೆಳವಣಿಗೆಯನ್ನ‌ ರೈತರು ಪ್ರತ್ಯಕ್ಷವಾಗಿ ಗಮನಿಸಿ ನಿರಾಸೆ ಅನುಭವಿಸಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಅಕ್ರಮ ವಲಸಿಗರದ್ದು ಭಾರೀ ಸಮಸ್ಯೆ ಇದೆ, ಬೇಕೆಂದೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ತಾರೆ; ಗೃಹ ಸಚಿವ ಅರಗ ಜ್ಞಾನೇಂದ್ರ

ಒಟ್ಟಿನಲ್ಲಿ ಕೋಲಾರ ಟೊಮೆಟೊ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ರೈತರು ಹೈರಾಣಾಗಿದ್ದು, ಹೊರಗಿನ  ಮಾರುಕಟ್ಟೆಗಳಲ್ಲಿನ ವ್ಯಾಪಾರ ವಹಿವಾಟು ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೇನು ಟೊಮೆಟೊ ಸೀಸನ್ ಮುಗಿಯುತ್ತಾ ಬರುತ್ತಿದ್ದು, ಜಿಲ್ಲೆ ಸೇರಿ ಬೇರೆಡೆಯಿಂದ ಆಗಮಿಸುವ ಟೊಮೆಟೊ ಕ್ರಮೇಣವಾಗಿ ಇಳಿಕೆಯಾಗುತ್ತಿದೆ. ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆಯಿದ್ದರು, ನಮ್ಮಲ್ಲಿ ಹವಾಮಾನ ವೈಪರೀತ್ಯಗಳಿಂದ ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಗುಣಮಟ್ಟದ ಟೊಮೆಟೊ ನಿತ್ಯ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಟೊಮೆಟೊ ಲಭ್ಯವಿದ್ದರು, ರೈತರಿಗೆ ಮಾತ್ರ ಸೂಕ್ತ ಬೆಲೆ ಸಿಗದಿರುವುದು ದುರದೃಷ್ಟಕರ ಎಂದರು ತಪ್ಪಾಗಲಾರದು. ತಿಂಗಳುಗಟ್ಟಲೇ ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗೆ ಸರಿಯಾಗಿ ಬೆಲೆ ಸಿಗದೆ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಆದರೆ, ಇದರ ಮಧ್ಯೆ ಒಂದು ದಿನ ಮಾರುಕಟ್ಟೆಯಲ್ಲಿ ನಿಂತು ವ್ಯವಹಾರ ಮಾಡುವ ಮಧ್ಯವರ್ತಿಗಳು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: