HOME » NEWS » District » KOLARA MP AND MALURU MLA HAS FORGET SOCIAL DISTANCE RH

ಸಂಸದ, ಶಾಸಕರಿಂದಲೇ ಸಾಮಾಜಿಕ ಅಂತರ ಪಾಲನೆಯಿಲ್ಲ; ನೂರಾರು ಜನರ ಒಗ್ಗೂಡಿಸಿ ಕಾಮಗಾರಿಗೆ ಚಾಲನೆ, ಹುಟ್ಟುಹಬ್ಬ ಆಚರಣೆ

ಮಹಾಮಾರಿ ಕೊರೋನಾ ತಡೆಗಟ್ಟಲು ಸರ್ಕಾರ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ, ನಮ್ಮ‌ ನಿಮ್ಮೆಲ್ಲರಿಂದ ಕೊರೋನಾ ದೂರ ಹೋಗುತ್ತದೆ ಎಂಬ ಅರಿವು ಜನಪ್ರತಿನಿಧಿಗಳಿಗೂ ಬರಬೇಕಿದೆ. 

news18-kannada
Updated:June 9, 2020, 8:03 AM IST
ಸಂಸದ, ಶಾಸಕರಿಂದಲೇ ಸಾಮಾಜಿಕ ಅಂತರ ಪಾಲನೆಯಿಲ್ಲ; ನೂರಾರು ಜನರ ಒಗ್ಗೂಡಿಸಿ ಕಾಮಗಾರಿಗೆ ಚಾಲನೆ, ಹುಟ್ಟುಹಬ್ಬ ಆಚರಣೆ
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾಮಗಾರಿಗೆ ಚಾಲನೆ ನೀಡಿರುವುದು.
  • Share this:
ಕೋಲಾರ: ದೇಶದಲ್ಲಿ ಕೊರೋನಾ ಲಾಕ್​ಡೌನ್ ಸಡಿಲಿಕೆ ಮಾಡಿದರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಎಲ್ಲರು ಮಾಸ್ಕ್ ಕಡ್ಡಾಯವಾಗಿ ಬಳಸುವಂತೆ ಕೇಂದ್ರ ಆರೋಗ್ಯ ಇಲಾಖೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದೆ‌. ಆದರೆ ನಮ್ಮ ಜನಪ್ರತಿನಿಧಿಗಳೇ ಸಾಮಾಜಿಕ ಅಂತರವನ್ನು ನಿರ್ಲಕ್ಷ್ಯ ಮಾಡುವ ಮೂಲಕ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕಕುಂತೂರು ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಂದೂವರೆ ಕಿಲೋ ಮೀಟರ್ ಉದ್ದದ ರಸ್ತೆಗೆ ಸಂಸದ ಎಸ್ ಮುನಿಸ್ವಾಮಿ, ಮಾಲೂರು ಶಾಸಕ ಕೆವೈ ನಂಜೇಗೌಡ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿ ಭೂಮಿ ಪೂಜೆ ನೆರವೇರಿಸಿದರು, ಆದರೆ, ಕಾರ್ಯಕ್ರಮದ ಉದ್ದಕ್ಕೂ ಸಾಮಾಜಿಕ ಅಂತರವನ್ನು ಎಲ್ಲರು ನಿರ್ಲಕ್ಷ್ಯ ಮಾಡಿದಂತೆ ಕಂಡುಬಂತು. ಅಕ್ಕಪಕ್ಕದಲ್ಲೆ ನಿಂತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅಲ್ಲದೆ ಕನಿಷ್ಠ ಅಂತರವನ್ನು ಸಂಸದರು ಹಾಗೂ ಶಾಸಕರು ಕಾಯ್ದುಕೊಳ್ಳಲೇ ಇಲ್ಲ. ಮೊದಲೇ ಜಿದ್ದಾ ಜಿದ್ದಿಗೆ ಬಿದ್ದಂತೆ ಒಬ್ಬರ ಮೇಲೊಬ್ಬರು ಆರೋಪಗಳನ್ನ ಮಾಡಿಕೊಳ್ಳುವ ಮುನಿಸ್ವಾಮಿ, ನಂಜೇಗೌಡ ಇಬ್ಬರು ಕಡೆಯ ಬೆಂಬಲಿಗರು ನೂರಕ್ಕು ಹೆಚ್ಚು ಸಂಖ್ಯೆಯಲ್ಲಿ  ಜಮಾಯಿಸಿದ್ದರು. ಅಷ್ಟೇ ಅಲ್ಲದೆ ಸಣ್ಣ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸುವ ಅವಶ್ಯಕತೆಯಿತ್ತೆ ಎಂಬ ಪ್ರಶ್ನೆಯು ಕಾಡುತ್ತದೆ.

ಗುಂಪು ಗುಂಪಾಗಿ ಸೇರಿ ಹುಟ್ಟುಹಬ್ಬ ಆಚರಣೆ

ಜೂನ್ 8 ರಂದು ಮಾಲೂರು ಶಾಸಕ ಕೆವೈ ನಂಜೇಗೌಡ ಅವರ ಹುಟ್ಟುಹಬ್ಬ. ಹೀಗಾಗಿ ಮಾಲೂರು ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಆಯೋಜಿಸಿದ್ದ ಹುಟ್ಟು ಹಬ್ಬದ ವೇದಿಕೆ ಕಾರ್ಯಕ್ರಮದಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಶಾಸಕರು ಮತ್ತೊಮ್ಮೆ ಸಾಮಾಜಿಕ ಅಂತರ ಮರೆತಿದ್ದಾರೆ. ಪಕ್ಕದಲ್ಲೆ ರಕ್ತ ದಾನ ಶಿಬಿರ ಹಾಗು ಬಡ ಚಾಲಕರಿಗೆ ದಿನಸಿ ವಿತರಣೆ ಮಾಡುವಂತಹ ಅರ್ಥಪೂರ್ಣವಾದ  ಕಾರ್ಯಕ್ರಮ ಹಮ್ಮಿಕೊಂಡಿದ್ದ ಶಾಸಕರ ಬೆಂಬಲಿಗರು,  ವೇದಿಕೆ ಕಾರ್ಯಕ್ರಮದಲ್ಲಿ ಗುಂಪು ಗುಂಪಾಗಿ ಸೇರಿ ಕೇಕ್ ಕತ್ತರಿಸುವುದು,  ಪರಸ್ಪರ ತಿನ್ನಿಸಿಕೊಳ್ಳುವುದು, ಹೂವಿನ ಹಾರ ಹಾಕುವುದು, ಶಾಲೂ ಪೇಟ ಹಾಕಿ ಸನ್ಮಾನ ಮಾಡುವುದು  ಕಂಡುಬಂತು.

ಸಾಮಾಜಿಕ ಅಂತರವಿಲ್ಲದೆ ಹುಟ್ಟುಹಬ್ಬ ಆಚರಿಸಿಕೊಂಡ ಮಾಲೂರು ಶಾಸಕ ಕೆ.ವೈ.ನಂಜೇಗೌಡ.


ಇದನ್ನು ಓದಿ: ‘ಕೋವಿಡ್​​-19 ಚಿಕಿತ್ಸೆ ನೀಡದೆ ಅಸಡ್ಡೆ ತೋರುವ ವೈದ್ಯರ ವಿರುದ್ಧ ಅಗತ್ಯ ಕ್ರಮ‘ - ಸಿಇಓ ನಾಗರಾಜ್​

ಹೀಗೆಲ್ಲಾ ಮಾಡುವ ಮೂಲಕ ನಮ್ಮ ಜನನಾಯಕರು ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದರೂ ಇವರನ್ನು ಯಾರೂ ಪ್ರಶ್ನೆ ಮಾಡಲ್ಲ. ಮಹಾಮಾರಿ ಕೊರೋನಾ ತಡೆಗಟ್ಟಲು ಸರ್ಕಾರ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ, ನಮ್ಮ‌ ನಿಮ್ಮೆಲ್ಲರಿಂದ ಕೊರೋನಾ ದೂರ ಹೋಗುತ್ತದೆ ಎಂಬ ಅರಿವು ಜನಪ್ರತಿನಿಧಿಗಳಿಗೂ ಬರಬೇಕಿದೆ.
Youtube Video
First published: June 9, 2020, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories