HOME » NEWS » District » KOLAR POLICE ARREST SIX PERSONS FOR SELLING REMDESIVIR IN BLACK MARKET MAK

CoronaVirus: ಕಾಳಸಂತೆಯಲ್ಲಿ Remdisivir ಮಾರಾಟ ದಂಧೆ; ಕೋಲಾರ ಪೊಲೀಸರಿಂದ 6 ಜನರ ಬಂಧನ!

ಆರೋಪಿಗಳನ್ನು ಲ್ಯಾಬ್ ತಂತ್ರಜ್ಞ ಶಿವ ಕುಮಾರ್, ನರ್ಸಿಂಗ್ ಮೇಲ್ವಿಚಾರಕ ನಾಗರಾಜ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಅವರಿಂದ ರೆಮ್‌ಡೆಸಿವಿರ್‌ನ ನಾಲ್ಕು ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

news18-kannada
Updated:May 18, 2021, 3:10 PM IST
CoronaVirus: ಕಾಳಸಂತೆಯಲ್ಲಿ Remdisivir ಮಾರಾಟ ದಂಧೆ; ಕೋಲಾರ ಪೊಲೀಸರಿಂದ 6 ಜನರ ಬಂಧನ!
ರೆಮಿಡಿಸಿವರ್​ ಔಷಧ.
  • Share this:
ಕೋಲಾರ (ಮೇ 18); ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಲ್ಲದೆ, ರೆಮ್​ಡಿಸಿವಿರ್ ಸೇರಿದಂತೆ ಪ್ರಮುಖ ಔಷಧಗಳ ಅಲಭ್ಯತೆಯೂ ರೋಗಿಗಳನ್ನು ಕಾಡುತ್ತಿದೆ. ಈ ಔಷಧಕ್ಕೆ ಬೇಡಿಕೆ ಅಧಿಕವಾಗಿದ್ದು, 10 ರಿಂದ 25 ಸಾವಿರದ ವರೆಗೆ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ನಡುವೆ ರೆಮ್​ಡಿಸಿವಿರ್ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟವ ದೊಡ್ಡ ಜಾಲವೇ ಸೃಷ್ಟಿಯಾಗಿದ್ದು ಕೆಲವು ವೈದ್ಯರೂ ಸಹ ಈ ಜಾಲದಲ್ಲಿ ಭಾಗಿಯಾಗಿಯಾಗಿರುವುದು ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ. ಇಂದು ಸಹ ಆಂಟಿ-ವೈರಲ್ ರೆಮ್‌ಡೆಸಿವಿರ್‌ ಇಂಜೆಕ್ಷನ್ ಅನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರು ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ನೇರ ಮೇಲ್ವಿಚಾರಣೆಯಲ್ಲಿ ಆರು ಜನರನ್ನು ಬಂಧಿಸಿದೆ ಮತ್ತು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೆಮ್‌ಡೆಸಿವಿರ್‌ ಇಂಜೆಕ್ಷನ್‌ನ ಆರು ಬಾಟಲುಗಳನ್ನು ವಶಪಡಿಸಿಕೊಂಡಿದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಬಂಧನಕ್ಕೊಳಗಾದವರಲ್ಲಿ ಲ್ಯಾಬ್ ತಂತ್ರಜ್ಞ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಅಧೀಕ್ಷಕ ಮತ್ತು ಔಷಧಿಕಾರರು ಸೇರಿದ್ದಾರೆ. ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ತಂಡವನ್ನು ರಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಹೆಚ್ಚುವರಿ ಎಸ್‌ಪಿ ನಾರಾಯಣಸ್ವಾಮಿ, ಸಹಾಯಕ ಎಸ್‌ಪಿ ಸಾಹಿಲ್ ಬಾಗ್ಲಾ, ಡಿವೈಎಸ್‌ಪಿ ಕೆ.ಸಿ.ಗಿರಿ, ಇನ್ಸ್‌ಪೆಕ್ಟರ್ ರಂಗಸಾಮಯ್ಯ ಅವರನ್ನು ಒಳಗೊಂಡ ಸೈಬರ್ ಅಪರಾಧ ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದರು. ಅವರು ಆರೋಪಿಗಳ ಮೊಬೈಲ್ ಸಂಖ್ಯೆ, ಇತರ ಚಲನವಲನಗಳನ್ನು ಮತ್ತು ಸಂಪರ್ಕಗಳನ್ನು ಟ್ರ್ಯಾಕ್ ಮಾಡಿದ್ದರು.

ಆರೋಪಿಗಳನ್ನು ಲ್ಯಾಬ್ ತಂತ್ರಜ್ಞ ಶಿವ ಕುಮಾರ್, ನರ್ಸಿಂಗ್ ಮೇಲ್ವಿಚಾರಕ ನಾಗರಾಜ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಅವರಿಂದ ರೆಮ್‌ಡೆಸಿವಿರ್‌ನ ನಾಲ್ಕು ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅದೇ ತಂಡವು ಮತ್ತೊಂದು ಪ್ರಕರಣದಲ್ಲಿ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಸಿ ಅಸಿಸ್ಟೆಂಟ್ ಆಗಿರುವ ನಾಗೇಶ್ ಮತ್ತು ನವೀನ್, ಸಂದೀಪ್ ಮತ್ತು ದರ್ಶನ್ ಅವರನ್ನು ಬಂಧಿಸಿ ರೆಮ್‌ಡೆಸಿವಿರ್‌ನ ಎರಡು ಬಾಟಲುಗಳನ್ನು ವಶಪಡಿಸಿಕೊಂಡಿದೆ.

ಆರೋಪಿಗಳು ರೆಮ್‌ಡೆಸಿವಿರ್‌ನ ಒಂದು ಬಾಟಲಿಗೆ 40 ಸಾವಿರ ರೂಗಳಷ್ಟು ದರವನ್ನು ವಿಧಿಸಿದ್ದರು ಎಂದು ಪೊಲೀಸರು ಕಂಡುಹಿಡಿದಿದ್ದಾರೆ. ಅಕ್ರಮ ಮಾರಾಟವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ತಂಡವನ್ನು ಸೆಂಟ್ರಲ್‌ ರೇಂಜ್‌ ಇನ್ಸ್‌ಪೆಕ್ಟರ್ ಜನರಲ್ ಎಂ. ಚಂದ್ರಶೇಖರ್ ಶ್ಲಾಘಿಸಿದ್ದಾರೆ. ಅಕ್ರಮ ಮಾರಾಟದ ಹಿಂದಿನ ಸೂತ್ರಧಾರಿಗಳನ್ನು ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.ಕರ್ನಾಟಕದಲ್ಲಿ ಕೊರೋನಾ ಅಬ್ಬರ:

ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಅಪಾಯದ ಮಟ್ಟ ಮೀರಿದೆ. ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್ 5 ಜಿಲ್ಲೆಗಳ ಪೈಕಿ ಕರ್ನಾಟಕದ 2 ಜಿಲ್ಲೆಗಳು ಗುರುತಿಸಿಕೊಂಡಿವೆ. ಬಳ್ಳಾರಿ ಮತ್ತು ಉತ್ತರ ಕನ್ನಡದಲ್ಲಿ ಅತಿಹೆಚ್ಚು ಕೊರೋನಾ ಪಾಸಿಟಿವಿಟಿ ರೇಟ್ ಇರುವುದು ಪತ್ತೆಯಾಗಿದೆ. ಇದರ ನಡುವೆ ಕೊರೋನಾ ಸೋಂಕು ಹೆಚ್ಚಳದಿಂದ ಒತ್ತಡಕ್ಕೆ ಒಳಗಾಗಿ ಕಡಿಮೆ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೈನಂದಿನ ಟೆಸ್ಟ್​ ಪ್ರಮಾಣ 1 ಲಕ್ಷಕ್ಕೂ ಕಡಿಮೆಯಾಗಿದೆ.

ಇದನ್ನೂ ಓದಿ: Karnataka Coronavirus: ಕರ್ನಾಟಕದಲ್ಲಿ ಅಪಾಯದ ಮಿತಿ ಮೀರಿದ ಕೊರೋನಾ ಪಾಸಿಟಿವಿಟಿ ರೇಟ್; ಟೆಸ್ಟ್ ಪ್ರಮಾಣ ಕಡಿತಗೊಳಿಸಲು ಸರ್ಕಾರ ಸೂಚನೆ

ಸೋಮವಾರ ಕರ್ನಾಟಕದಲ್ಲಿ ಕೇವಲ 97,336 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಇಷ್ಟು ಕಡಿಮೆ ಟೆಸ್ಟ್ ಮಾಡಿದರೂ 38,603 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕರ್ನಾಟಕದ ಕೊರೋನಾ ಪಾಸಿಟಿವಿಟಿ ರೇಟ್ 39.70ಗೆ ಏರಿಕೆಯಾಗಿದೆ. ಕರ್ನಾಟಕ ಸರ್ಕಾರ ಮಾಡುತ್ತಿರುವ ಎಡವಟ್ಟು ಅನಾಹುತದಿಂದ ಟೆಸ್ಟ್ ಸಂಖ್ಯೆ ಇಳಿಮುಖವಾದರೆ ಸಾವು, ಸೋಂಕು ಎರಡೂ ಉಲ್ಬಣಿಸುತ್ತದೆ.
Youtube Video

ಸೋಂಕು ಪತ್ತೆ ವಿಳಂಬದಿಂದ ಇನ್ನಷ್ಟು ಮಂದಿಗೆ ಸೋಂಕು ಅಂಟುತ್ತದೆ. ಬೇಗ ಕೊರೋನಾ ಸೋಂಕು ಪತ್ತೆಯಾಗದಿದ್ದರೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತದೆ. ಸೋಂಕು ಉಲ್ಬಣಿಸಿದಾಗ ಸೋಂಕು ಪತ್ತೆಯಾದರೆ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರಲಿದೆ.
Published by: MAshok Kumar
First published: May 18, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories