HOME » NEWS » District » KOLAR MP FEEDS MONKEYS ON ANTARAGANGE HILLS RRK SKTV

ಬಿಸಿಲಿನಿಂದ ಕಂಗೆಟ್ಟ ಪ್ರಾಣಿಗಳಿಗೆ ಆಹಾರ-ನೀರು ವ್ಯವಸ್ಥೆ ಮಾಡಿದ ಕೋಲಾರ ಸಂಸದ

ಅಂತರಗಂಗೆ ಬೆಟ್ಟದಲ್ಲಿ ನೂರಾರು ಕೋತಿಗಳು ವಾಸವಾಗಿವೆ. ಬಿಸಿಲಿನ ಹೊಡೆತಕ್ಕೆ ಸಿಲುಕಿರುವ ಕೋತಿಗಳು ಬೆಟ್ಟದಲ್ಲಿ ನೀರು ಹಾಗೂ ಅಹಾರ ಸಿಗದೇ ಪರದಾಟ ಅನುಭವಿಸುತ್ತಿರುವುದು  ಗಮನಿಸಿದ ಕೋಲಾರ ಸಂಸದ ಎಸ್ ಮುನಿಸ್ವಾಮಿ ಬೆಟ್ಟದಲ್ಲಿ ವಾಸಿಸುತ್ತಿರುವ ಕೋತಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

news18-kannada
Updated:April 18, 2021, 8:16 AM IST
ಬಿಸಿಲಿನಿಂದ ಕಂಗೆಟ್ಟ ಪ್ರಾಣಿಗಳಿಗೆ ಆಹಾರ-ನೀರು ವ್ಯವಸ್ಥೆ ಮಾಡಿದ ಕೋಲಾರ ಸಂಸದ
ಕೋತಿಗೆ ಹಣ್ಣು ನೀಡುತ್ತಿರುವ ಶಾಸಕ ಮುನಿಸ್ವಾಮಿ
  • Share this:
ಕೋಲಾರ: ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ನೂರಾರು ಕೋತಿಗಳು ವಾಸ್ತವಿದ್ದು, ಬೇಸಿಗೆಯಲ್ಲಿ ಇವುಗಳಿಗೆ ನೀರು, ಆಹಾರ ಇಲ್ಲದೆ ಹತ್ತಾರು ಸಂಖ್ಯೆಯಲ್ಲಿ ಕೋತಿಗಳು ಸಾವನ್ನಪ್ಪುತ್ತಿದೆ. ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯ ಹಾಗು ಕಾಲಕಾಲಕ್ಕೆ ಮರಗಳ ನಾಶ ಮುಂದುವರೆದಿದ್ದು, ಇವೆಲ್ಲದರ ಪರಿಣಾಮ ಕೋತಿಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇದೀಗ ಪ್ರಾಣಿಗಳಿಗೆ ಕೈಲಾದಷ್ಟು ಆಹಾರ ಹಾಗು ನೀರಿನ ವ್ಯವಸ್ಥೆ ಮಾಡುವ ಮೂಲಕ ಕೋಲಾರ ಸಂಸದ ಎಸ್ ಮುನಿಸ್ವಾಮಿ ಇತರರಿಗೆ ಮಾದರಿಯಾಗಿದ್ದಾರೆ.

ಬಯಲು ಸೀಮೆ ಕೋಲಾರದಲ್ಲಿ ಬೇಸಿಗೆ ಸಮಯದಲ್ಲಿ ತಾಪಮಾನ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ.  ಬೇಸಿಗೆಯ  ಸೂರ್ಯನ ಶಿಕಾರಿಗೆ ಜನರು ಹೈರಾಣಾಗಿದ್ದು,  ಸೂರ್ಯನ ತಾಪ ಕಡಿಮೆ ಮಾಡಿಕೊಳ್ಳಲು ಜನರು ತಂಪು ಪಾನೀಯಗಳು ಹಾಗು ಹಣ್ಣು ಹಂಪಲು ಸೇವಿಸಿವುದರ ಮೊರೆ ಹೋಗಿದ್ದಾರೆ. ಬಿಸಿಲಿನ ತಾಪಕ್ಕೆ ಮನುಷ್ಯರೆ ಅಲ್ಲದೇ ಪ್ರಾಣಿ, ಪಕ್ಷಿಗಳು ಕೊಡ ಸಂಕಟ ಅನುಭವಿಸುತ್ತಿವೆ.

ಕೋಲಾರ ಹೊರವಲಯದಲ್ಲಿರುವ ದಕ್ಷಿಣ ಕಾಶೀಕ್ಷೇತ್ರ ಎಂದು ಖ್ಯಾತಿ ಗಳಿಸಿರುವ,  ಅಂತರಗಂಗೆ ಬೆಟ್ಟದಲ್ಲಿ ನೂರಾರು ಕೋತಿಗಳು ವಾಸವಾಗಿವೆ. ಬಿಸಿಲಿನ ಹೊಡೆತಕ್ಕೆ ಸಿಲುಕಿರುವ ಕೋತಿಗಳು ಬೆಟ್ಟದಲ್ಲಿ ನೀರು ಹಾಗೂ ಅಹಾರ ಸಿಗದೇ ಪರದಾಟ ಅನುಭವಿಸುತ್ತಿರುವುದು  ಗಮನಿಸಿದ ಕೋಲಾರ ಸಂಸದ ಎಸ್ ಮುನಿಸ್ವಾಮಿ ಬೆಟ್ಟದಲ್ಲಿ ವಾಸಿಸುತ್ತಿರುವ ಕೋತಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಏಪ್ರಿಲ್ 16 ರಂದು  ಸಂಸದ ಮುನಿಸ್ವಾಮಿ  ಹುಟ್ಟು ಹಬ್ಬದ ಪ್ರಯುಕ್ತ  ಬಿಜೆಪಿ ಕಾರ್ಯಕರ್ತರೊಂದಿಗೆ ಅಂತರಗಂಗೆ ಬೆಟ್ಟಕ್ಕೆ ತೆರಳಿ  ಕೋತಿಗಳಿಗೆ ಬಾಳೆಹಣ್ಣು, ಕಲ್ಲಂಗಡಿ,  ಸೌತೆಕಾಯಿ ಸೇರಿದಂತೆ ಹಲವು ಹಣ್ಣುಗಳನ್ನು ಖುದ್ದಾಗಿ ವಿತರಿಸಿದರು. ಜೊತೆಗೆ ಬೆಟ್ಟದ ಗುಂಡಿಗಳಲ್ಲಿ  ಖಾಸಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ. ಬೇಸಿಗೆ ಮುಗಿಯುವ ತನಕ ಪ್ರತಿನಿತ್ಯ ವಿವಿಧ ಹಣ್ಣು ಹಾಗು ತರಕಾರಿಗಳನ್ನು ತಂದು ಕೋತಿಗಳಿಗೆ ವಿತರಣೆ ಮಾಡಲು ತಮ್ಮ ಆಪ್ತರಿಗೆ ಸೂಚನೆ ನೀಡಿದ್ದು, ನೀರಿನ ವ್ಯವಸ್ತೆಯನ್ನು ಮಾಡಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ, ಬೇಸಿಗೆ ಮುಗಿಯುವ ತನಕ ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವುದಾಗಿ   ತಿಳಿಸಿದ್ದು, ಬೆಟ್ಟಕ್ಕೆ ಬರುವ ದೇವರ ಭಕ್ತರು,  ಪ್ರವಾಸಿಗರು ಇಲ್ಲಿ ವಾಸಿಸುತ್ತಿರುವ ಪ್ರಾಣಿಪಕ್ಷಗಳಿಗೆ ಕೈಲಾದಷ್ಟು ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಅಲ್ಲದೆ ಬೇಸಿಗೆ ಹಿನ್ನಲೆ ಎಲ್ಲರು ತಮ್ಮ ತಮ್ಮ ಮನೆಗಳ ಮೇಲೆ ಪಕ್ಷಿಗಳಿಗೆ ಒಂದಿಷ್ಟು ನೀರು ಮತ್ತು ಆಹಾರ ವನ್ನ ಇರುವಂತೆಯು ಮನವಿ ಮಾಡಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಹುಟ್ಟು ಹಬ್ಬದ ದಿನ ದುಂದುವೆಚ್ಚ ಮಾಡದೆ, ಬೇಸಿಗೆಯಲ್ಲಿ ಕೋತಿಗಳಿಗೆ ಆಹಾರ ನೀರು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದನ್ನು ಹಲವರು ಬೆಂಬಲಿಸಿದ್ದಾರೆ. ನಮ್ಮ ರಾಜಕಾರಣಿಗಳು ಇಂತಹ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
Published by: Soumya KN
First published: April 18, 2021, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories