HOME » NEWS » District » KOLAR MAN KILLED IN FRONT OF THE TEMPLE RRK MAK

ಕೋಲಾರ: ದೇವರ ಕಾರ್ಯಕ್ಕೆ ಪೆಂಡಾಲ್ ಶಾಮಿಯಾನ ಹಾಕಿದ್ದ ವ್ಯಕ್ತಿ ಅದೇ ದೇಗುಲದ ಎದುರು ಭೀಕರ ಹತ್ಯೆ

ನಾಯಕರಹಳ್ಳಿ ಗ್ರಾಮದ ಅಶೋಕ ಮತ್ತು ಮೃತ ವೆಂಕಟರಾಮು ನಡುವೆ ಹಳೇ ವೈಷಮ್ಯ ಇತ್ತು. ಅದು‌ ಮೊನ್ನೆ ರಾತ್ರಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

news18-kannada
Updated:January 16, 2021, 8:30 AM IST
ಕೋಲಾರ: ದೇವರ ಕಾರ್ಯಕ್ಕೆ ಪೆಂಡಾಲ್ ಶಾಮಿಯಾನ ಹಾಕಿದ್ದ ವ್ಯಕ್ತಿ ಅದೇ ದೇಗುಲದ ಎದುರು ಭೀಕರ ಹತ್ಯೆ
ಸಾಂದರ್ಭಿಕ ಚಿತ್ರ.
  • Share this:
ಕೋಲಾರ: ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಎಳ್ಳು ಬೆಲ್ಲ ತಿಂದು‌ ಒಳ್ಳೆಯ ಮಾತಾಡಿ,  ಒಳ್ಳೆಯದು ಯೋಚಿಸಿ ಎನ್ನುವುದು ಸಂಕ್ರಾಂತಿ ಹಬ್ಬದ ಮುಖ್ಯ ಸಂದೇಶ. ಆದರೆ, ಮಕರ ಸಂಕ್ರಾಂತಿಯಂದು ಅಯ್ಯಪ್ಪನ ಶಬರಿಮಲೆಯ ಕ್ಷೇತ್ರದಲ್ಲೂ ವಿಶೇಷ ಪೂಜೆ ನೆರವೇರಿಸಿ, ಸಂಜೆ ಅಯ್ಯಪ್ಪ‌ ಸ್ವಾಮಿ ಜ್ಯೋತಿ  ಕಾಣುವ ಸಮಯದಲ್ಲಿ ಕೋಲಾರದಲ್ಲೂ ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರು ಸ್ತಳೀಯವಾಗಿ ಪೂಜಾ ಕಾರ್ಯ ನಡೆಸುವುದು ವಾಡಿಕೆ. ಹೀಗೆ ಅಯ್ಯಪ್ಪ ಸ್ವಾಮಿ ಭಜನೆ ಕಾರ್ಯಕ್ಕೆ ಪೆಂಡಾಲ್ ಹಾಕಿದ್ದ, ಶಾಮಿಯಾನ ಮಾಲೀಕನೊಬ್ಬ ಅದೇ ಸ್ಥಳದಲ್ಲಿ ಭೀಕರವಾಗಿ ಕೊಲೆಯಾಗಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ  ನಾಯಕರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪಕ್ಕದಲ್ಲೇ ಇರುವ  ವೇಣುಗೋಪಾಲಪುರ ವೆಂಕಟರಾಮು ಕೊಲೆಯಾದ ಶಾಮಿಯಾನ ಮಾಲೀಕ.

ನಾಯಕರಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ದಿನ ನಡೆದ ಶಬರಿಮಲೆ ಪೂಜೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ವೆಂಕಟರಾಮು ಶಾಮಿಯಾನ ಹಾಕಿದ್ದ. ನಾಯಕರಹಳ್ಳಿ ಗ್ರಾಮದ ಅಶೋಕ ಮತ್ತು ಮೃತ ವೆಂಕಟರಾಮು ನಡುವೆ ಹಳೇ ವೈಷಮ್ಯ ಇತ್ತು. ಅದು‌ ಮೊನ್ನೆ ರಾತ್ರಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಬೈಕ್ ಮೇಲೆ ಇದ್ದ ವೆಂಕಟರಾಮು ಮೇಲೆ ಕಬ್ಬಿಣದ ರಾಡ್ ನಿಂದ ಅಶೋಕ್ ಹಿಂಬದಿಯಿಂದ ಹಲ್ಲೆ ಮಾಡಿದ ಹಿನ್ನಲೆ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವದಿಂದಾಗಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಹತ್ಯೆಯಿಂದ ಕೆರಳಿದ ಗ್ರಾಮಸ್ಥರಿಂದ ಧಾಂದಲೆ:

ತಡ ರಾತ್ರಿಯಲ್ಲಿ‌ ನಡೆದ ಕೊಲೆಯಿಂದಾಗಿ ಎರಡು  ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮೃತಪಟ್ಟ ವೆಂಕಟರಾಮು ಸ್ನೇಹಿತರು ಹಾಗು ಸಂಬಂಧಿಕರು ನಾಯಕರಹಳ್ಳಿ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಸಿಕ್ಕ ಸಿಕ್ಕ ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಎರಡು ಕಾರುಗಳು ಎರಡು ಆಟೋ ಮತ್ತು ನಾಲ್ಕು  ಬೈಕ್ ಗಳನ್ನು ಪುಡಿಪುಡಿ ಮಾಡಿ, ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಬಂದಿದ್ದರಿಂದ ವಿಕೋಪಕ್ಕೆ ತಿರುಗಿದ್ದ ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿದೆ.

ಆದರೆ, ಗ್ರಾಮದಲ್ಲಿನ ಪರಿಸ್ಥಿತಿ  ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡೂ ಗ್ರಾಮದ  ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಮೊನ್ನೆ ರಾತ್ರಿಯೆ ಸ್ಥಳಕ್ಕೆ ಕೆಜಿಎಫ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಸಹ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Covid-19 Vaccine: ಕೊರೋನಾ ಲಸಿಕೆ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ; ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ

ಮೃತ ವೆಂಕಟರಾಮು ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಆಗಾಗ್ಗ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.  ಆರೋಪಿ ಅಶೋಕ್  ಇಬ್ಬರ ಮಧ್ಯೆಯು ಒಂದು ವರ್ಷದ ಹಿಂದೆ ಗಲಾಟೆಗಳು ನಡೆದಿತ್ತಂತೆ. ನೆನ್ನೆಯು ಹಣದ ವ್ಯವಹಾರವನ್ನೆ ಮಾತನಾಡುತ್ತ ಇಬ್ಬರು ಜಗಳ ಆರಂಭಿಸಿದ್ದು, ಬೈಕ್ ನಲ್ಲಿ ಕುಳಿತಿದ್ದ ವೆಂಕಟರಾಮು ಮೇಲೆ ರಾಡ್ ನಿಂದ ಮನ ಬಂದಂತೆ ಹಲ್ಲೆ ಮಾಡಿದ್ದ ಅಶೊಕ್ ಸ್ತಳದಿಂದ ಪರಾರಿಯಾಗಿದ್ದ. ನಂತರ ರಾತ್ರಿಯೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.

ಒಟ್ಟಿನಲ್ಲಿ ಶಬರಿಮಲೆಗೆ ಹೊರಡುವರ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಿದ್ದ ಶಾಮಿಯಾನ ಮಾಲೀಕನೆ ಅದೇ ದೇಗುಲ‌ ಎದುರೇ ಬರ್ಬರವಾಗಿ ಕೊಲೆಯಾಗಿದ್ದು, ನೊಂದ ಮೃತ, ಪೋಷಕರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೆಂದು ಆಗ್ರಹಿಸಿದ್ದಾರೆ.  ಇದೀಗ ಇಬ್ಬರ ನಡುವಿನ ವೈಶಮ್ಯ ಕೊಲೆಯಲ್ಲಿ ಅಂತ್ಯವಾಗಿದ್ದು,  ಅದರಿಂದಲೇ‌‌ ಎರಡು ಗ್ರಾಮಗಳ ನಡುವೆ ಬಿಗುವಿನ‌ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
Published by: MAshok Kumar
First published: January 16, 2021, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories