ಕೋಲಾರದಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಏರಿಕೆ; ಇಲ್ಲಿ ಜಾರಿಯಾಗುತ್ತಾ ಸೆಮಿ ಲಾಕ್​ಡೌನ್?

ಕೋಲಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ನಗರ ಕೇಂದ್ರ ಕೋಲಾರ ಸೇರಿ ಕೆಲ ತಾಲೂಕುಗಳಲ್ಲಿ ಸೀಮಿತ ಲಾಕ್ ಡೌನ್ ಜಾರಿ ಮಾಡಲು ಜಿಲ್ಲಾಡಳಿತ ಯೋಚಿಸಿದೆ.

news18-kannada
Updated:July 13, 2020, 8:17 AM IST
ಕೋಲಾರದಲ್ಲಿ ಸೋಂಕಿತರ ಸಂಖ್ಯೆ ನಿತ್ಯ ಏರಿಕೆ; ಇಲ್ಲಿ ಜಾರಿಯಾಗುತ್ತಾ ಸೆಮಿ ಲಾಕ್​ಡೌನ್?
ಕೋಲಾರದ ಶ್ರೀ ನರಸಿಂಹರಾಜ ಜಿಲ್ಲಾಸ್ಪತ್ರೆ
  • Share this:
ಕೋಲಾರ: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ರಾಜಧಾನಿ ಬೆಂಗಳೂರು ಪಕ್ಕದಲ್ಲೇ ಇರುವ ಕೋಲಾರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸತತವಾಗಿ 10 ಕ್ಕು ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ಮೇ 12 ರಂದು ಕೋಲಾರದಲ್ಲಿ ಮೊದಲು ಸೋಂಕಿತರು ಪತ್ತೆಯಾಗಿದ್ದು ಜುಲೈ 12 ವರೆಗೆ 287 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 150 ಸಕ್ರಿಯ ಪ್ರಕರಣಗಳಿದ್ದು, 124 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ, 4 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಭಾನುವಾರದ ಜಿಲ್ಲಾ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್​ನಲ್ಲಿ ಮಾಹಿತಿ ಇದೆ. 

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಹೆಚ್ಚಿದ ಸೋಂಕಿತರು; ಹೆಚ್ಚುವರಿ ಬೆಡ್ ಮೀಸಲಿಡುವ ಸಾಧ್ಯತೆ:

ಜಿಲ್ಲೆಯಲ್ಲಿ ಈವರೆಗೆ ದಾಖಲಾದ 287 ಪ್ರಕರಣಗಳ ಪೈಕಿ ಕೋಲಾರತಾಲೂಕಿನಲ್ಲಿ ಅತಿ ಹೆಚ್ಚು ಬೆಳಕಿಗೆ ಬಂದಿವೆ. ಇಲ್ಲಿ 132 ಪ್ರಕರಣಗಳು ಈವರೆಗೆ ದಾಖಲಾಗಿರುವುದು. ಕೋಲಾರ 132, ಮಾಲೂರು 16, ಬಂಗಾರಪೇಟೆ 35, ಕೆಜಿಎಪ್ 40, ಮುಳಬಾಗಿಲು 42, ಶ್ರೀನಿವಾಸಪುರ 22, ಇದು ತಾಲೂಕುವಾರು ಸೋಂಕಿತರ ಮಾಹಿತಿಯಾಗಿದೆ. ಸೋಂಕಿತರನ್ನ ಕೋಲಾರ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆ, ಹಾಗು‌ ಆರ್ ಎಲ್ ಜಾಲಪ್ಪ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ 112ಕ್ಕೆ ಏರಿಕೆಯಾದ ಕೊರೋನಾ ಪ್ರಕರಣಗಳು; 25 ಕಂಟೈನ್ಮೆಂಟ್ ಜೋನ್​ಗಳಲ್ಲಿ ನಿಗಾ

ಜಿಲ್ಲಾ ಕೇಂದ್ರ ಕೋಲಾರದಲ್ಲಿ ಹೆಚ್ಚೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಜನರು ಕೊರೊನಾ ನಿಯಮಗಳನ್ನು ಸ್ವಯಂ ಗಾಳಿಗೆ ತೂರುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ  200 ಬೆಡ್​ಗಳನ್ನ ಕೋವಿಡ್ ರೋಗಿಗಳಿಗೆ ಮೀಸಲಿಟ್ಟಿದ್ದು ಇದರ ಸಂಖ್ಯೆ ಜಿಲ್ಲಾಡಳಿತ ಏರಿಸುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಜಾರಿಯಾಗುತ್ತಾ ಸೆಮಿ ಲಾಕ್ ಡೌನ್?

ಕೋಲಾರ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ಕಾರ್ಯನಿರ್ವಹಣೆ ಮಾಡುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಹಗಲಿರುಳು ಮಾದರಿಗಳ ಪರೀಕ್ಷೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಲ್ಯಾಬ್ ಆರಂಭವಾದ ಮೊದಲ ದಿನಗಳಲ್ಲಿ ಗರಿಷ್ಠ 150 ಮಾದರಿಗಳನ್ನ ಪರೀಕ್ಷೆ ಮಾಡಲಾಗುತ್ತಿತ್ತು. ಆದರೀಗ ಪರೀಕ್ಷಾ ವರದಿಗಳ‌ ಸಂಖ್ಯೆ 250 ಕ್ಕೆ ಏರಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 16,836 ಮಂದಿಯ ಮಾದರಿಗಳನ್ನ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 14,858  ಮಂದಿಯ ವರದಿ ನಗೆಟಿವ್ ಬಂದಿದೆ. ಜಿಲ್ಲೆಯಾದ್ಯಂತ ಸೋಂಕಿತರ ಪ್ರಥಮ, ದ್ವಿತೀಯ 3565 ಮಂದಿ, ಸಂಪರ್ಕಿತರನ್ನ ನಿಗಾದಲ್ಲಿ ಇರಿಸಿ, ಪತ್ತೆಹಚ್ಚಿ ಕ್ವಾರಂಟೈನ್ ಮಾಡಲಾಗಿದೆ.ಇದನ್ನೂ ಓದಿ: ಮಂಡ್ಯದಲ್ಲಿ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವ ಸಾಫ್ಟ್​ವೇರ್ ಯುವತಿಆದರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ನಗರ ಕೇಂದ್ರ ಕೋಲಾರ ಸೇರಿ ಕೆಲ ತಾಲೂಕುಗಳಲ್ಲಿ ಸೀಮಿತ ಲಾಕ್ ಡೌನ್ ಜಾರಿಯಾಗುವ ಲಕ್ಷಣಗಳು ಕಂಡುಬರುತ್ತಿದೆ, ಈಗಾಗಲೇ ಬೆಂಗಳೂರಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದ್ದು, ಬೇರೆ ಕೆಲ ಜಿಲ್ಲೆಗಳಲ್ಲೂ ಲಾಕ್ ಡೌನ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸೋಂಕು ತಡೆಗಟ್ಟುವ ಸಲುವಾಗಿ ಕೋಲಾರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಲಾಕ್ ಡೌನ್ ಮಾಡುವ ಚಿಂತನೆಯನ್ನು ಜಿಲ್ಲಾಡಳಿತ ಹೊಂದಿದೆ ಎನ್ನಲಾಗುತ್ತಿದೆ. ಈ ಕುರಿತು ಕೋಲಾರ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಇನ್ನೂ ಅಧಿಕೃತ ಸೂಚನೆ ನೀಡಿಲ್ಲವಾದರೂ, ಇವತ್ತು ಸೋಮವಾರ ಸಂಜೆಯೊಳಗೆ ಸೀಮಿತ ಲಾಕ್ ಡೌನ್ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
Published by: Vijayasarthy SN
First published: July 13, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading