• Home
  • »
  • News
  • »
  • district
  • »
  • Kolar Coronavirus Updates: ಕೋಲಾರದಲ್ಲಿ ಕೋವಿಡ್​​-19 ಆರ್ಭಟ: ಒಂದೇ ದಿನ 18 ಕೇಸ್​​, ನೂರಕ್ಕೇರಿದ ಸೋಂಕಿತರ ಸಂಖ್ಯೆ

Kolar Coronavirus Updates: ಕೋಲಾರದಲ್ಲಿ ಕೋವಿಡ್​​-19 ಆರ್ಭಟ: ಒಂದೇ ದಿನ 18 ಕೇಸ್​​, ನೂರಕ್ಕೇರಿದ ಸೋಂಕಿತರ ಸಂಖ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು, ಜಿಲ್ಲೆಯಲ್ಲಿ ಇದುವರೆಗೂ 10,757 ಮಂದಿಯನ್ನು ಕೋವಿಡ್​​-19 ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 104 ಕೇಸುಗಳು ಮಾತ್ರ ಪಾಸಿಟಿವ್​​ ಬಂದಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 929 ಮಂದಿ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 752 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಮುಂದೆ ಓದಿ ...
  • Share this:

ಕೋಲಾರ(ಜೂ.29): ರಾಜ್ಯದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮೆರೆಯುತ್ತಿದೆ. ಇದೇ ಮೊದಲ ಬಾರಿಗೆ ಕೋಲಾರದಲ್ಲಿ ಅತೀಹೆಚ್ಚು ಕೊರೋನಾ ವೈರಸ್​​ ಕೇಸುಗಳು ದಾಖಲಾಗಿವೆ. ನಿನ್ನೆ ಒಂದೇ ದಿನ 14 ಮಂದಿಗೆ ಕೋವಿಡ್​​-19 ಕಾಣಿಸಿಕೊಂಡ ಪರಿಣಾಮ ಸೋಂಕಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ.


ಆರೋಗ್ಯ ಇಲಾಖೆ ಹೆಲ್ತ್​​​ ಬುಲೆಟಿನ್​​ ಪ್ರಕಾರ 104 ಮಂದಿ ಪೈಕಿ 46 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 57 ರೋಗಿಗಳಿಗೆ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಮಾರಕ ಕೊರೋನಾಗೆ ಇಬ್ಬರು ಅಸುನೀಗಿದ್ದಾರೆ.


ಇನ್ನು, ಜಿಲ್ಲೆಯಲ್ಲಿ ಇದುವರೆಗೂ 10,757 ಮಂದಿಯನ್ನು ಕೋವಿಡ್​​-19 ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 104 ಕೇಸುಗಳು ಮಾತ್ರ ಪಾಸಿಟಿವ್​​ ಬಂದಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 929 ಮಂದಿ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 752 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.


ಕೋಲಾರಕ್ಕೆ ಅಂತರ್​​ರಾಜ್ಯ ಪ್ರಯಾಣ ಹಿನ್ನಲೆಯಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಶನಿವಾರ ಒಂದೇ ಕುಟುಂಬದ ಆರು ಮದಿಗೆ ಕೊರೋನಾ ಬಂದಿದೆ. ಇದರಲ್ಲಿ ಒಬ್ಬರಿಗೆ ಆಂಧ್ರದ ಕುಪ್ಪಂ ಮೂಲದಿಂದ ಸೋಂಕು ತಗುಲಿದೆ.


ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೋವಿಡ್​​-19 ತೀವ್ರತೆ; ಒಂದೇ ದಿನ 19,459 ಕೇಸ್​ ಪತ್ತೆ; 5,48,318 ಸೋಂಕಿತರು


ಲಾಕ್​ಡೌನ್​​ ಸಡಿಲಗೊಳಿಸಿದ ಬಳಿಕ ಬೇರೆ ರಾಜ್ಯಗಳಿಂದ ಕೋಲಾರಕ್ಕೆ ನಿತ್ಯ ಸಾವಿರಾರು ಮಂದಿ ಬಂದೋಗುತ್ತಾರೆ. ಇದರಿಂದ ಸ್ಥಳೀಯರಿಗೆ ಕೊರೋನಾ ತಗುಲುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳೊಂದಿಗೆ ಮಾತಾಡಿ ಕೋಲಾರದಲ್ಲಿ ಜನರೇ ಸ್ವಯಂ ಲಾಕ್​ಡೌನ್​​​ ಮಾಡಲು ನಿರ್ಧರಿಸಲಿದ್ದೇವೆ ಎಂದು ಸಂಸದ ಎನ್​​ ಮುನಿಸ್ವಾಮಿ ಹೇಳಿದ್ದಾರೆ.

Published by:Ganesh Nachikethu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು