ತಂದೆ ತಾಯಿಗೆ ಊಟ ಹಾಕಲು ಯೋಗ್ಯತೆ ಇಲ್ಲದವರಿಂದ ಪಾಕಿಸ್ತಾನ ಪರ ಘೋಷಣೆ: ಮುನಿಸ್ವಾಮಿ ಕಿಡಿ

ನಾವೆಲ್ಲ ಭಾರತ ಮಾತೆಯ ಮಕ್ಕಳು. ಭಾರತ ಮಾತೆಗೆ ಅನ್ಯಾಯವಾದರೆ ಸುಮ್ಮನೆ ಸಹಿಸೋಕಾಗಲ್ಲ. ಪಾಕಿಸ್ತಾನ ಜಿಂದಾಬಾದ್ ಎನ್ನುವರು ಇಲ್ಲಿ ಬದುಕಲು ನಾಲಾಯಕ್ ಆಗಿದ್ದಾರೆ ಎಂದು ಎಸ್​ಡಿಪಿಐ ವಿರುದ್ಧ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಟೀಕಿಸಿದ್ದಾರೆ.

ಸಂಸದ ಮುನಿಸ್ವಾಮಿ

ಸಂಸದ ಮುನಿಸ್ವಾಮಿ

  • Share this:
ಕೋಲಾರ: ತಂದೆ ತಾಯಿಗಳಿಗೆ ಊಟ ಹಾಕಲು ಯೋಗ್ಯತೆ ಇಲ್ಲದವರು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆ. ದೇಶದ ವಿರುದ್ದ ಘೋಷಣೆ ಹಾಕಿದರೆ, ತಂದೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಅವರು ಎಸ್‍ಡಿಪಿಐ ಸಂಘಟನೆ ವಿರುದ್ದ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಕುರಿತು ಪ್ರತಿಕ್ರಿಯಿಸುತ್ತಾ ಎಸ್​ಡಿಪಿಐ ಸಂಘಟನೆ ವಿರುದ್ಧ  ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೋಲಾರ ಜಿಲ್ಲಾ ಹಿರಿಯ ಜೆಡಿಎಸ್ ಮುಖಂಡ ಕೆ.ವಿ. ಶಂಕರಪ್ಪ ಅವರ 75ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ನಾವೆಲ್ಲ ಭಾರತ ಮಾತೆಯ ಮಕ್ಕಳು. ಭಾರತ ಮಾತೆಗೆ ಅನ್ಯಾಯವಾದರೆ ಸುಮ್ಮನೆ ಸಹಿಸೋಕಾಗಲ್ಲ. ಪಾಕಿಸ್ತಾನ ಜಿಂದಾಬಾದ್ ಎನ್ನುವರು ಇಲ್ಲಿ ಬದುಕಲು ನಾಲಾಯಕ್ ಆಗಿದ್ದಾರೆ. ಹಾಗೆಂದರೆ ಜನ್ಮ ಕೊಟ್ಟ ತಂದೆ ತಾಯಿನ ಬಿಟ್ಟು ಬೇರೆಯವರು ನಮ್ಮ ತಂದೆ ತಾಯಿ ಎಂದಾಗುತ್ತೆ. ಅಂತಹ ಬೆಳವಣಿಗೆ ಸಹಿಸೋಕೆ ಸಾಧ್ಯವಿಲ್ಲ. ಮುಂದೆ ಇಂತಹ ದೊಂಬರಾಟ ಹೆಚ್ಚಿನ ದಿನ ನಡೆಯೋದಿಲ್ಲ. ನಮ್ಮ ಕಡೆಯ ಯುವಕರು ಇದಕ್ಕೆಲ್ಲಾ ಕಡಿವಾಣ ಹಾಕೋಕೆ ದಷ್ಟ ಪುಷ್ಟರಾಗಿದ್ದಾರೆ. ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಎಸ್​ಡಿಪಿಐ ಸಂಘಟನೆ ಪಾತ್ರವೇನು ಎಂದು ಎಲ್ಲರಿಗು ಗೊತ್ತಿದೆ. ಮೆಕಾನಿಕ್, ಚಿಕನ್ ಅಂಗಡಿ, ಪಂಕ್ಚರ್ ಅಂಗಡಿ ಇಟ್ಟಿಕೊಂಡಿರೋರು ಅವಿದ್ಯಾವಂತರು. ತಂದೆ ತಾಯಿಗೆ ಊಟ ಹಾಕೋಕೂ ಯೋಗ್ಯತೆ ಇಲ್ಲದವರು ಪಾಕಿಸ್ತಾನ ಜಿಂದಾಬಾದ್ ಅಂತಾರೆ. ಇಂತಹ ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಆಗಬೇಕು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ 6 ಸ್ಥಾನ ಗೆದ್ದಿದ್ದಕ್ಕೆ ಸಂಭ್ರಮಾಚರಣೆ ಮಾಡಿ ದೇಶ ವಿರೋಧಿ ಘೋಷಣೆ ಹಾಕಿದ್ದಾರೆ. ಬಿಜೆಪಿಗರು ಆಲದ ಮರ ಇದ್ದಂತೆ. ಸಾವಿರಾರು ಬೆಂಬಲಿಗರು ನಮ್ಮಲ್ಲಿ ಗೆದ್ದಿದ್ದಾರೆ, ಈ ಎಸ್‍ಡಿಪಿಐ ಸಂಘಟನೆಗಳು ನುಗ್ಗೆಕಾಯಿ ಮರಗಳಿದ್ದಂತೆ ಎಂದು ಕೋಲಾರ ಸಂಸದರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕುರುಬ ಸಮಾಜದ ಹೋರಾಟದ ಬಗ್ಗೆ ಶ್ರೀರಾಮುಲು ಹೇಳಿದ್ದೇನು? ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆಯುತ್ತಾರಾ ರಾಮುಲು?

ಕಾಂಗ್ರೆಸ್ ವಿರುದ್ಧ "ಗಾಳಿ" ಆರಂಭವಾಗಿದೆ: ಎಸ್ ಮುನಿಸ್ವಾಮಿ

ಕೋಲಾರ ಜಿಲ್ಲೆಯಲ್ಲಿ 900 ಮಂದಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಯಾರಿಗೋ ಹುಟ್ಟಿರುವ ಮಗುವನ್ನ ನಮ್ಮದು ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಮುನಿಸ್ವಾಮಿ ಕೋಲಾರ ಕಾಂಗ್ರೆಸ್ ನಾಯಕರನ್ನ ಲೇವಡಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಎಲ್ಲೆಡೆ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಜಯಶೀಲರಾಗಿದ್ದು, ಮಾಲೂರು ತಾಲೂಕು ಒಂದರಲ್ಲೇ ನಾವು 300 ಕ್ಕೂ ಹೆಚ್ಚು ಸ್ತಾನಗಳನ್ನ ಗೆದ್ದಿದ್ದೇವೆ. ಮಾಲೂರು ತಾಲೂಕಿನಲ್ಲಿ ಶಾಸಕ ನಂಜೇಗೌಡ 26 ಪಂಚಾಯಿತಿ ಕಾಂಗ್ರೆಸ್ ಪಕ್ಷದ ವಶದಲ್ಲಿದೆ ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಕೇವಲ ಎರಡು-ಮೂರು ಪಂಚಾಯಿತಿ ಮಾತ್ರ ಕಾಂಗ್ರೆಸ್ ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷದ ನಾಯಕರು ಅವರ ಮಕ್ಕಳನ್ನ ಸರಿಯಾಗಿ ನೋಡಿಕೊಳ್ಳಲಿ. ಪುರಸಭೆ ಚುನಾವಣೆಯಲ್ಲಿ ಮಾಡಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲೂ ಕುದುರೆ ವ್ಯಾಪಾರ ಮಾಡೋದು ಬೇಡ. ಈಗಾಗಲೇ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಜನರು ತಿರಸ್ಕಾರ ಮಾಡಿದ್ದಾರೆ. ಶಾಸಕರಾದ ನಂಜೇಗೌಡರು ಎಲ್ಲೆಡೆ ನಾನು ನಾನು ಎಂದು ಹೇಳುತ್ತಾರೆ. ಆದರೆ ಅವರಿಗೆ ರಾಜಕೀಯದಲ್ಲಿ ಅನುಭವ ಇಲ್ಲ. ವಿದ್ಯಾಬ್ಯಾಸದ ಕೊರತೆಯಿತೆ ಎಂದು ಬಿಜೆಪಿ ಸಂಸದ ಮುನಿಸ್ವಾಮಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ: ಮದುವೆಗೆ ಹೊರಟವರು ಮಸಣ ಸೇರಿದರು..!

ಎಸ್ ಮುನಿಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ "ಯಾವುದೋ  ಗಾಳಿಯಿಂದ ಗೆದ್ದಿದ್ದಾರೆ " ಎಂಬ ಹೇಳಿಕೆಯನ್ನ ನಂಜೇಗೌಡ ಅವರು ನೀಡಿದ ಬಳಿಕ , ಮುನಿಸ್ವಾಮಿ ಹಾಗು ನಂಜೇಗೌಡ ಮಧ್ಯೆ ಮಾತಿನ ಯುದ್ದವೇ ನಡೆಯುತ್ತಿದ್ದು. ಸಚಿವ ಸಿಸಿ ಪಾಟೀಲ್ ಅವರ ಎದುರೇ ಇಬ್ಬರೂ ಪರಸ್ವರ ವಾಗ್ವಾದಕ್ಕೆ ಇಳಿದಿದ್ದರು. ಇದೀಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾಲೂರಿನಲ್ಲಿ ಮೇಲುಗೈ ಸಾಧಿಸಿರೊದಾಗಿ ಸಂಸದರು ಹೇಳುತ್ತಿದ್ದು, ಮುಂದೆ ಗ್ರಾಮ ಪಂಚಾಯಿತಿ "ಗಾಳಿಯೇ" ವಿಧಾನಸಭೆ ಚುನಾವಣೆ ವೇಳೆಯೂ ಬೀಸಲಿದೆ ಎಂದು "ಗಾಳಿ" ಪದವನ್ನ ಬಳಸಿ ನಂಜೇಗೌಡರ ಜೊತೆಗಿನ ವಾಗ್ವಾದವನ್ನ ಮುನಿಸ್ವಾಮಿ ಮುಂದುವರೆಸಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: