Kolar: ಕೋಲಾರದಲ್ಲಿ ಬಾಳೆ ತೋಟಕ್ಕೆ ಬೆಂಕಿ ಬಿದ್ದು 5 ಎಕರೆಯ 90 ಟನ್ ಬೆಳೆ ಭಸ್ಮ

Chitradurga | ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದಲ್ಲಿ ರಾತ್ರಿ ಯಾರೋ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಆಕಸ್ಮಿಕವಾಗಿ ಬಾಳೆ ತೋಟಕ್ಕೆ ಬೆಂಕಿ ಆವರಿಸಿದ ಪರಿಣಾಮ 5 ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗೆ ಆಹುತಿಯಾಗಿದೆ.

ಸುಟ್ಟು ಹೋದ ಬಾಳೆ ತೋಟ

ಸುಟ್ಟು ಹೋದ ಬಾಳೆ ತೋಟ

  • Share this:
ಕೋಲಾರ (ಮಾ. 17): ಆಕಸ್ಮಿಕವಾಗಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಫಸಲಿಗೆ ಬಂದು ಬೆಳೆದು ನಿಂತಿದ್ದ,  ಬಾಳೆ ತೋಟ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಎನ್ನುವವರಿಗೆ ಸೇರಿದ 5 ಎಕರೆ ಬಾಳೆ ತೋಟ ಇದಾಗಿದ್ದು,  ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಆಕಸ್ಮಿಕವಾಗಿ ಬಾಳೆ ತೋಟಕ್ಕೆ ಬೆಂಕಿ ಆವರಿಸಿದ ಪರಿಣಾಮ 5 ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗೆ ಆಹುತಿಯಾಗಿದೆ.

ರೈತ ಕೃಷ್ಣಪ್ಪ ಸಾಲ-ಸೋಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಬೇಕಿತ್ತು. ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದುಕೊಂಡಿದ್ದ ರೈತನ ಬಾಳೆ ತೋಟ ಬೆಂಕಿಗಾಹುತಿಯಾಗಿದೆ. ಇನ್ನು ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡಬಲ್ ಡ್ರಿಪ್ ಹಾಗೂ ಸ್ಪ್ರಿಂಕ್ಲರ್‌ಗಳು ಸಹ ಬೆಂಕಿಗಾಹುತಿಯಾಗಿವೆ.

ಇನ್ನು, ವಿಷಯ ತಿಳಿದ ಸ್ಥಳೀಯರು ಹಾಗೂ ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರಾದರೂ ಏನೂ ಪ್ರಯೋಜನ ಆಗಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ ತೂಕದಷ್ಟು ಇಳುವರಿ ನಷ್ಟವಾಗಿದೆ. ಘಟನೆ ನಡೆದ ಸ್ಥಳಕ್ಕೆ ತೋಟಗಾರಿಕೆ ಇಲಾಖೆ  ಅಧಿಕಾರಿಗಳು ಭೇಟಿ ನೀಡಿ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವಂತೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 90 Tone Banana Farm get Fire in Kolar after Fire Accident
ಸುಟ್ಟು ಹೋದ ಬಾಳೆ ತೋಟ


ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೆ ಆಕಸ್ಮಿಕ ಅಗ್ನಿ ಅವಘಡಗಳು ಹೆಚ್ಚುತ್ತಲೆ ಇದೆ. ಪ್ರತಿ ದಿನ ಎಲ್ಲೆಂದರಲ್ಲಿ ಹುಲ್ಲಿನ ಮೆದೆಗೆ ಬೆಂಕಿ ಬೀಳುವುದು, ನೀಲಿಗಿರಿ ತೋಪಿನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಬೆಳೆದು ನಿಂತಿರುವ ಬಾಳೆ ತೋಟಕ್ಕೂ ಕಿಡಿಗೇಡಿಗಳೇ ಬೆಂಕಿ ಹಚ್ಚಿರುವ ಅನುಮಾನವಿದ್ದು, ಮೊದಲು ಪಕ್ಕದಲ್ಲಿನ ಹುಲ್ಲಿಗೆ ಹಾಕಿದ್ದ ಬೆಂಕಿ ಉರಿಯುತ್ತಾ ಬೆಂಕಿ ತಾಕಿರುವ ಅನುಮಾನವೂ ಇದೆ. ಆದರೆ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ ನಂತರವಷ್ಟೆ ಮಾಹಿತಿ ತಿಳಿಯಬೇಕಿದೆ.

ಒಟ್ಟಿನಲ್ಲಿ ಕೋಲಾರದಲ್ಲಿ ಅಗ್ನಿ ಅವಘಡ ಪ್ರಕರಣಗಳು ಹೆಚ್ಚಿದ್ದು, ಬೇಸಿಗೆಯಲ್ಲಿ ಅಗ್ನಿಶಾಮಕ ದಳದವರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಜಾನುವಾರುಗಳ ಮೇವಿಗೆ ಬೆಂಕಿ ಹಚ್ಚಬೇಡಿ ಎಂದು ರೈತರು ಮನವಿ ಮಾಡುತ್ತಿದ್ದು, ಬೆಳೆದು ನಿಂತಿರುವ ಬೆಳೆಗಳ ಮೇಲೂ ವಕ್ರದೃಷ್ಟಿ ಇಡಬೇಡಿ ಎಂದು ಮಾಲೀಕರಾದ ಕೃಷ್ಣಪ್ಪ ಮನವಿ ಮಾಡಿದ್ದಾರೆ. ಆದರೆ, ಇನ್ನೇನು ಬೆಳೆ  ಕೈಗೆ ಬರುತ್ತಿದೆ ಎಂದು ಹಲವು ಕನಸುಗಳನ್ನ ಕಂಡಿದ್ದ ರೈತನೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆದ ಬೆಳೆ ಕೈಗೆ ಬರುವ ಮುನ್ನವೇ ಮಣ್ಣು ಪಾಲಾಗಿದೆ, ಹೀಗಾಗಿ ಬೆಳೆಗಾಗಿ ಮಾಡಿರುವ ಸಾಲವನ್ನ  ತೀರಿಸಲು ದಿಕ್ಕೇ ತೋಚುತ್ತಿಲ್ಲ ಎಂದು ರೈತ ಕೃಷ್ಣಪ್ಪ ತಿಳಿಸಿದ್ದಾರೆ.
Published by:Sushma Chakre
First published: