ಕೊರೋನಾ ಮತ್ತೆ ಹೆಚ್ಚಾಗಲಿದೆ, ಕಾರ್ತಿಕ ಮಾಸದವರೆಗೂ ಜಲಗಂಡಾಂತರ ಇದೆ; ಕೋಡಿಮಠದ ಶ್ರೀಗಳ ಭವಿಷ್ಯ

ಕೋಲಾರದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳ ಭವಿಷ್ಯ ನುಡಿದಿದ್ದಾರೆ. ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾಂತರ ಇದೆ. ರಾಜ್ಯ, ದೇಶದಲ್ಲೂ ಕೊರೋನಾ  ಪ್ರಕರಣಗಳು ಇನ್ನೂ ಹೆಚ್ಚಾಗಲಿವೆ. ಆದರೆ ದೇವರ ಕೃಪೆಯಿಂದ ಒಳ್ಳೆಯ ದಿನಗಳು ಸಹ ಬರಲಿವೆ, ಅಶುಭ ನುಡಿಗಳು ಈಗ ಬೇಡ ಎಂದಿದ್ದಾರೆ.

ಕೋಡಿಮಠದ ಶ್ರೀಗಳು

ಕೋಡಿಮಠದ ಶ್ರೀಗಳು

  • Share this:
ಕೋಲಾರ(ಜು.31): ಮಾಜಿ ಸಿಎಂ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವ ವಿಚಾರದಲ್ಲಿ, ಮಠಾಧೀಶರ ಮಾತಿಗೆ ಕೇಂದ್ರದ ಬಿಜೆಪಿ ನಾಯಕರು ಮನ್ನಣೆ ನೀಡಿಲ್ಲ. ಈ ವಿಚಾರವಾಗಿ ನಾನು ಅವರನ್ನು ಮುಂದೆ ಪ್ರಶ್ನಿಸುವೆ ಎಂದು ಕೋಲಾರದಲ್ಲಿ ಕೋಡಿ ಮಠದ ಶ್ರೀಗಳು ಹೇಳಿಕೆ ನೀಡಿದ್ದಾರೆ. ಜೊತೆಗೆ  ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಗ್ಗೆ ಸದ್ಯಕ್ಕೆ ಏನು ಹೇಳಲು ಬರುವುದಿಲ್ಲ ಎಂತಲೂ ತಿಳಿಸಿದ್ದಾರೆ.

ಕೋಲಾರದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳ ಭವಿಷ್ಯ ನುಡಿದಿದ್ದಾರೆ. ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾಂತರ ಇದೆ. ರಾಜ್ಯ, ದೇಶದಲ್ಲೂ ಕೊರೋನಾ  ಪ್ರಕರಣಗಳು ಇನ್ನೂ ಹೆಚ್ಚಾಗಲಿವೆ. ಆದರೆ ದೇವರ ಕೃಪೆಯಿಂದ ಒಳ್ಳೆಯ ದಿನಗಳು ಸಹ ಬರಲಿವೆ, ಅಶುಭ ನುಡಿಗಳು ಈಗ ಬೇಡ.

'ಕುಂಭದಲ್ಲಿ ಗುರುಗೃಹ ಅಂದ್ರೆ ತುಂಬುವವು ಕೆರೆ ಕಟ್ಟೆ' ಆದರೆ ನಮ್ಮಲ್ಲಿ ಜಲಗಂಡಾಂತರ ಇನ್ನೂ ಇದೆ. ನೂತನ‌ ಸಿಎಂ ಬಗ್ಗೆ ಈಗಲೇ ಏನನ್ನು ಹೇಳಬಾರದು. ಏನನ್ನು ಅಶುಭ ನುಡಿಯಬಾರದು, ಕಾರ್ತಿಕ ಮಾಸ ಕಳೆದ ನಂತರ ಆ ಬಗ್ಗೆ  ಹೇಳುತ್ತೇನೆ ಎಂದರು.

ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇಂದು ಸಾಧಾರಣ ಮಳೆ ಸಾಧ್ಯತೆ; ಬೆಂಗಳೂರಿನ ಹವಾಮಾನ ಹೇಗಿರಲಿದೆ?

ಮಠಾಧೀಶರು ರಾಜಕೀಯ ಮಾಡಿಲ್ಲ - ಕೋಡಿಮಠದ ಶ್ರೀ ಶಿವಾನಂದ ಶ್ರೀಗಳ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದ, ಮಾಜಿ ಸಿಎಂ ಯಡಿಯೂರಪ್ಪ ಅವರ ಬದಲಾವಣೆ ವಿಚಾರ, ಸಾಕಷ್ಟು ವಿವಾದ ಹುಟ್ಟುಹಾಕಿತ್ತು, ನೂರಾರು ಮಠಾಧೀಶರು ಸಿಎಂ ಯಡಿಯೂರಪ್ಪರನ್ನು ಬದಲಾವಣೆ ಮಾಡದಂತೆ ಅವರ ಪರವಾಗಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಎಲ್ಲದರ ಹೊರತಾಗಿಯೂ ಖುದ್ದು ಬಿಎಸ್ ಯಡಿಯೂರಪ್ಪ ಅವರೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು, ಆದರೆ ಮಠಾಧೀಶರು ನೇರವಾಗಿ ರಾಜಕಾರಣಿಗಳಿಗೆ  ಬೆಂಬಲ ಸೂಚಿಸಿದ ಕುರಿತು, ಸ್ವಾಮೀಜಿಗಳು ಟೀಕೆಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಡಿಮಠದ ಶ್ರೀಗಳು, ಆಶ್ವೀಜ ಮಾಸ ನಂತರ ಸಂಕ್ರಾಂತಿ ಒಳಗೆ ದೊಡ್ಡ ಅವಘಡ ಆಗಲಿದೆ. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ. ಮಠಾಧೀಶರು, ನಾಯಕರು ಬೀದಿಗೆ ಬಂದು ಹೋರಾಟ ಮಾಡಿದ್ದರು,

ರಾಜ ಮಹಾರಾಜರಿಂದ ಗುರುಗಳಿಗೆ ಬೆಲೆ ಇದೆ, ಆದರೆ ಗುರುಗಳಿಗೆ ನೋವಾಗುವಂತೆ ನಡೆದುಕೊಂಡಿದ್ದು ಸರಿಯಲ್ಲ ಎಂದರು.

ಕೆಂದ್ರದ ಬಿಜೆಪಿ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು, ಆದರೆ ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಮಠಾಧೀಶರು ರಾಜಕಾರಣ ಮಾಡಿಲ್ಲ. ಬದಲಾವಣೆಗೆ ಇದು ಸಂದರ್ಭ ಅಲ್ಲ ಎಂದಿದ್ದಾರೆ ಅಷ್ಟೆ, ಆದರೆ ಕೆಂದ್ರದವರು ಹಾಗೂ ಹೈ ಕಮಾಂಡ್ ಗುರುಗಳನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಹಿಂದೆ ರಾಜರ ಕಾಲದಲ್ಲಿ ಸಿಂಹಾಸನದ ಪಕ್ಕ ಕೂರುತ್ತಿದ್ದರು. ರಾಮಚಂದ್ರ, ಪಾಂಡವರು, ಅತಿರಥ ಮಹಾರಾಜರು ಗುರುಗಳ ಸಲಹೆ ಪಡೆಯುತ್ತಿದ್ದರು. ಇದನ್ನೆಲ್ಲಾ ನಾವು ನೆನೆಯಬೇಕು.  ಮಾತನಾಡಲು ಇನ್ನು ಸಾಕಷ್ಟು  ವಿಚಾರ ಇದೆ, ಇದು ಸಂದರ್ಭ ಅಲ್ಲ ಎಂದರು.

ಇದನ್ನೂ ಓದಿ:Karnataka Cabinet Expansion: ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಬಿಜೆಪಿ ಶಾಸಕರಲ್ಲಿ ತೀವ್ರ ಪೈಪೋಟಿ; 13 ಮಂದಿ ಪೈಕಿ ಯಾರಿಗೆ ಒಲಿಯಲಿದೆ ಅದೃಷ್ಟ?

ಆದರೆ ಮಠಾಧೀಶರ ಅಹವಾಲನ್ನ ಆಲಿಸಲೆ ಇಲ್ಲ. ಇದು ನನಗೆ ಬೇಸರ  ತಂದಿದೆ. ಹಿಂದೂ ರಾಷ್ಟ್ರ ಎಂದರೆ ಖಾವಿ, ಅದಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಸ್ವಾಮೀಜಿಗಳು ಮಾಡಿದ್ದು ಸರಿಯಲ್ಲ ಎಂದು ಸಮರ್ಥನೆ ಮಾಡಿಲ್ಲ, ನಾನು ಒಪ್ಪುವುದು ಇಲ್ಲ. ಹಿಂದುತ್ವ ಎನ್ನುತ್ತಲೇ ಅಧಿಕಾರ ತೆಗೆದುಕೊಂಡಿದ್ದೀರಾ ಎಂದಿದ್ದು, ಯಾವುದೇ ಪಕ್ಷದ ಪ್ರಶ್ನೆಯಲ್ಲ ಆದರೆ  ಮಠಾಧೀಶರಿಗೆ ಅವಮಾನ ಮಾಡಿದ್ದಾರೆ.

ಈ ವಿಚಾರದಲ್ಲಿ ಕೇಂದ್ರದ ನಾಯಕರು ಬಂದು ತೀರ್ಮಾನ ಮಾಡಬಹುದಿತ್ತು. ಈ ಸಂಸ್ಕೃತಿ ಬೆಳೆಯಬಾರದು. ಮತ್ತಷ್ಟು ಮಾತನಾಡುವುದಿದೆ.  ಕೇಂದ್ರದ ನಾಯಕರು, ಅಮಿತ್ ಶಾ ಎಲ್ಲಾ ನಮ್ಮ ಬಳಿ ಬಂದಿದ್ದವರೆ, ಈಗ ಬಂದರೆ ಈ ಎಲ್ಲಾ ವಿಚಾರವನ್ನ ಕೇಳುತ್ತೇವೆ. ಖಾವಿಗಳಿಗೆ ಈ ದೇಶದಲ್ಲಿ ಏನು ಬೆಲೆ ಇದೆ ಎಂದು ಪ್ರಶ್ನಿಸುತ್ತಾ  ಕೋಡಿಮಠದ ಶಿವಾನಂದ ಶ್ರೀಗಳು ಬೇಸರ ಹೊರಹಾಕಿದರು.
Published by:Latha CG
First published: