HOME » NEWS » District » KODAVA PEOPLE CELEBRATED PUTTARI FESTIVAL RHHSN RSK

ಕೊಡಗಿನ ಸುಗ್ಗಿ ಹಬ್ಬ ಪುತ್ತರಿ ಸಂಭ್ರಮ ನಾಡಮಂದ್ ಊರು ಮಂದ್​ಗಳಲ್ಲಿ ಕಳೆಗಟ್ಟಿದ ಕೋಲಾಟ ಸಂಭ್ರಮ

ಹಿಂದಿನಿಂದ ನಡೆದುಕೊಂಡ ಬಂದಿರುವ ಪದ್ಧತಿಯಂತೆ ಮೆರವಣಿಗೆ ನಡುವೆ ಕುರುಂಬರಾಟ್ ಬನದಲ್ಲಿ ಮಧ್ಯಾಹ್ನದವರೆಗೆ ವಿಶ್ರಾಂತಿ ಪಡೆದರು. ಬಳಿಕ ಅಲ್ಲಿ ಜನರ ಆತಿಥ್ಯ ಪಡೆದು ನೂರುಂಬಾಡ ಮಂದ್ ಗೆ ಆಗಮಿಸಿದರು. ದೇವಾಲಯಕ್ಕೆ ಬಂದು ಮೊದಲು ಪೂಜೆ ಸಲ್ಲಿಸಿ ನಂತರ ಮಂದ್ ಕೋಲಾಟಕ್ಕೆ ಚಾಲನೆ ನೀಡಲಾಯಿತು.

news18-kannada
Updated:December 4, 2020, 7:09 PM IST
ಕೊಡಗಿನ ಸುಗ್ಗಿ ಹಬ್ಬ ಪುತ್ತರಿ ಸಂಭ್ರಮ ನಾಡಮಂದ್ ಊರು ಮಂದ್​ಗಳಲ್ಲಿ ಕಳೆಗಟ್ಟಿದ ಕೋಲಾಟ ಸಂಭ್ರಮ
ಪುತ್ತರಿ ಹಬ್ಬದ ಪ್ರಯುಕ್ತ ಕೋಲಾಟ ಆಡಿ ಸಂಭ್ರಮಿಸಿದ ಕೊಡಗಿನ ಜನರು.
  • Share this:
ಕೊಡಗು : ಕೊಡಗಿನಲ್ಲಿ ಪುತ್ತರಿ ಹಬ್ಬವೆಂದರೆ ಅತ್ಯಂತ ವಿಶೇಷ ಸ್ಥಾನವಿದೆ. ಸುಗ್ಗಿಯ ಹಬ್ಬವಾಗಿರುವ ಪುತ್ತರಿಯ ಅಂಗವಾಗಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಕೊಳ್ಳುವುದೆಂದರೆ ಇನ್ನಿಲ್ಲದ ಸಂಭ್ರಮ ಸಡಗರ. ಮನೆಯಲ್ಲಿ ಐದು ವಿಧದ ಮರಗಿಡಗಳ ಎಲೆಗಳಿಂದ ನೆರೆ ಕಟ್ಟಿ ಕುಲದೇವರಾದ ಇಗ್ಗುತ್ತಪ್ಪ ಮತ್ತು ಮಾತೆ ಕಾವೇರಿಯನ್ನು ಪೂಜಿಸಿ ಬಳಿಕ ಗದ್ದೆಗಳಿಗೆ ಹೋಗಿ ಕದಿರು ಕೊಯ್ದು ಧಾನ್ಯ ಲಕ್ಷ್ಮಿಯನ್ನು ಶ್ರದ್ಧಾಭಕ್ತಿಯಿಂದ ಮನೆಗಳಿಗೆ ತುಂಬಿಕೊಳ್ಳಲಾಗುತ್ತದೆ. ಅದೇ ಸಂಭ್ರಮಕ್ಕೆ ಮರುದಿನ ಪ್ರತೀ ಊರಿನ ಮಂದ್​ಗಳಲ್ಲಿ ಕೋಲಾಟಗಳು ನಡೆಯುತ್ತವೆ.

ಮಡಿಕೇರಿ ತಾಲ್ಲೂಕಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ ನಲ್ಲೂ ಸಾಮೂಹಿಕ ಕೋಲಾಟ ಸಡಗರದಿಂದ ನಡೆಯಿತು. ನಾಪೋಕ್ಲು, ಕೋಕೇರಿ ಮತ್ತು ಬೇತು ಗ್ರಾಮಗಳ ನೂರಾರು ಜನರು ನೂರಂಬಾಡ ಮಂದ್ ನಲ್ಲಿ ಸೇರಿ ಸಂಭ್ರಮದಿಂದ ಕೋಲಾಟ ಆಡಿದರು. ಇದಕ್ಕೂ ಮೊದಲು ಬೇತು ಗ್ರಾಮದ ಮಕ್ಕಿ ಶಾಸ್ತ್ರವು ದೇವಾಲಯದಿಂದ ತಕ್ಕಮುಖ್ಯಸ್ಥರೆಲ್ಲಾ ಸೇರಿ ದೇವರ ತಿರುವಾಭರಣಗಳನ್ನು ಕೊಂಡು ಕಾಪಾಳ ಕಳಿ ವೇಷಾಧಾರಿಗಳೊಂದಿಗೆ ನೂರಂಬಾಡ ಮಂದ್ ಗೆ ಬಂದರು. ಮೆರವಣಿಗೆ ಉದ್ಧಕ್ಕೂ ಕೊಂಬು ಕೊಟ್ ವಾದ್ಯಗಳೊಂದಿಗೆ ಕಾಪಾಳ ಕಳಿ ವೇಷಾಧಾರಿಗಳು ಕುಣಿದರು. ಬಳಿಕ ನೂರುಂಬಾಡ ಮಂದ್ ನಲ್ಲಿ ಸೇರಿದ ನೂರಾರು ಜನರು ಸಾಮೂಹಿಕ ಕೋಲಾಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಚಿಕ್ಕ ಮಕ್ಕಳು ಕೂಡ ಕೋಲಾಟದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದ್ದು ಎಲ್ಲರ ಮನಸೂರೆಗೊಳಿಸಿತು.

ಇದನ್ನು ಓದಿ: ಬೀದರ್ ಕಾರಂಜಾ ಡ್ಯಾಂ ಭರ್ತಿಯಾದ ಸಂತಸ ಹಿನ್ನೀರಿನಲ್ಲಿ ಮಾಯವಾಯ್ತು!
Youtube Video

ಹಿಂದಿನಿಂದ ನಡೆದುಕೊಂಡ ಬಂದಿರುವ ಪದ್ಧತಿಯಂತೆ ಮೆರವಣಿಗೆ ನಡುವೆ ಕುರುಂಬರಾಟ್ ಬನದಲ್ಲಿ ಮಧ್ಯಾಹ್ನದವರೆಗೆ ವಿಶ್ರಾಂತಿ ಪಡೆದರು. ಬಳಿಕ ಅಲ್ಲಿ ಜನರ ಆತಿಥ್ಯ ಪಡೆದು ನೂರುಂಬಾಡ ಮಂದ್ ಗೆ ಆಗಮಿಸಿದರು. ದೇವಾಲಯಕ್ಕೆ ಬಂದು ಮೊದಲು ಪೂಜೆ ಸಲ್ಲಿಸಿ ನಂತರ ಮಂದ್ ಕೋಲಾಟಕ್ಕೆ ಚಾಲನೆ ನೀಡಲಾಯಿತು. ನಾದಕ್ಕೆ ತಕ್ಕಂತೆ ನಾಲ್ಕು ಗ್ರಾಮದ ಜನರು ಮಂದ್ ಗೆ ಪ್ರದಕ್ಷಿಣೆ ಬಂದು  ನಂತ ಬಪ್ಪಕ ಪುತ್ತರಿ, ಬಣ್ಣಗೆ ಬಾತ್, ಪೊಯಿಲೆ ಪೊಯಿಲೆ, ಪೋಪಕ ಪುತ್ತರಿ ಎಣ್ಣತೆ ಪೋಚಿ ಪೊಯಿಲೆ ಎಂಬ ಉದ್ಘೋಷ ಇಡೀ ಮಂದ್ ನಲ್ಲಿ ಪರಸರಿತು. ಒಟ್ಟಿನಲ್ಲಿ ಸುಗ್ಗಿ ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಹಲವೆಡೆ ಊರು ಮಂದ್, ನಾಡ್ ಮಂದ್ ಗಳಲ್ಲಿ ಕೋಲಾಟ್ ಸಂಭ್ರಮ ಮನೆ ಮಾಡಿದೆ.
Published by: HR Ramesh
First published: December 4, 2020, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories