HOME » NEWS » District » KODAVA COMMUNITY PEOPLE PROTEST AGAINST OPPOSITION LEADER SIDDARAMAIAH LODGE COMPLAINT SESR RSK

Siddaramaiah: ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು, ಪ್ರತಿಭಟನೆ

ತಮ್ಮ ಹೇಳಿಕೆ ಕುರಿತು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರೆ ಸಾಲದು.  ಅವರು ಕೊಡಗಿಗೆ ಬಂದು ಬಹಿರಂಗವಾಗಿ ಕೊಡವರ ಕ್ಷಮೆ ಕೇಳಬೇಕು

news18-kannada
Updated:December 21, 2020, 8:10 PM IST
Siddaramaiah: ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು, ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗಿಯಾದ ಕೊಡವತಿಯರು
  • Share this:
ಕೊಡಗು (ಡಿ. 21) : ಕೊಡವರು ಕೂಡ ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ  ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿ ಕುಶಾಲಪ್ಪ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಪಕ್ಷ ನಾಯಕರ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಡವರು ಹಿಂದಿನಿಂದಲೂ ಗೋವುಗಳನ್ನು ಪೂಜ್ಯ ಭಾವನೆಯಿಂದ ಪೂಜಿಸುತ್ತಿದ್ದಾರೆ. ಅಲ್ಲದೆ ಪ್ರತೀ ವರ್ಷ ಕೈಮೂರ್ತ ಹಬ್ಬದಲ್ಲಿ ಗೋವುಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ವಿವಿಧ ಆಹಾರ ಪದಾರ್ಥಗಳನ್ನು ತಿನ್ನಿಸುತ್ತೇವೆ. ಆದರೆ, ಸಿದ್ದರಾಮಯ್ಯ ಅವರು ಕೊಡವರಿಗೆ ಅಪಮಾನ ಮಾಡುವುದಕ್ಕಾಗಿಯೇ ಮತ್ತು ಹಿಂದೂ ಮುಸನ್ಮಾನರ ನಡುವೆ ಗಲಾಟೆ ಮಾಡಿಸಿ ಸಮಾಜದ ಶಾಂತಿ ಹಾಳುಮಾಡುವ ದುರುದ್ದೇಶದಿಂದ ಇಂತಹ ಹೇಳಿಕೆ ನೀಡಿದ್ದಾರೆ. ಕೊಡವರು ಬೀಫ್ ತಿನ್ನುತ್ತಾರೆಂದು ಹೇಳಿರುವುದು ವೈಯಕ್ತಿಕವಾಗಿ ನನಗೂ ಅಪಮಾನವಾಗಿದೆ ಎಂದು ದೂರು ನೀಡಿದ್ದಾರೆ.



ತಮ್ಮ ಹೇಳಿಕೆ ಕುರಿತು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರೆ ಸಾಲದು.  ಅವರು ಕೊಡಗಿಗೆ ಬಂದು ಬಹಿರಂಗವಾಗಿ ಕೊಡವರ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಜಿಲ್ಲೆಯಾದ್ಯಂತ ಕೊಡವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದು ವಿವಿಧ ಕೊಡವ ಸಮಾಜಗಳ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಜಮಾಯಿಸಿದ ನೂರಾರು ಕೊಡವತಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು. ಅಲ್ಲದೇ ಮಾತೆ ಕಾವೇರಿ ಹಾಗೂ ಕುಲಗುರು ಇಗ್ಗುತ್ತಪ್ಪನಿಗೆ ಜೈಕಾರ ಹಾಕಿ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಬಿಜೆಪಿ ಉಪಾಧ್ಯಕ್ಷ ಆಗಲು ಆತ ಅನ್​ಫಿಟ್​; ಲಿಂಬಾವಳಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ರೇವಣ್ಣ

ಸಿದ್ದರಾಮಯ್ಯ ಕೇವಲ ಯಾವುದೋ ಒಂದು ಧರ್ಮದವರ ಪರವಾಗಿ ಪ್ರೀತಿ ತೋರಿಸುತ್ತಾರೆ. ಇಂತಹವರ ನಡುವೆ ಹಿಂದೂತ್ವದ ರಾಜಕಾರಣದ ಅಗತ್ಯವಿದೆ. ಕೊಡಗಿನ ಕಾಂಗ್ರೆಸ್ ನಲ್ಲಿರುವ ಕೊಡವ ನಾಯಕರು, ಸಿದ್ದರಾಮಯ್ಯನವರ ಬಗ್ಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಸ್ಪಷ್ಪಡಿಸಬೇಕು ಎಂದು   ಒತ್ತಾಯಿಸಿದರು.

ಇನ್ನು ಈ ನಡುವೆ ಮಡಿಕೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ಮುಖಂಡ ಬ್ರಿಜೇಶ್ ಕಾಳಪ್ಪ, ಸಿದ್ಧರಾಮಯ್ಯನವರು ಯಾರನ್ನು ನೋಯಿಸುವ ದೃಷ್ಟಿಯಿಂದ ಹೀಗೆ ಮಾತನಾಡಿಲ್ಲ. ಕೊಡವರು ಫೋರ್ಕ್ ತಿನ್ನುತ್ತಾರೆ ಎಂದು ಹೇಳುವಾಗ ಆಕಸ್ಮಿಕವಾಗಿ ಬೀಫ್ ಅಂತಾ ಹೇಳಿದ್ದಾರೆ. ಅದು ಬಾಯಿ ತಪ್ಪಿನಿಂದ ಆಗಿರುವ ತಪ್ಪು ಎಂದು ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಂಡಿದ್ದಾರೆ.
Published by: Seema R
First published: December 21, 2020, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories