HOME » NEWS » District » KODAGU TOURISTS BREAK THE COVID RULES AND ENJOY RSK MAK

ಕೊಡಗು: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು

ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ಹರಡಲು ಸುಲಭ ಮಾರ್ಗವಾಗಿ ಬಿಡುತ್ತಾ ಎನ್ನೋ ಅನುಮಾನ ಮೂಡಿದೆ. ಈಗಾಗಲೇ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕೇರಳ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಮಿತಿಮೀರುತ್ತಿದೆ.

news18-kannada
Updated:February 28, 2021, 4:43 PM IST
ಕೊಡಗು: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು
ಕೊಡಗಿನ ಪ್ರವಾಸಿಗರು.
  • Share this:
ಕೊಡಗು; ಕೋವಿಡ್ ಎರಡನೇ ಅಲೆ ಆರಂಭವಾಗಿದೆ ಎನ್ನೋ ಆತಂಕ ಇರುವಾಗಲೇ ರಾಜ್ಯದ ಜನರು ಕೊರೊನಾ ಮಹಾಮಾರಿಯನ್ನು ಮರೆತೇ ಬಿಟ್ರಾ? ಎನ್ನೋ ಅನುಮಾನ ಮೂಡುತ್ತಿದೆ. ಹೌದು ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವೀಕೆಂಡ್ ಬಂತೆಂದರೆ ಪ್ರವಾಸಿಗರಿಂದ ತುಂಬಿತುಳುತ್ತಿದ್ದು, ಪ್ರವಾಸಿಗರು ಕೋವಿಡ್ ನಿಯಮಗಳನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ಪ್ರಸಿದ್ದ ದುಬಾರೆಯಲ್ಲಿ ಜನರು ಎಲ್ಲವನ್ನೂ ಸಂಪೂರ್ಣ ಮರೆತು ಮಾಸ್ಕ್ ಕೂಡ ಇಲ್ಲದೆ ಎಂಜಾಯ್ ಮಾಡುತ್ತಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಸಾವಿರಾರು ಪ್ರವಾಸಿಗರು ನೀರಿನಲ್ಲಿ ಇಳಿದು ಎಂಜಾಯ್ ಮಾಡುತ್ತಿದ್ದಾರೆ. ಯಾರೋಬ್ಬರ ಮುಖದ ಮೇಲೂ ಮಾಸ್ಕ್ ಇಲ್ಲ, ಇದ್ದರೂ ಅದು ಕೇವಲ ನಾಮಕಾವಸ್ಥೆಗೆ ಗಡ್ಡಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ.

ಇನ್ನೂ ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಜೊತೆಗೆ ರ್ಯಾಫ್ಟಿಂಗ್ ಕೂಡ ನಡೆಯುತ್ತಿದ್ದು ಒಂದು ರ್ಯಾಫ್ಟ್‍ಗೆ ಕನಿಷ್ಠ 12 ರಿಂದ ಹದಿನೈದು ಜನರು ಕುಳಿತು ಎಂಜಾಯ್ ಮಾಡುತ್ತಿದ್ದಾರೆ. ರ್ಯಾಫ್ಟ್ ನಲ್ಲಿ ಕುಳಿತುಕೊಳ್ಳುವಾಗ ಯಾವುದ್ಯಾವುದೋ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ಯಾವುದೇ ಆತಂಕವಿಲ್ಲದೆ ಒಟ್ಟೊಟ್ಟಿಗೆ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳದೆ ಕುಳಿತು ಎಂಜಾಯ್ ಮಾಡುತ್ತಿದ್ದಾರೆ. ಇದು ದುಬಾರೆ ಸ್ಥಿತಿಯಾದರೆ, ಇನ್ನು ಕಾವೇರಿ ನಿಸರ್ಗಧಾಮ, ಮಡಿಕೇರಿಯಲ್ಲಿರುವ ರಾಜಾಸೀಟ್, ಅಬ್ಬಿಫಾಲ್ಸ್ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಲ್ಲೂ ವೀಕ್ ಎಂಡ್ ಗಳಲ್ಲಿ ಪ್ರವಾಸಿಗರು ಬಾರೀ ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದಾರೆ.

ಇದು ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ಹರಡಲು ಸುಲಭ ಮಾರ್ಗವಾಗಿ ಬಿಡುತ್ತಾ ಎನ್ನೋ ಅನುಮಾನ ಮೂಡಿದೆ. ಈಗಾಗಲೇ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕೇರಳ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಮಿತಿಮೀರುತ್ತಿದೆ. ಹೀಗಾಗಿಯೇ ಕೊಡಗು ಹಾಗೂ ಕೇರಳ ನಡುವೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿಗಳ ಚೆಕ್‍ಪೋಸ್ಟ್ ಗಳಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. 72 ಗಂಟೆ ಒಳಗೆ ಪಡೆದಿರುವ ಆರ್‍ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೆ ಕೊಡಗಿಗೆ ಪ್ರವೇಶ ನೀಡುತ್ತಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿರುವ ಹತ್ತಾರು ಪ್ರವಾಸಿ ತಾಣಗಳಿಗೆ ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.

ಇದನ್ನೂ ಓದಿ: Five State Election; ಪಂಚರಾಜ್ಯ ಚುನಾವಣೆಯಲ್ಲಿ ಯಾರಿಗಾಗಲಿದೆ ಲಾಭ?; ಇಲ್ಲಿದೆ ಸಿ-ವೋಟರ್​ ಸಮೀಕ್ಷಾ ವರದಿ!

ಕೇರಳದಿಂದ ಬರುತ್ತಿರುವವರ ಮೇಲೆ ಕೊಡಗು ಜಿಲ್ಲಾಡಳಿತ ಹದ್ದಿನಕಣ್ಣಿಟ್ಟದ್ದರೂ ಬೇರೆ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರಿಂದಲೂ ಕೋವಿಡ್ ಕೊಡಗಿಗೂ ವಕ್ಕರಿಸಬಹುದು ಎನ್ನೋದನ್ನು ಮರೆತಂತಿದೆ. ಜಿಲ್ಲೆಯಲ್ಲೂ ಫೆಬ್ರವರಿ ತಿಂಗಳ ಆರಂಭದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿತ್ತು.

ಆದರೆ, ಕಳೆದ ಒಂದು ವಾರದಿಂದ ನಿತ್ಯ ಏಳರಿಂದ ಎಂಟು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಪ್ರವಾಸೋದ್ಯಮದಿಂದ ಕೊಡಗಿನಲ್ಲಿ ಕೊರೊನಾ ಮತ್ತೆ ಮಿರಿಮೀರುವ ಮುನ್ನಾ ಕೊಡಗು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೋವಿಡ್ ಎರಡನೆ ಅಲೆ ಹರಡದಂತೆ ನೋಡಿ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
Published by: MAshok Kumar
First published: February 28, 2021, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories