ಸಂಕಷ್ಟದಲ್ಲಿರುವ ಸೀಲ್‌ಡೌನ್ ಏರಿಯಾದ ಕುಟುಂಬಗಳು; ಕೊಡಗು ಜೆಡಿಎಸ್‌ನಿಂದ ಆಹಾರ ಕಿಟ್ ವಿತರಣೆ

ಸೀಲ್‌ಡೌನ್ ಆಗಿರುವ ಪ್ರದೇಶದ ಎಂಟ್ರಿಯಲ್ಲೇ ವ್ಯಕ್ತಿಯೊಬ್ಬರನ್ನು ಕರೆದು ಸೀಲ್‌ಡೌನ್ ಏರಿಯಾದಲ್ಲಿ ಇರುವ ಅಷ್ಟು ಕುಟುಂಬಗಳಿಗೂ ಅಕ್ಕಿ, ಎಣ್ಣೆ, ಮಸಾಲ ಪದಾರ್ಥಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

news18-kannada
Updated:June 30, 2020, 8:39 PM IST
ಸಂಕಷ್ಟದಲ್ಲಿರುವ ಸೀಲ್‌ಡೌನ್ ಏರಿಯಾದ ಕುಟುಂಬಗಳು; ಕೊಡಗು ಜೆಡಿಎಸ್‌ನಿಂದ ಆಹಾರ ಕಿಟ್ ವಿತರಣೆ
ಕೊಡಗಿನ ಸೀಲ್‌ಡೌನ್ ಪ್ರದೇಶದಲ್ಲಿ ಆಹಾರ ಕಿಟ್‌ ವಿತರಿಸುತ್ತಿರುವ ಜೆಡಿಎಸ್‌ ಕಾರ್ಯಕರ್ತರು.
  • Share this:
ಕೊಡಗು (ಜೂನ್ 30): ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಇದುವರೆಗೆ 47 ಪಾಸಿಟಿವ್ ಕೇಸ್ ಆಗಿರುವ ಹಿನ್ನೆಲೆ 21 ಏರಿಯಾಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಸೀಲ್‌ಡೌನ್ ಏರಿಯಾದ ಜನರಿಗೆ ಅಗತ್ಯ ವಸ್ತುಗಳನ್ನು ಸರಿಯಾಗಿ ಪೂರೈಕೆ ಮಾಡಲಾಗುತ್ತಿಲ್ಲ. ಹೀಗಾಗಿ ಸೀಲ್‌ಡೌನ್ ಆಗಿರುವ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದ ಜನರಿಗೆ ಕೊಡಗು ಜಿಲ್ಲಾ ಜೆಡಿಎಸ್‌ನಿಂದ ಇಂದು ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

ಸೀಲ್‌ಡೌನ್ ಆಗಿರುವ ಪ್ರದೇಶದ ಎಂಟ್ರಿಯಲ್ಲೇ ವ್ಯಕ್ತಿಯೊಬ್ಬರನ್ನು ಕರೆದು ಸೀಲ್‌ಡೌನ್ ಏರಿಯಾದಲ್ಲಿ ಇರುವ ಅಷ್ಟು ಕುಟುಂಬಗಳಿಗೂ ಅಕ್ಕಿ, ಎಣ್ಣೆ, ಮಸಾಲ ಪದಾರ್ಥಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

ಜಿಲ್ಲಾಡಳಿತ ಸೀಲ್‌ಡೌನ್ ಏರಿಯಾದಲ್ಲಿರುವ ಕುಟುಂಬಗಳಿಗೆ ಅಗತ್ಯವಸ್ತುಗಳ ನೀಡಬೇಕು. ಇಲ್ಲದಿದ್ದರೆ ಇದು ಕೊರೋನಾ ವೈರಸ್ ಗಿಂತ ತೀರ ಕಷ್ಟ ಎಂದು ಜೆಡಿಎಸ್ ಮುಖಂಡರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮಾಸ್ಕ್‌ ಧರಿಸುವಂತೆ ಸೂಚಿಸಿದ ಮಹಿಳಾ ಸಹೋದ್ಯೋಗಿ ಮೇಲೆ ರಾಡ್‌ನಿಂದ ಹಲ್ಲೆ; ಆಂಧ್ರದಲ್ಲಿ ವ್ಯಕ್ತಿ ಅರೆಸ್ಟ್‌

ಇನ್ನು ಕಂಟೈನ್ಮೆಂಟ್ ಏರಿಯಾದ ಜನರು ಜಿಲ್ಲಾಡಳಿತ ಅಥವಾ ಯಾವುದೇ ಅಧಿಕಾರಿಗಳು ಮೂರು ದಿನಗಳಿಂದ ಹಾಲನ್ನು ಕೂಡ ವಿತರಣೆ ಮಾಡಿಲ್ಲ. ಇದರಿಂದಾಗಿ ಚಿಕ್ಕ ಚಿಕ್ಕ ಮಕ್ಕಳು ಕಷ್ಟ ಅನುಭವಿಸುವುದನ್ನು ಪೋಷಕರು ನೋವುನುಂಗಿಕೊಂಡು ನೋಡಬೇಕಾದ ಸ್ಥಿತಿ ಉಂಟಾಗಿದೆ ಎಂದು ಅವರು ಅಳಲು ತೋಡಿಕೊಂಡರು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading