ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಗಳು 21 ದಿನ ಬಂದ್ 

ಜನರ ಹಿತದೃಷ್ಟಿಯಿಂದ ಮತ್ತು ಹೋಂ ಸ್ಟೇ, ರೆಸಾರ್ಟ್​ ಹಾಗೂ ಹೋಟೆಲ್​ಗಳಿಗೆ ಬರುವ ಅತಿಥಿಗಳ ಸುರಕ್ಷತೆಗಾಗಿ ನಾವು ಅವುಗಳನ್ನು ಬಂದುಮಾಡಲು ನಿರ್ಧರಿಸಿದ್ದೇವೆ

ಹೋಮ್​​ ಸ್ಟೆ

ಹೋಮ್​​ ಸ್ಟೆ

  • Share this:
ಕೊಡಗು(ಜೂ.25): ಕೊಡಗು ಜಿಲ್ಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ಗಳನ್ನು ಇಂದಿನಿಂದ 21 ದಿನಗಳ ಕಾಲ ಬಂದ್ ಮಾಡಲು ಹೋಂ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್ ಮಾಲೀಕರ ಸಂಘವು ನಿರ್ಧರಿಸಿದೆ.

ಎರಡುವರೆ ತಿಂಗಳ ಕಾಲ ಬಂದ್ ಆಗಿದ್ದ, ಹೊಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ಗಳು ಇತ್ತೀಚೆಗಷ್ಟೇ ಆರಂಭವಾಗಿದ್ದವು. ಈ ನಡುವೆ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಹೋಂ ಸ್ಟೇ ನಡೆಸುತ್ತಿದ್ದ 70 ವರ್ಷದ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ. ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಆದರೂ ಕೊರೋನಾ ಪಾಸಿಟಿವ್ ಬಂದಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೀಗಾಗಿ ಜನರ ಹಿತದೃಷ್ಟಿಯಿಂದ ಮತ್ತು ಹೋಂ ಸ್ಟೇ, ರೆಸಾರ್ಟ್​ ಹಾಗೂ ಹೋಟೆಲ್​ಗಳಿಗೆ ಬರುವ ಅತಿಥಿಗಳ ಸುರಕ್ಷತೆಗಾಗಿ ನಾವು ಅವುಗಳನ್ನು ಬಂದುಮಾಡಲು ನಿರ್ಧರಿಸಿದ್ದೇವೆ.

ಇದನ್ನೂ ಓದಿ :  ರೈಲ್ವೆ ಕಂಬಿಗಳ ಬ್ಯಾರಿಕೇಡ್ ಕೆಳಗೆ ಸಿಲುಕಿದ ಕಾಡಾನೆ ವಿಡಿಯೋ ವೈರಲ್

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಹೋಟೆಲ್ ರೆಸಾರ್ಟ್ ಮತ್ತು ಹೋಂ ಸ್ಟೇ ಗಳನ್ನು ಸರ್ಕಾರ ನಿರ್ದೇಶನ ನೀಡಿದೆ. ಆದರೆ ಜಿಲ್ಲೆಯಲ್ಲಿ ಇವುಗಳನ್ನು ತೆರೆಯುವುದರಿಂದ ಜಿಲ್ಲೆಯ ಜನತೆಯ ಆರೋಗ್ಯಕ್ಕೆ ಸಮಸ್ಯೆ ಆಗುವುದಾದರೆ ಸಂಘವು ನಿರ್ಧರಿಸಿರುವ ತೀರ್ಮಾನವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ. ಅಲ್ಲದೆ ಸಂಘವೇ ನಿರ್ಧರಿಸಿರುವುದರಿಂದ ಬಂದ್ ಆಗಲಿವೆ ಎಂದಿದ್ದಾರೆ.

ವಿವಿಧ ಪ್ರಮುಖವಾದ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಊಟದ ವ್ಯವಸ್ಥೆಯಂತ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ರೆಸ್ಟೋರೆಂಟ್ ಮಾತ್ರ ತೆರೆಯಲಿದ್ದೇವೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.
First published: