• Home
  • »
  • News
  • »
  • district
  • »
  • ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!

ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!

ಉಪವಾಸವಿರುವ ಕುಟುಂಬ.

ಉಪವಾಸವಿರುವ ಕುಟುಂಬ.

ಮುಸ್ಲಿಂ ಕುಟುಂಬಗಳು ಉಪವಾಸ ಮಾಡುವುದಾದರೆ ನಾವು ಯಾಕೆ ಉಪವಾಸ ಮಾಡಬಾರದು ಎಂದು ಪವಿತ್ರನ್ ಮತ್ತು ಅವರ ಇಬ್ಬರು ಹೆಣ್ಣು ನಿರ್ಧರಿಸಿದ್ದರು. ಪವಿತ್ರನ್ ಮತ್ತು ಮಕ್ಕಳು ಕಳೆದ ವರ್ಷದ ಲಾಕ್​ಡೌನ್ ನಲ್ಲಿ ಉಪವಾಸ ಆರಂಭಿಸಿ ನಾಕ್ ಮುಗಿಯುವವರೆಗೆ ಅದನ್ನು ಮುಂದುವರೆಸಿದ್ದರಂತೆ.

  • Share this:

ಕೊಡಗು : ದೇಶದಲ್ಲಿ ಕೋವಿಡ್ ಮಹಾಮಾರಿ ವ್ಯಾಪಿಸುತ್ತಿದ್ದಂತೆ ಇನ್ನಷ್ಟು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ 2020 ರಲ್ಲಿ ಇಡೀ ದೇಶವನ್ನೇ ಸಂಪೂರ್ಣ ಲಾಕ್​ಡೌನ್ ಮಾಡಿತ್ತು. ಆ ಸಂದರ್ಭ ಎಷ್ಟೋ ಲಕ್ಷಾಂತರ ಕುಟುಂಬಗಳು ಅನುಭವಿಸಿದ ನೋವು, ಸಂಕಷ್ಟ ಅಷ್ಟಿಷ್ಟಲ್ಲಾ. ಇದರಿಂದ ಕೊಡಗು ಜಿಲ್ಲೆ ಏನು ಹೊರತ್ತಾಗಿರಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಪವಿತ್ರನ್ ಎಂಬುವರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡಿತ್ತು. ದುಡಿದು ದಿನ್ನೋದಕ್ಕೂ ಅವಕಾಶ ಇಲ್ಲದಿದ್ದರಿಂದ ತೀವ್ರ ಸಂಕಷ್ಟ ಅನುಭವಿಸಿತ್ತು. ಆದರೆ ಲಾಕ್​ಡೌನ್ ಸಂದರ್ಭದಲ್ಲಿ ರಂಜಾನ್ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ನೋಡಿದ್ದ ಪವಿತ್ರನ್ ಕುಟುಂಬ ತಾವೂ ಉಪವಾಸ ಮಾಡಲು ನಿರ್ಧರಿಸಿತ್ತು.


ಮುಸ್ಲಿಂ ಕುಟುಂಬಗಳು ಉಪವಾಸ ಮಾಡುವುದಾದರೆ ನಾವು ಯಾಕೆ ಉಪವಾಸ ಮಾಡಬಾರದು ಎಂದು ಪವಿತ್ರನ್ ಮತ್ತು ಅವರ ಇಬ್ಬರು ಹೆಣ್ಣು ನಿರ್ಧರಿಸಿದ್ದರು. ಪವಿತ್ರನ್ ಮತ್ತು ಮಕ್ಕಳು ಕಳೆದ ವರ್ಷದ ಲಾಕ್​ಡೌನ್ ನಲ್ಲಿ ಉಪವಾಸ ಆರಂಭಿಸಿ ನಾಕ್ ಮುಗಿಯುವವರೆಗೆ ಅದನ್ನು ಮುಂದುವರೆಸಿದ್ದರಂತೆ. ಲಾಕ್​ಡೌನ್ ಮುಗಿದ ಬಳಿಕ ಪವಿತ್ರನ್ ಅವರಿಗೆ ಸಾಕಷ್ಟು ಕೂಲಿ ಕೆಲಸಗಳು ದೊರೆತ್ತಿದ್ದವು. ಬಳಿಕ ದುಡಿದು ತಮ್ಮ ಹಸಿವು ನೀಗಿಸಿಕೊಂಡಿದ್ದರು. ಈಗ ಆಹಾರದ ಕೊರತೆ ಏನು ಇಲ್ಲ.


ಆದರೂ ಪವಿತ್ರನ್ ಅವರ ಮಕ್ಕಳು ಕಳೆದ ಬಾರಿಯ ರಂಜನ್ ಸಂದರ್ಭದ ಉಪವಾಸವನ್ನು ನೆನೆದು ಈ ಬಾರಿಯೂ ಉಪವಾಸ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಕೊವಿಡ್ ಸೋಂಕು ಮಿತಿಮೀರಿರುವುದರಿಂದ ಜಿಲ್ಲಾಡಳಿತ ಜಿಲ್ಲೆಯಲ್ಲಿ ವಾರದ ಐದು ದಿನ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿ ಮತ್ತೆಷ್ಟೋ ಕುಟುಂಬಗಳು ಜಿಲ್ಲೆಯಲ್ಲಿ ಉಪವಾಸದಿಂದ ಬಳಲುತ್ತಿರಬಹುದು.


ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ನಾವು ಹಸಿವಿನಿಂದ ಬಳಲಿ, ಕೊನೆಗೆ ಉಪವಾಸವನ್ನೇ ಒಂದು ಆಚರಣೆಯಾಗಿ ಮಾಡಿಕೊಂಡಿದ್ದು ಇನ್ನೂ ನೆನಪಿದೆ. ಹೀಗಾಗಿ ಈ ಬಾರಿ ನಮ್ಮ ಮಕ್ಕಳು ಉಪವಾಸ ಮುಂದುವರೆಸುತ್ತಿದ್ದಾರೆ ಎನ್ನುತ್ತಾರೆ ಪವಿತ್ರನ್. ಮುಂಜಾನೆ ಐದುವರೆಗೆ ಆಹಾರ ತಿನ್ನುವ ಪವಿತ್ರನ್ ಅವರ ಮಗಳು ಪ್ರಾಂಜನ್ ಮತ್ತು ಆಕೆಯ ತಂಗಿ ಇಬ್ಬರು ಇಡೀ ದಿನ ಉಪವಾಸ ಇರುತ್ತಿದ್ದಾರೆ.


ಬಳಿಕ ಸಂಜೆ ಆರುವರೆಗೆ ತಮ್ಮ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಬಳಿಕ ಏನನ್ನಾದರು ತಿಂದು ಉಪವಾಸ ಕೈಬಿಡುತ್ತಿದ್ದಾರೆ. ಇವರ ಈ ಆಚರಣೆ ನೋಡಿದರೆ ಒಮ್ಮೆ ಯಾರಿಗಾದರೂ ಇವರು ಮತಾಂತರ ಆಗುತ್ತಿರಬಹುದೇನ್ನೋ ಎನ್ನೋ ಅನುಮಾನ ಕಾಡಬಹುದು. ಆದರೆ ಪವಿತ್ರನ್ ಅವರ ಮನೆಯ ಮುಂದೆ ತುಳಿಸಿಕಟ್ಟೆ ಇದ್ದು, ಇಂದಿಗೂ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ.


ನಮಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ ಎನ್ನುತ್ತಾರೆ ಪವಿತ್ರನ್. ಒಟ್ಟಿನಲ್ಲಿ ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ತಾವು ಹಸಿವಿನಿಂದ ಬಳಲಿದ್ದನ್ನು ನೆನಪಿಸಿಕೊಂಡು ಈ ಕುಟುಂಬ ಇಂದಿಗೂ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದನ್ನು ರೂಢಿಸಿಕೊಂಡಿದೆ.


ಭಾರತದಲ್ಲಿ ಕೊರೋನಾ ಕೇಕೆ:


ಈ ನಡುವೆ ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌


ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಿ; ಸಿಎಂ ಯೋಗಿ ಆದಿತ್ಯನಾಥ್​ಗೆ ಪತ್ರ ಬರೆದ ಕೇಂದ್ರ ಸಚಿವ!


ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಈಗ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುವ ಟ್ರೆಂಡ್ ಮುಂದುವರೆದಿದೆ.


ಶನಿವಾರ 4,03,738 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,86,444 ಜನ ಮಾತ್ರ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,22,96,414ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶನಿವಾರ 4,092 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,42,362ಕ್ಕೆ ಏರಿಕೆ ಆಗಿದೆ.

Published by:MAshok Kumar
First published: