HOME » NEWS » District » KODAGU FACE CORONAVIRUS PANDAMIC DAYS RSK MAK

CoronaVirus: ಕೊಡಗಿಗೆ ಇನ್ನೂ ಹದಿನೈದು ದಿನ ಕಾದಿದೆ ಮಹಾಕಂಟಕ!

ಒಬ್ಬ ಸೋಂಕಿತನಿಂದ ಇಡೀ ಮನೆಯವರಿಗೆ ಹರಡುತ್ತಿದೆ. ಈ ಸ್ಥಿತಿ ಹೀಗಿರುವಾಗ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯ ಯಾವ ತಾಲ್ಲೂಕು ಆಸ್ಪತ್ರೆಗಳಲ್ಲೂ ಒಬ್ಬರೇ ಒಬ್ಬರು ಅನಸ್ತೆಷ್ಟಿಸ್ ಇಲ್ಲ. ಇಡೀ ಜಿಲ್ಲೆಗೆ ಒಬ್ಬರೇ ಪಿಜಿಷಿಯನ್ ಇದ್ದಾರೆ ಎನ್ನೋದು ತೀರಾ ಆತಂಕದ ವಿಷಯ.

news18-kannada
Updated:May 2, 2021, 7:01 AM IST
CoronaVirus: ಕೊಡಗಿಗೆ ಇನ್ನೂ ಹದಿನೈದು ದಿನ ಕಾದಿದೆ ಮಹಾಕಂಟಕ!
ಸಾಂದರ್ಭಿಕ ಚಿತ್ರ.
  • Share this:
ಕೊಡಗು: ಇಡೀ ದೇಶದಲ್ಲೇ ಅತೀ ಹೆಚ್ಚು ಕೊವಿಡ್ ಪಾಸಿಟಿವಿಟಿ ಹೊಂದಿರುವ ಜಿಲ್ಲೆ ಅಂದರೆ ಅದು ಕೊಡಗು. ಹೌದು ಅಚ್ಚರಿ ಎನಿಸಿದರೂ ಅದು ಸತ್ಯ. ಕೊಡಗು ಜಿಲ್ಲೆಯಲ್ಲಿ ನಿತ್ಯ 300 ರಿಂದ 500 ಪ್ರಕರಣ ದಾಖಲಾಗುತ್ತಿವೆ 20.7 ರಷ್ಟು ಪಾಸಿಟಿವಿಟಿ ದರವಿದೆ. ಜಿಲ್ಲೆಯಲ್ಲಿ ಇರೋದೇ ಕೇವಲ ಆರುವರೆ ಲಕ್ಷ ಜನ ಸಂಖ್ಯೆ. ಈ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಈಗ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳು ಅತೀ ಹೆಚ್ಚು. ಅದರಲ್ಲೂ ಶನಿವಾರ ಒಂದೇ ದಿನ ಬರೋಬ್ಬರಿ 849 ಪ್ರಕರಣಗಳು ದಾಖಲಾಗಿವೆ. ಆದರೆ ಈ ಸ್ಥಿತಿ ಇನ್ನೂ ಹತ್ತರಿಂದ ಹನ್ನೆರಡು ದಿನಗಳ ಕಾಲ ಮುಂದುವರೆಯಲಿದೆ ಅಂತಾ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಮೋಹನ್ ಕುಮಾರ್ ಹೇಳಿದ್ದಾರೆ. ಮೊದಲನೇ ಅಲೆಯಲ್ಲಿ ತೀರಾ ನಿಯಂತ್ರಣದಲ್ಲಿದ್ದ ಕೊವಿಡ್ ಪ್ರಕರಣಗಳು ಎರಡನೆ ಅಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹರಡೋದಕ್ಕೆ ಬೆಂಗಳೂರೇ ಮುಖ್ಯ ಕಾರಣ.

ಹೌದು ಲಾಕ್ ಡೌನ್ ಆಗುವ ಮೊದಲು ಮತ್ತು ಆ ಬಳಿಕ ಬೆಂಗಳೂರಿನಿಂದ ಕೊಡಗಿಗೆ ಬಂದವರು ಜಿಲ್ಲೆಯಲ್ಲಿ ಕೊವಿಡ್ ಸೋಂಕನ್ನು ಎಲ್ಲರಿಗೂ ಹರಡಿದ್ರು. ಹೀಗಾಗಿ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಹಿಂದಿನಂತೆ ಮತ್ತೆ ಚೆಕ್ ಪೋಸ್ಟ್ ತೆರೆದು ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನು ಪರಿಶೀಲಿಸಿ ಕ್ವಾರಂಟೈನ್ ಮಾಡಬೇಕು ಎನ್ನೋದು ಶಾಸಕರ ಅಭಿಪ್ರಾಯ. ಇನ್ನು ಸೋಂಕು ಅಂಟಿಸಿಕೊಂಡವರು ತಕ್ಷಣವೇ ಆಸ್ಪತ್ರೆಗೆ ಬರುವ ಬದಲು ತಮ್ಮ ಆರೋಗ್ಯದ ಸ್ಥಿತಿ ಬಿಗಡಾಯಿಸುವವರೆಗೆ ಮನೆಯಲ್ಲೇ ಇದ್ದು ಬಳಿಕ ಆಸ್ಪತ್ರೆಗೆ ಬರುತ್ತಿದ್ದಾರೆ.

ಹೀಗಾಗಿ ಒಬ್ಬ ಸೋಂಕಿತನಿಂದ ಇಡೀ ಮನೆಯವರಿಗೆ ಹರಡುತ್ತಿದೆ. ಈ ಸ್ಥಿತಿ ಹೀಗಿರುವಾಗ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯ ಯಾವ ತಾಲ್ಲೂಕು ಆಸ್ಪತ್ರೆಗಳಲ್ಲೂ ಒಬ್ಬರೇ ಒಬ್ಬರು ಅನಸ್ತೆಷ್ಟಿಸ್ ಇಲ್ಲ. ಇಡೀ ಜಿಲ್ಲೆಗೆ ಒಬ್ಬರೇ ಪಿಜಿಷಿಯನ್ ಇದ್ದಾರೆ ಎನ್ನೋದು ತೀರಾ ಆತಂಕದ ವಿಷಯ. ಈಗ ಕೊವಿಡ್ ಆಸ್ಪತ್ರೆಯಾಗಿರುವ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 11 ಜನರು ಅನಸ್ತೆಷ್ಟಿಸ್ ಹಾಗೂ 6 ಪಿಜಿಷಿಯನ್ ವೈದ್ಯರಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ವೈದ್ಯರು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಸಾಕಾಗುತ್ತಿಲ್ಲ.

ಇದನ್ನೂ ಓದಿ: Supreme Court: ಶೇ.100 ರಷ್ಟು ಲಸಿಕೆಯನ್ನು ನೀವೆ ಏಕೆ ಖರೀದಿಸಬಾರದು?; ಮೋದಿ ಸರ್ಕಾರದ ಎದುರು 10 ಪ್ರಶ್ನೆಗಳನ್ನಿಟ್ಟ ಸುಪ್ರೀಂ

ಈ ಕುರಿತು ಸಂಬಂಧಿಸಿದ ಎಲ್ಲರ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಕೊಡಗು ಡಿಎಚ್‍ಓ. ಮತ್ತೊಂದೆಡೆ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ 250 ಬೆಡ್ ಗಳಿದ್ದರೆ, ಉಳಿದಂತೆ ಸೋಮವಾರಪೇಟೆ, ವಿರಾಜಪೇಟೆ, ಕುಟ್ಟ ಮತ್ತು ಪಾಲಿಬೆಟ್ಟದಲ್ಲಿ ಕೊವಿಡ್ ಸೋಂಕಿತರಿಗಾಗಿ ಬೆಡ್‍ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇಲ್ಲೆಲ್ಲಾ ತಲಾ 50 ಬೆಟ್ ಗಳನ್ನು ಸಿದ್ಧಗೊಳಿಸಬಹುದು. ಆದರೆ ಸೋಂಕು ಇದೇ ಪ್ರಮಾಣದಲ್ಲಿ ಹೆಚ್ಚಳವಾದಲ್ಲಿ ಈ ಬೆಡ್ ಗಳು ಸಾಕಾಗುವುದಿಲ್ಲ.
Youtube Video

ಮತ್ತೊಂದೆಡೆ ಆರೋಗ್ಯದಲ್ಲಿ ತೀರಾ ಸಮಸ್ಯೆ ಇಲ್ಲದ ಸೋಂಕಿತರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡುತ್ತಿರುವುದು ಕೂಡ ಜಿಲ್ಲೆಯಲ್ಲಿ ಸೋಂಕು ಉಲ್ಭಣಿಸಲು ಮತ್ತೊಂದು ಕಾರಣ. ಈ ಸೋಂಕಿತರಿಂದ ಮನೆಯ ಉಳಿದವರಿಗೂ ಹರಡುತ್ತಿದೆ. ಆದರೆ ಬೆಡ್‍ಗಳ ಕೊರತೆ ಇರುವುದರಿಂದ ಹೋಂ ಕ್ವಾರಂಟೈನ್ ಅನಿವಾರ್ಯ ಎನ್ನುತ್ತಾರೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್.
Published by: MAshok Kumar
First published: May 2, 2021, 7:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories