ಪ್ರಕೃತಿ ವಿಕೋಪ ಎದುರಿಸಲು ಕೊಡಗು ಜಿಲ್ಲಾಡಳಿತ ಸಿದ್ದ; ಎನ್‌ಡಿಆರ್‌ಎಫ್‌ ಸಿಬ್ಬಂದಿಗಳಿಗೆ ಕಠಿಣ ತರಬೇತಿ

ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಪ್ರವಾಹ ಅಥವಾ ಭೂ ಕುಸಿತ ಆಗುವ ಸಾಧ್ಯತೆ ಇದೆ ಎಂಬ ಆತಂಕವಿದೆ. ಹೀಗಾಗಿಯೇ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಈಗಲೇ ಸಿದ್ಧತೆ ನಡೆಸುತ್ತಿದೆ.

ಎನ್‌ಡಿಆರ್‌ಎಫ್‌ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿರುವುದು.

ಎನ್‌ಡಿಆರ್‌ಎಫ್‌ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿರುವುದು.

  • Share this:
ಕೊಡಗು : ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಭೂ ಕುಸಿತ, ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಈ ಸಂದರ್ಭ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ದಳ ಅಷ್ಟೇ ಅಲ್ಲ ಪೊಲೀಸರು ತಮ್ಮ ಜೀವವನ್ನೂ ಲೆಕ್ಕಿಸದೆ ಜನರ ಪ್ರಾಣ ಉಳಿಸಿದ್ದರು. ಜಿಲ್ಲೆಯಲ್ಲಿ ಈ ಬಾರಿಯೂ ಭೂ ಕುಸಿತ ಅಥವಾ ಪ್ರವಾಹ ಎದುರಾದರೆ ಅದನ್ನು ಎದುರಿಸಲು ನಾವು ಸಿದ್ಧ ಎಂದು ಜಿಲ್ಲೆಯ ಪೊಲೀಸರು, ಎನ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ದಳದವರು ಈಗಲೇ ಸನ್ನದ್ಧರಾಗುತ್ತಿದ್ದಾರೆ.

ರಾಜ್ಯದಲ್ಲಿ ಎಲ್ಲೂ ಅನಾಹುತ ಸಂಭವಿಸುವಂತೆ ಭಾರೀ ಮಳೆಯೂ ಬಂದಿಲ್ಲ. ಎಲ್ಲೂ ಭೂ ಕುಸಿತವೂ ಆಗಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿಗಳು ಎದುರಾಗಿದ್ದೇ ಆದಲ್ಲಿ ಯಾವ ಸಮಸ್ಯೆ ಇಲ್ಲದೆಯೇ ಜನರ ಪ್ರಾಣ ರಕ್ಷಿಸೋದಕ್ಕೆ ಈಗಲೇ ಸಿದ್ಧತೆ ನಡೆಸಲಾಗುತ್ತಿದೆ.  ಕಳೆದ ಎರಡು ವರ್ಷವೂ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಮತ್ತು ಪ್ರವಾಹ ಸೃಷ್ಟಿಯಾಗಿತ್ತು. ಈ ವೇಳೆ ಹಲವೆಡೆ ಸಾವಿರಾರು ಜನರು ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದರೆ, ಅದೆಷ್ಟೋ ಜನರು ಭೂಕುಸಿತದಲ್ಲಿ ಸಿಲುಕಿದ್ದರು.

ಈ ವೇಳೆಯೂ ಎನ್‍ಡಿಆರ್ ಎಫ್ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವ ಉಳಿಸಿದ್ದರು. ಆದರೆ ತಕ್ಷಣವೇ ಎದುರಾದ ಭೂ ಕುಸಿತ ಮತ್ತು ಪ್ರವಾಹವನ್ನು ಎದುರಿಸಲು ಹರಸಾಹಸ ಪಡಬೇಕಾಗಿತ್ತು. ಇಂತಹ ಸಮಸ್ಯೆ ಎದುರಾಗುವ ವೇಳೆ ಸರಾಗವಾಗಿ ಜನರ ರಕ್ಷಿಸುವುದು ಹೇಗೆ ಎಂಬ ಸಿದ್ಧತೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ : ಪ್ರತ್ಯೇಕತೆಯಲ್ಲಿದ್ದ ಕೇರಳದ ಕೋವಿಡ್‌-19 ರೋಗಿ ಮದ್ಯದ ವ್ಯಸನದಿಂದ ಆತ್ಮಹತ್ಯೆಗೆ ಶರಣು
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಪ್ರವಾಹ ಅಥವಾ ಭೂ ಕುಸಿತ ಆಗುವ ಸಾಧ್ಯತೆ ಇದೆ ಎಂಬ ಆತಂಕವಿದೆ. ಹೀಗಾಗಿಯೇ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಈಗಲೇ ಸಿದ್ಧತೆ ನಡೆಸುತ್ತಿದೆ.
First published: