HOME » NEWS » District » KODAGU COVID 19 LOCKDOWN NEWS RSK MAK

LockDown: ಲಾಕ್​ಡೌನ್ ನಿಯಮ ಪಾಲನೆ ಪರಿಶೀಲನೆಗೆ ಫೀಲ್ಡಿಗಿಳಿದ ಕೊಡಗು ಡಿಸಿ, ಎಸ್‍ಪಿ!

ನಿಯಮಗಳು ಪಾಲನೆ ಆಗುತ್ತಿದೆಯಾ ಇಲ್ವಾ ಅಥವಾ ಜನರು ದೈಹಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ಅಗತ್ಯ ವಸ್ತುಗಳ ಖರೀದಿಸುತ್ತಿದ್ದಾರಾ ಇಲ್ವಾ ಎಂಬುದನ್ನು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ವತಃ ಫೀಲ್ಡಿಗಿಳಿದು ಪರಿಶೀಲನೆ ನಡೆಸಿದರು.

news18-kannada
Updated:May 10, 2021, 4:34 PM IST
LockDown: ಲಾಕ್​ಡೌನ್ ನಿಯಮ ಪಾಲನೆ ಪರಿಶೀಲನೆಗೆ ಫೀಲ್ಡಿಗಿಳಿದ ಕೊಡಗು ಡಿಸಿ, ಎಸ್‍ಪಿ!
ಕೊಡಗಿನಲ್ಲಿ ಫೀಲ್ಡ್​ಗೆ ಇಳಿದಿರುವ ಪೊಲೀಸ್ ವರಿಷ್ಠಾಧಿಕಾರಿ.
  • Share this:
ಕೊಡಗು: ಎರಡನೆ ಅಲೆಯ ಕೋವಿಡ್ ಸೋಂಕು ಕೊಡಗು ಜಿಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ರಾಜ್ಯದಲ್ಲಿ ಪ್ರತಿನಿತ್ಯ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಕೇವಲ ಎರಡು ದಿನ ಮಾತ್ರವೇ ಅವಕಾಶ ನೀಡಲಾಗಿದೆ. ಅದು ಸೋಮವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ ಆಯಾ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿನ ಜನರು ಅಲ್ಲಿಯೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು. ಯಾವುದೇ ಕಾರಣಕ್ಕೂ ಬೇರೆ ಊರುಗಳಿಗೆ ಅನಗತ್ಯವಾಗಿ ಹೋಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ.

ಹೀಗಾಗಿ ಈ ನಿಯಮಗಳು ಪಾಲನೆ ಆಗುತ್ತಿದೆಯಾ ಇಲ್ವಾ ಅಥವಾ ಜನರು ದೈಹಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ಅಗತ್ಯ ವಸ್ತುಗಳ ಖರೀದಿಸುತ್ತಿದ್ದಾರಾ ಇಲ್ವಾ ಎನ್ನೋದನ್ನು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ವತಃ ಫೀಲ್ಡಿಗಿಳಿದು ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಮಾರುಕಟ್ಟೆ ರಸ್ತೆ, ಇಂದಿರಾಗಾಂಧಿ ವೃತ್ತ ಸೇರಿದಂತೆ ವಿವಿಧೆಡೆ ನಡೆದುಕೊಂಡೇ ಓಡಾಡಿ ನಗರದ ಸ್ಥಿತಿಯನ್ನು ಗಮನಿಸಿದರು.

ಜೊತೆಗೆ ಎಸ್‍ಪಿ ಕ್ಷಮಾ ಮಿಶ್ರಾ ಕೂಡ ಓಡಾಡಿ ನಗರದ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ಕೆಲವು ಅಂಗಡಿಗಳ ಮುಂದೆ ಜನರು ಗುಂಪು ಗುಂಪಾಗಿ ನಿಂತಿದ್ದನ್ನು ಗಮನಿಸಿ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿ ಯಿಸಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾ ಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದರು.

ಇದನ್ನೂ ಓದಿ: Mamata Banerjee: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 43 ಟಿಎಂಸಿ ನಾಯಕರು; ಇಂದೇ ಮೊದಲ ಕ್ಯಾಬಿನೆಟ್ ಸಭೆ ಕರೆದ ಮಮತಾ ಬ್ಯಾನರ್ಜಿ

ಇನ್ನು ಎಸ್‍ಪಿ ಕ್ಷಮಾ ಮಿಶ್ರ ಪ್ರತಿಕ್ರಿಯಿಸಿ ಈಗಾಗಲೇ ಎಲ್ಲೂ ಅನಗತ್ಯವಾಗಿ ವಾಹನಗಳು ಓಡಾಡದಂತೆ ಎಚ್ಚರಿಕೆ ವಹಿಸಲಾಗಿದೆ. ಆಯಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲೇ ಅಗತ್ಯ ವಸ್ತುಗಳ ಮಾರಾಟ ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು. ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ, ಮೂರ್ನಾಡು ಸೋಮ ವಾರಪೇಟೆ ಸೇರಿದಂತೆ ಎಲ್ಲಾ ಪ್ರಮುಖ ನಗರ ಪಟ್ಟಣಗಳಲ್ಲಿ ಎಂಟ್ರಿಯಲ್ಲೇ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳು ನಗರ ಪಟ್ಟಣಗಳಿಗೆ ಅನಾವಶ್ಯಕವಾಗಿ ವಾಹನಗಳು ಬಾರದಂತೆ ತಡೆಹಿಡಿದಿದ್ದರು.
Youtube Video

ನಗರ, ಪಟ್ಟಣಗಳ ಹೊರಭಾಗದ ಅಲ್ಲಲ್ಲೇ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಮಡಿಕೇರಿ ಸೇರಿದಂತೆ ಎಲ್ಲೂ ಟ್ರಾಫಿಕ್ ಜಾಮ್ ಆಗಿರಲಿಲ್ಲ. ಅಷ್ಟೇ ಅಲ್ಲ, ಎಲ್ಲೂ ಜನರ ನೂಕು ನುಗ್ಗಲು ಇರಲಿಲ್ಲ. ಇನ್ನು ಅಗತ್ಯ ವಸ್ತುಗಳ ಮಾರಾಟಕ್ಕೂ ಒಂದೆ ಕಡೆ ವ್ಯವಸ್ಥೆ ಕಲ್ಪಿಸುವ ಬದಲು ಜನ ದಟ್ಟಣೆಗೆ ಅವಕಾಶ ಆಗದಂತೆ ಎರಡು ಮೂರು ಕಡೆಗಳಲ್ಲಿ ಹಣ್ಣು, ತರಕಾರಿ ಮತ್ತು ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದಾಗಿ ಮಡಿಕೇರಿಯಲ್ಲಿ ಹಿಂದಿನ ವಾರಗಳಂತೆ ಯಾವುದೇ ನೂಕು ನುಗ್ಗಲು ಆಗದೆ ಜನರು ಹನ್ನೆರಡು ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ನಡೆದುಕೊಂಡೇ ಖರೀದಿಸಿ ಮನೆಗೆ ವಾಪಸ್ ಆದರು.
Published by: MAshok Kumar
First published: May 10, 2021, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories