HOME » NEWS » District » KODAGU ATTACK PYTHON ON REPTILE LOVER WHO WENT TO RESCUE RSK MAK

ಕೊಡಗು; ರಕ್ಷಿಸಲು ಹೋದ ಉರಗ ಪ್ರೇಮಿ ಮೇಲೆ ಅಟ್ಯಾಕ್ ಮಾಡಿದ ಹೆಬ್ಬಾವು 

ಕೋಪಗೊಂಡ ಹತ್ತು ಅಡಿ ಉದ್ದ, ಹದಿನಾಲ್ಕು ಕೆ.ಜಿ ತೂಕದ ಹೆಬ್ಬಾವು ಉರಗ ಪ್ರೇಮಿ ಶಾಜಿ ಅವರ ಮೇಲೆ ಕಣ್ಣು ಮಿಟುಕಿಸುವಷ್ಟರಲ್ಲೇ ಎಗರಿದೆ. ತಕ್ಷಣವೇ ಎಚ್ಚೆತ್ತುಕೊಂಡ ಶಾಜಿ ಹಾವನ್ನು ಕೈಬಿಟ್ಟು ಹಿಂದೆ ಸರಿದು ಅಪಾಯದಿಂದ ಪಾರಾಗಿದ್ದಾರೆ.

news18-kannada
Updated:December 14, 2020, 9:09 PM IST
ಕೊಡಗು; ರಕ್ಷಿಸಲು ಹೋದ ಉರಗ ಪ್ರೇಮಿ ಮೇಲೆ ಅಟ್ಯಾಕ್ ಮಾಡಿದ ಹೆಬ್ಬಾವು 
ಹೆಬ್ಬಾವು.
  • Share this:
ಕೊಡಗು : ಹಾವು ಎಂದರೆ ಯಾರಿಗೆ ತಾನೆ ಭಯ ಇರಲ್ಲ ಹೇಳಿ. ಆದರೂ ಉರಗ ಪ್ರೇಮಿಗಳಿಗೇನು ಕೊರತೆ ಇಲ್ಲ ನೋಡಿ. ಆ ಪ್ರೇಮದಿಂದಲೇ ರಕ್ಷಣೆ ಮಾಡಲು ಹೋದ ಉರಗ ಪ್ರೇಮಿಯ ಮೇಲೆ ಆ ಹಾವು ಅಟ್ಯಾಕ್ ಮಾಡಿದೆ. ತನ್ನ ಚಾಣಾಕ್ಷತನದಿಂದಲೇ ತಕ್ಷಣವೇ ಎಚ್ಚೆತ್ತುಕೊಂಡ ಉರಗ ಪ್ರೇಮಿ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಹೌದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಅತ್ತೂರು ಗ್ರಾಮದ ಕುರುಂಜಿನ ವಿನು ಎಂಬುವರ ಜಮೀನಿನಲ್ಲಿ ಬಾರೀ ಗಾತ್ರದ ಹೆಬ್ಬಾವು ಜನರಿಗೆ ಎದುರಾಗಿತ್ತು. ಭಯಗೊಂಡ ಜನರು ತಕ್ಷಣವೇ ಉರಗ ಪ್ರೇಮಿ ಹೊಸಕೋಟೆಯ ಶಾಜಿ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶಾಜಿ ಅವರು ಹೆಬ್ಬಾವನ್ನು ಸೆರೆ ಹಿಡಿದು ಸಂರಕ್ಷಿತಾರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ. ಇಂತಹ ಹತ್ತು ಹಲವು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಅಭ್ಯಾಸವಾಗಿರುವ ಶಾಜಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿಯೇ ಎಚ್ಚರಿಕೆಯಿಂದಲೇ ಹೆಬ್ಬಾವನ್ನು ಸೆರೆಹಿಡಿಯುತ್ತಿದ್ದರು.

ಈ ವೇಳೆ ಕೋಪಗೊಂಡ ಹತ್ತು ಅಡಿ ಉದ್ದ, ಹದಿನಾಲ್ಕು ಕೆ.ಜಿ ತೂಕದ ಹೆಬ್ಬಾವು ಉರಗ ಪ್ರೇಮಿ ಶಾಜಿ ಅವರ ಮೇಲೆ ಕಣ್ಣು ಮಿಟುಕಿಸುವಷ್ಟರಲ್ಲೇ ಎಗರಿದೆ. ತಕ್ಷಣವೇ ಎಚ್ಚೆತ್ತುಕೊಂಡ ಶಾಜಿ ಹಾವನ್ನು ಕೈಬಿಟ್ಟು ಹಿಂದೆ ಸರಿದು ಅಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ, ಯಾವ ಹಾವನ್ನು ರಕ್ಷಿಸಲು ಮುಂದಾಗಿದ್ದರೋ ಅದೇ ಹಾವು ಶಾಜಿ ಅವರಿಗೆ ಅಪಾಯ ತಂದೊಡ್ಡಿಬಿಡುತಿತ್ತು.

ಇದನ್ನೂ ಓದಿ : Farmers Protest: ದೆಹಲಿ ಚಲೋ; ಜೈಪುರ-ದೆಹಲಿ ಹೆದ್ದಾರಿಯಲ್ಲಿ ರೈತರು ಪೊಲೀಸರ ನಡುವೆ ಘರ್ಷಣೆ, 20 ಜನ ರೈತರ ಬಂಧನ!

ಆದರೂ ಬಿಡದೆ ಸೆರೆಹಿಡಿದ ಹೆಬ್ಬಾವನ್ನು ಕೊನೆಗೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜಾ ಅವರ ಗಮನಕ್ಕೆ ತಂದು ಅವರ ನೇತೃತ್ವದಲ್ಲಿ ಆನೆಕಾಡು ಸಂರಕ್ಷಿತಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇದಕ್ಕೂ ಮುನ್ನಾ ಆನೆಕಾಡಿನ ಮೂಲಕ ಹಾದು ಹೋಗಿರುವ ಹೆದ್ದಾರಿ ಬದಿಯಲ್ಲಿ ಹಾವನ್ನು ಬಾಕ್ಸ್ ನಿಂದ ಹೊರತೆಗೆದಾಗ ಹೆದ್ದಾರಿಯಲ್ಲಿ ಹೋಗುತ್ತಿದ್ದ ಜನರು ಅದನ್ನು ನೋಡಿ ಅಚ್ಚರಿ ಜೊತೆಗೆ ಸಂತೋಷಪಟ್ಟು ಕಣ್ತುಂಬಿಕೊಂಡ್ರು. ಹಾವುಗಳ ಬಗ್ಗೆ ಆಸಕ್ತಿ ಇದ್ದ ಎಷ್ಟೋ ಜನರು ಹಾವಿನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ರು.
Published by: MAshok Kumar
First published: December 14, 2020, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories