• Home
  • »
  • News
  • »
  • district
  • »
  • ಓದಿದ್ದು 3ನೇ ಕ್ಲಾಸು; ಊರಿಗೆ ‘ಎಂಎಲ್ಎ’; 30 ವರ್ಷದಿಂದ ಗ್ರಾ.ಪಂ.ಗೆ ಸ್ಪರ್ಧೆ

ಓದಿದ್ದು 3ನೇ ಕ್ಲಾಸು; ಊರಿಗೆ ‘ಎಂಎಲ್ಎ’; 30 ವರ್ಷದಿಂದ ಗ್ರಾ.ಪಂ.ಗೆ ಸ್ಪರ್ಧೆ

ಲೀಲಾವತಿ

ಲೀಲಾವತಿ

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಗ್ರಾಮವೊಂದರಲ್ಲಿ 75 ವರ್ಷದ ವೃದ್ಧೆಯೊಬ್ಬರು ಆರನೇ ಬಾರಿ ಪಂಚಾಯತ್ ಚುನಾವಣೆಗೆ ಧುಮುಕಿದ್ದಾರೆ. ಈಕೆ ಈ ಭಾಗದ ಖಾಯಂ ಎಂಎಲ್ಎ ಅಂತಾನೂ ಫೇಮಸ್ ಆಗಿದ್ದಾರೆ.

  • Share this:

ಕಾರವಾರ: ರಾಜ್ಯದಲ್ಲಿ ನಡೆಯುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿದೆ. ಇನ್ನೇನು ಅಭ್ಯರ್ಥಿಗಳು ಗೆಲುವಿಗಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅನುಭವಿ ಪಂಚಾಯತ್ ಸದಸ್ಯರನ್ನ ಸೋಲಿಸಲು ಯುವ ಪಡೆ ಕೂಡ ಲೋಕಲ್ ದಂಗಲ್​ಗೆ ಸಿದ್ದರಾಗಿದ್ದಾರೆ. ಆದ್ರೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಮಂಜುಗುಣಿ ಗ್ರಾಮದ ವೃದ್ಧೆ ಲೀಲಾವತಿ ನಾಯ್ಕ ಸತತ ಆರನೇ ಬಾರೀ ಸ್ಪರ್ಧೆ ಮಾಡೋ ಮೂಲಕ ಗಮನ ಸೆಳೆದಿದ್ದಾರೆ. 1993 ರಿಂದ ಇಲ್ಲಿಯವರೆಗೆ ಈಕೆ ಲೋಕಲ್ ಅಖಾಡಕ್ಕೆ ಧುಮುಕಿ ಸಕ್ಸಸ್ ಆಗಿದ್ದಾರೆ. ಒಮ್ಮೆ ಉಪಾಧ್ಯಕ್ಷೆಯಾಗಿ ಕಳೆದ ಬಾರಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಲೀಲಾವತಿ ಮಂಜುಗುಣಿ ಭಾಗದ ಖಾಯಂ ಎಂಎಲ್ಎ ಎಂದೇ ಫೇಮಸ್ ಆಗಿದ್ದಾರೆ. ಯಾವುದೇ ಕೆಲಸ ಇರಲಿ ತಕ್ಷಣವೇ ಓಡಿ ಬರುವ ಲೀಲಾವತಿ, ಊರವರ ಪಾಲಿನ ಎಂಎಲ್ಎ ಕೂಡ ಹೌದು. ತಮ್ಮ ಹೆಸರಿನ ವಿಸಿಟಿಂಗ್ ಕಾರ್ಡ್ ಹಿಡಿದು ಆಯಾ ಇಲಾಖೆಗೆ ತೆರಳಿ ಗ್ರಾಮದ ಯಾವುದೇ ಕೆಲಸ ಇರಲಿ ಮಾಡಿಯೇ ತೀರ್ತಾರೆ.


ಲೀಲಾವತಿ ಓದಿದ್ದು ಮೂರನೇ ತರಗತಿ. ಹೆಚ್ಚಾಗಿ ಅಕ್ಷರಾಭ್ಯಾಸ ಪಡೆಯದ ಈಕೆ ಹಿಂದೆ ಬೆಳಂಬಾರ ಗ್ರಾಮ ಪಂಚಾಯತ್ ಇದ್ದಾಗ 1993ರಲ್ಲಿ ಮಂಜುಗುಣಿ ಭಾಗದ ಸದಸ್ಯೆಯಾಗಿ ಆಯ್ಕೆಯಾಗಿದ್ದಳು. ಆಗ ಊರಿಗೆ ಬೇಕಾಗುವ ಕೆಲಸ ಕಾರ್ಯಗಳನ್ನ ಮಾಡುತ್ತಾ ಬಂದಿದ್ದಾಳೆ. 2015ರಲ್ಲಿ ಊರ ಹತ್ತಿರವೇ ಹೊನ್ನೆಬೈಲ್ ಗ್ರಾಮ ಪಂಚಾಯತ್ ಆಗುವಲ್ಲಿ ಈಕೆಯ ಶ್ರಮ ಕೂಡ ಇದೆ ಅಂತಾರೆ ಸ್ಥಳೀಯರು. ಗ್ರಾಮಕ್ಕೆ ಬೇಕಾಗುವ ರಸ್ತೆ, ವಿದ್ಯುತ್, ಬಸ್ ವ್ಯವಸ್ಥೆ ಸೇರಿದಂತೆ ಊರ ನಾಗರಿಕರ ಬೇಡಿಕೆಗಳಿಗೆ ಈಕೆ ಸ್ಪಂದಿಸಿದ ಕಾರಣಕ್ಕೆ ಊರಲ್ಲಿಯೇ ಲೀಲಾವತಿ ಅಚ್ಚುಮೆಚ್ಚಿನವರಾಗಿದ್ದಾರೆ. ಇಲ್ಲಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾರು ಕಾಲಿಡೋದಿಲ್ಲ. ಎಲ್ಲದಕ್ಕೂ ಊರವರಿಗೆ ಲೀಲಾವತಿ ಓಡಿಬರ್ತಾಳೆ. ಹೀಗಾಗಿ ತಮ್ಮ ಎಂಎಲ್ಎ ಲೀಲಾವತಿ ಈ ಬಾರಿಯೂ ಗೆಲುವು ಸಾಧಿಸುತ್ತಾರೆ ಅಂತಾರೆ ಸ್ಥಳೀಯರು. ಊರ ಜನ ಐದು ವರ್ಷಕ್ಕೆ ಆಯ್ಕೆಯಾಗುವ ಎಂಎಲ್ಎಗಳನ್ನ ನಂಬೋದಿಲ್ಲ. ಆದ್ರೆ ತಮ್ಮ ಮಂಜುಗುಣಿ ಗ್ರಾಮದ ಈ ಎಂಎಲ್ಎ ಅನ್ನ ಮರೆಯೋದೇ ಇಲ್ಲ.


ಇದನ್ನೂ ಓದಿ: ಗ್ರಾಮ ಪಂಚಾಯತ್​​ಗೆ ಹೆಂಡತಿ ಅವಿರೋಧ ಆಯ್ಕೆಯ ಬೆನ್ನಲ್ಲೇ ಗಂಡ ನೇಣಿಗೆ ಶರಣು


ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯೆಯಾದರೂ ತಾನೊಂದು ಸ್ವಂತ ಮನೆ ಮಾಡಿಕೊಂಡಿಲ್ಲ. ಚಿಕ್ಕದಾದ ಮನೆಯಲ್ಲಿಯೇ ಈಕೆ ವಾಸವಾಗಿದ್ದಾಳೆ. ಯಾವುದೇ ಸ್ವಾರ್ಥ ಹೊಂದದೇ ಗ್ರಾಮದ ನಾಗರಿಕರಿಗೆ ಬೇಕಾಗುವ ವಸತಿ ಯೋಜನೆ, ಶೌಚಾಲಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯನ್ನ ತಲುಪಿಸುತ್ತಿದ್ದಾರೆ. ಗ್ರಾಮದ ನಾಗರಿಕರು ಫಲಾನುಭವಿಯಾಗಲು ಬೇಕಾಗುವ ಕೆಲಸವನ್ನ ಈಕೆ ಮಾಡಿಕೊಡುತ್ತಿದ್ದಾಳೆ. ತಮ್ಮೂರಿನಲ್ಲಿ ಇನ್ನೂ ಕೆಲ ಕೆಲಸಗಳು ಬಾಕಿ ಇವೆ. ಈ ಬಾರಿ ಆಯ್ಕೆಯಾದಲ್ಲಿ ಖಂಡಿತವಾಗಿಯೋ ಅವೆಲ್ಲಾ ಕೆಲಸಗಳನ್ನ ಮಾಡಿಕೊಡಬೇಕು ಅಂತಾರೆ ಲೀಲಾವತಿ.


ವರದಿ: ದರ್ಶನ್ ನಾಯ್ಕ್

Published by:Vijayasarthy SN
First published: