Kinnala Art: ಕರುನಾಡಿನ ಕಿನ್ನಾಳ ಕಲೆಗೆ ರಾಷ್ಟ್ರಮಟ್ಟದ ಗೌರವ; ಅಂಚೆ ಚೀಟಿಯಲ್ಲಿ ಆಗಲಿದೆ ಅಜರಾಮರ

ಕಿನ್ನಾಳ ಕಲೆಯ ಸೌಂದರ್ಯ ಇನ್ಮುಂದೆ ಅಂಚೆ‌ ಲಕೋಟೆಗಳ ಮೇಲೆ ರಾರಾಜಿಸಲಿದೆ. ಕಿನ್ನಾಳ ಕಲೆಯ ಮೂಲಕ ರಾರಾಜಿಸಲಿರುವ ಅಂಚೆ‌ ಲಕೋಟೆಗಳು ನಾಳೆ ಆಗಸ್ಟ್  31 ರಂದು ಕಿನ್ನಾಳದಲ್ಲಿಯೇ ಬಿಡುಗಡೆಯಾಗಲಿವೆ.

ಕಿನ್ನಾಳ ಕಲೆ

ಕಿನ್ನಾಳ ಕಲೆ

  • Share this:
ಕೊಪ್ಪಳ : ವಿಶಿಷ್ಠ ಕಲಾಕೃತಿಗಳ ಮೂಲಕ ಪ್ರಸಿದ್ದಿ ಪಡೆದಿರುವ ಕೊಪ್ಪಳದ ಪಾರಂಪರಿಕ ಕಿನ್ನಾಳ ಕಲೆ ಈಗ ಅಂಚೆ ಕಚೇರಿಯ ಲಕೋಟೆಗಳಲ್ಲಿ ಮುದ್ರಿತವಾಗುವ ಮೂಲಕ ಹೊಸ ಮೈಲಿಗಲ್ಲು ಮುಟ್ಟಿದೆ. ಈ ಮೂಲಕ ಕಿನ್ನಾಳ ಕಲೆ ತನ್ನ ಹಿರಿಮೆ ಗರಿಮೆಗಳನ್ನು ಮತ್ತಷ್ಟು ಪಸರಿಸಲಿದೆ.ವಿಜಯನಗರ ಸಾಮ್ರಾಜ್ಯದ ಕಾಲ ಪಾರಂಪರಿಕ ಕಲೆಯಾಗಿರುವ ಕಿನ್ನಾಳ ಕಲೆ ಅತ್ಯಂತ ಪ್ರಸಿದ್ದಿ ಪಡೆದಿಕೊಂಡಿರುವ ಕಲೆಯಾಗಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಚಿತ್ರಗಾರ ಕುಟುಂಬಗಳು ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿವೆ.

2013 ಜನವರಿ 26 ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಕಿನ್ನಾಳ‌ಕಲೆ  ಸ್ತಬ್ದ ಚಿತ್ರದ ಮೂಲಕ ಗಮನ ಸೆಳೆದಿತ್ತು. ಗ್ರಾಮ ದೇವತೆಗಳ ಮೂರ್ತಿಗಳು, ಬಷ್ಣದ ಗೌರಿ, ಜಯವಿಜಯ, ಗೊಂಬೆಗಳು, ಹಣ್ಣಿನ ಬುಟ್ಟಿ, ವಾಲ್‌ಪ್ಲೇಟ್ ಗಳು ಸೇರಿದಂತೆ ಮನಸೂರೆಗೊಳ್ಳುವ ಕಲಾಕೃತಿಗಳನ್ನು ಕಿನ್ನಾಳ ಕಲೆಯ ಕಲಾವಿದರು ತಯಾರಿಸುತ್ತಾರೆ. ವಿಶಿಷ್ಠ ಬಣ್ಣದ ಮೂಲಕ ಈ ಕಲಾಕೃತಿಗಳು ತಮ್ಮ ಹಿರಿಮೆ ಗರಿಮೆಯನ್ನು ಸಾರುತ್ತವೆ.

ಇಂತಹ ಕಿನ್ನಾಳ ಕಲೆಯನ್ನು ಭಾರತ ಸರ್ಕಾರ‌ ಅಂಚೆ ಇಲಾಖೆಯ ಮತ್ತಷ್ಟು ಪ್ರಚುರಪಡಿಸಲು ಮುಂದಾಗಿದೆ. ದೇಶದ ವಿವಿಧ ಸುಮಾರು 250 ಭೌಗೋಳಿಕ ಪ್ರದೇಶಗಳ ವಿಶೇಷತೆಯನ್ನು ಅಂಚೆ ಲಕೋಟೆಗಳಲ್ಲಿ ಮುದ್ರಿಸಿ ಬಿಡುಗಡೆ ಮಾಡಲಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಕಿನ್ನಾಳ ಕಲೆಯ ಆಯ್ಕೆಗೊಂಡಿದ್ದು ಕಿನ್ನಾಳ ಕಲೆಯ ಸೌಂದರ್ಯ ಇನ್ಮುಂದೆ ಅಂಚೆ‌ ಲಕೋಟೆಗಳ ಮೇಲೆ ರಾರಾಜಿಸಲಿದೆ. ಕಿನ್ನಾಳ ಕಲೆಯ ಮೂಲಕ ರಾರಾಜಿಸಲಿರುವ ಅಂಚೆ‌ ಲಕೋಟೆಗಳು ನಾಳೆ ಆಗಸ್ಟ್  31 ರಂದು ಕಿನ್ನಾಳದಲ್ಲಿಯೇ ಬಿಡುಗಡೆಯಾಗಲಿವೆ. ಪಾರಂಪರಿಕ ಐತಿಹಾಸಿಕ ಕಿನ್ನಾಳ‌ ಕಲೆಯು ಅಂಚೆ‌ ಲಕೋಟೆಯ ಮೇಲೆ ಮುದ್ರಿಸಿ ಪ್ರಚುರಪಡಿಸಲು ಮುಂದಾಗಿರುವ ಸರ್ಕಾರ ಹಾಗೂ ಅಂಚೆ‌ ಇಲಾಖೆಯ ಈ ಕಾರ್ಯಕ್ಕೆ ಕಿನ್ನಾಳ ಕಲೆಯ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬದುಕು ಬದಲಿಸಿದ ಯೂಟ್ಯೂಬ್ ಚಾನಲ್..! ಪಾಠ ಮಾಡುವ ಶಿಕ್ಷಕ ಮಾದರಿ ಕೃಷಿಕನಾದ ಕತೆ..

ವಿಶಿಷ್ಠ ಕಲೆಯಾಗಿರುವ ಕಿನ್ನಾಳ ಕಲೆಯ ಕಲಾಕೃತಿಗಳನ್ನು ಇನ್ನು ಹೆಚ್ಚು ಹೆಚ್ಚು ಪಸರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಿನ್ನಾಳ ಕಲೆಯ ಕಲಾವಿದರು ಮನವಿ ಮಾಡಿದ್ದಾರೆ. ಒಟ್ನಲ್ಲಿ ವಿಶ್ವಪ್ರಸಿದ್ದಿ ಪಡೆದುಕೊಂಡಿರುವ ಕಿನ್ನಾಳ ಕಲೆಯನ್ನು ಮತ್ತಷ್ಟು ಪಸರಿಸಲು ಅಂಚೆ‌‌ ಲಕೋಟೆಗಳಲ್ಲಿ ಮುದ್ರಿಸುತ್ತಿರುವುದು ಉತ್ತಮ ವೇದಿಕೆ ಸಿಕ್ಕಂತಾಗಿದೆ.ಕಿನ್ನಾಳ ಕಲೆಯು ಈಗಲೂ ಜೀವಂತಿಕೆ ಹೊಂದಿದ್ದು, ಇಲ್ಲಿ ಕಲಾವಿದರ ಕಲೆಗಳು ಸಾಕಷ್ಟು ಜನರ ಆಕರ್ಷಿಸುತ್ತಿವೆ, ಇತ್ತೀಚಿಗೆ ಕಾರ್ಯಕ್ರಮಗಳಲ್ಲಿ ಕಿನ್ನಾಳ ಚೌಕಿಗಳನ್ನು ಕಾಣಿಕೆಯಾಗಿ ಸಲ್ಲಿಕೆಯಾಗುತ್ತಿವೆ, ದೇವರ ಮೂರ್ತಿಗಳು ಸಹ ತಯಾರಿಸುತ್ತಿದ್ದಾರೆ, ಹಳೆಯ ಮೂರ್ತಿಗಳಿಗೆ ಬಣ್ಣ ಹಚ್ಚಿ ಹೊಳಪು ಮೂಡಿಸುತ್ತಿವೆ, ಈಗ ಅಂಚೆ ಇಲಾಖೆಯು ಕಿನ್ನಾಳ ಕಲೆಗೆ ಮನ್ನಣೆ ನೀಡಿದ್ದು ಸಾಂಪ್ರದಾಯಿಕ ಕಲೆಯ ಮುಂದುವರಿಸಿಕೊಂಡು ಹೋಗಲು ಸಹಕಾರಿಯಾಗಲಿದೆ ಎಂದು ಕಲಾವಿದ ಶ್ರೀನಿವಾಸ ಚಿತ್ರಗಾರ ಹೇಳಿದ್ದಾರೆ.



ಅಂಚೆ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲು ಬಾರಿ ಅಂಚೆ ಲಕೋಟೆ ಬಿಡುಗಡೆ ಮಾಡುತ್ತಿದೆ, ಈ ನಿಟ್ಟಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯು ಸ್ಥಳೀಯ ಅಂಚೆ ಇಲಾಖೆಯ ಸಹಕಾರದಿಂದ ಕಿನ್ನಾಳ ಗೊಂಬೆಗಳ ಕಲೆ ರಾಷ್ಟ್ರ ಗೌರವ ಸಿಗುತ್ತಿರುವುದು ಹೆಮ್ಮೆಯ ವಿಷಯ ಎನ್ನುತ್ತಾರೆ, ಗದಗ ಅಂಚೆ ವಿಭಾಗದ ಸುಪರಿಟಿಡೆಂಟ್ ಚಿದಾನಂದಪ್ಪ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: