ಕಿಮ್ಸ್ ಯಡವಟ್ಟು; ಅಂತ್ಯಸಂಸ್ಕಾರದ ನಂತರ ಬಯಲಾಯಿತು ಸೋಂಕು ವಿಚಾರ; ಗುತ್ತಲ ಜನರು ಕಂಗಾಲು

ಶವ ಸಂಸ್ಕಾರದ ಬಳಿಕ ಕೊರೋನಾ ಪಾಸಿಟಿವ್ ಅಂಶ ಬೆಳಕಿಗೆ ಬಂದಿದೆ. ಶವ ಸಂಸ್ಕಾರಕ್ಕೆ ಹೋಗಿದ್ದ ಜನರು, ಪೂಜೆ ಮಾಡಿದ ಸ್ವಾಮಿಗೆ ಆತಂಕ ಸೃಷ್ಟಿಯಾಗಿದೆ. ಅದೇ ಪೂಜಾರಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿದ್ದ ಶಾಸಕರ, ತಹಶೀಲ್ದಾರ್ ಮೊದಲಾದವರಿಗೂ ಭಯ ಶುರುವಾಗಿದೆ.

news18-kannada
Updated:July 8, 2020, 3:18 PM IST
ಕಿಮ್ಸ್ ಯಡವಟ್ಟು; ಅಂತ್ಯಸಂಸ್ಕಾರದ ನಂತರ ಬಯಲಾಯಿತು ಸೋಂಕು ವಿಚಾರ; ಗುತ್ತಲ ಜನರು ಕಂಗಾಲು
ಹಾವೇರಿಯಲ್ಲಿ ಸೀಲ್ ಡೌನ್ ಮಾಡಲಾದ ಪ್ರದೇಶ
  • Share this:
ಹಾವೇರಿ: ಮೃತ ವ್ಯಕ್ತಿಗೆ ಸೋಂಕು ಇರುವುದು ಗೊತ್ತಿಲ್ಲದೆಯೇ ಅಂತ್ಯಸಂಸ್ಕಾರ ನಡೆದ ಘಟನೆ ಇಲ್ಲಿ ನಡೆದಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರಿಗೆ ಈಗ ಕೊರೋನಾ ಭೀತಿ ಶುರುವಾಗಿದೆ. ಜನರು ಇಲ್ಲಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜಿಲ್ಲೆಯ ಗುತ್ತಲ ಪಟ್ಟಣದ ಬಿಸಲಪ್ಪ ಮರಿಯಾನಿ (72) ಎಂಬ ವೃದ್ಧ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಗುತ್ತಲದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಸೋಮವಾರ ಸಂಜೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೃತ ವೃದ್ಧನಿಗೆ ಕೋರೊನಾ ಸೋಂಕು ಇರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್​ನಿಂದ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಸಿಲುಕಿದ ಫ್ರಾನ್ಸ್​ ಪ್ರವಾಸಿಗ ಈಗ ಅಪ್ಪಟ ಕನ್ನಡಿಗ!

ಶವ ಸಂಸ್ಕಾರಕ್ಕೆ ಹೋಗಿದ್ದ ಜನರು, ಪೂಜೆ ಮಾಡಿದ ಸ್ವಾಮಿಗಳು, ಕುಟುಂಬಸ್ಥರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಬೆಳಗ್ಗೆ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಸ್ವಾಮಿ ಸಂಜೆ ನಡೆದ ಗುತ್ತಲದ ನೂತನ ನಾಡಕಛೇರಿಯ ಗುದ್ದಲಿ ಪೂಜೆಯಲ್ಲೂ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಶಾಸಕರು, ತಹಶೀಲ್ದಾರ್, ಜನಪ್ರತಿನಿಧಿಗಳು, ಪಿಎಸ್ಐ, ಮುಖ್ಯಾಧಿಕಾರಿ ಸೇರಿದಂತೆ ಅನೇಕರಿದ್ದರು.ಪೊಲೀಸರು ವೃದ್ದನ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದಾರೆ. ಗುತ್ತಲ ಪಟ್ಟಣದ ಜನತೆ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
Published by: Vijayasarthy SN
First published: July 8, 2020, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading