ಗದಗ(ಏಪ್ರಿಲ್ 10): ಆಧುನಿಕತೆಯ ಹೊಡೆತಕ್ಕೆ ಗ್ರಾಮೀಣ ಸಂಸ್ಕೃತಿ ಮಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗದಗ ವಿಶ್ವವಿದ್ಯಾಲಯದಲ್ಲಿ ಇವತ್ತು ಎತ್ತ ಕಣ್ಣು ಹಾಯಿಸಿದ್ರೂ ಗ್ರಾಮೀಣ ಸೊಗಡಿನ ಚಿತ್ರಣವೇ ಕಣ್ಣಿಗೆ ಕಾಣುತ್ತಿತ್ತು. ಈ ಕಲರ್ ಫುಲ್ ಗ್ರಾಮೀಣ ದೃಶ್ಯಗಳು ಕಂಡು ಬಂದಿದ್ದು ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ.
ಏಪ್ರಿಲ್ 10ಕ್ಕೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದ್ರು. ಘಟಿಕೋತ್ಸವದಲ್ಲಿ ಎಂಎ ಆರ್ಡಿಪಿಆರ್, ಎಂಬಿಎ, ಎಂಎಸ್ಸಿ ಸೇರಿ ಹಲವು ಸ್ನಾತಕೋತ್ತರ ಪದವಿ ಮುಗಿಸಿದ 250 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಚಿನ್ನದ ಬೇಟೆಯಾಡೋದ್ರಲ್ಲಿ ಇಲ್ಲೂ ಹುಡಗಿಯರದ್ದೇ ಮೈಲುಗೈಯಾಗಿತ್ತು. 36 ಚಿನ್ನದ ಪದಕ ಗಿಟ್ಟಿಸಿದವ್ರಲ್ಲಿ 22 ವಿದ್ಯಾರ್ಥಿನಿಯರೇ ಇದ್ದಾರೆ. 14 ವಿದ್ಯಾರ್ಥಿಗಳು ಮಾತ್ರ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಈ ಘಟಿಕೋತ್ಸವದಲ್ಲಿ ಗ್ರಾಮೀಣ ಕಲೆ, ಸಂಸ್ಕೃತಿಯ ಲೋಕವೇ ಅನಾವರಣಗೊಂಡಿತ್ತು. ಬಂದವ್ರೆಲ್ಲಾ ಇದು ಘಟಿಕೋತ್ಸವ ಕಾರ್ಯಕ್ರಮವೋ ಅಥವಾ ಗ್ರಾಮೀಣ ಸೊಗಡಿನ ಹಬ್ಬವೋ ಎನಿಸುವಂತೆ ಭಾಸವಾಗಿತ್ತು. ಪಟ್ಟಣದ ಹಡುಗಿಯರಂತೂ ಈ ಗ್ರಾಮೀಣ ಸೊಗಡಿಗೆ ಮಾರು ಹೋಗಿದ್ರು. ಇವತ್ತು ಎಲ್ಲ ಹುಡಿಗಿಯರು ಪಕ್ಕಾ ಹಳ್ಳಿಯ ಶೈಲಿಯ ಖಾದಿ ಸೀರೆ ತೊಟ್ಟು ಶೃಂಗಾರಗೊಂಡಿದ್ರು. ವಿದ್ಯಾರ್ಥಿನಿಯರು ಖಾದಿ ಸೀರೆ ತೊಟ್ಟು ಬಂದ್ರೆ, ವಿದ್ಯಾರ್ಥಿಗಳು ನೆಹರು ಶರ್ಟ್, ಖಾದಿ ಪ್ಯಾಂಟ್ ಗಾಂಧಿ ಟೋಪಿ ಹಾಕಿಕೊಂಡು ಬಂದಿದ್ರು.
ವಿದ್ಯಾರ್ಥಿಗಳ ಖಾದಿ ಉಡುಗೆ ನೋಡಿದ್ರೆ ನಾವು ಎಲ್ಲೋ ಖಾದಿ ಲೋಕಕ್ಕೆ ಬಂದಿದ್ದೇವೆಯೋ ಅನ್ನೋ ರೀತಿ ಭಾಸವಾಗ್ತಿತ್ತು. ವಿಶ್ವವಿದ್ಯಾಲಯ ಆವರಣದ ಒಳಗೆ ಕಾಲಿಟ್ರೆ ಸಾಕು ಅಲ್ಲಿ ಗ್ರಾಮೀಣ ಸೊಗಡಿನ ಕಲಾಕೃತಿಗಳು ಎಲ್ಲರ ಗಮನ ಸೆಳೆಯುತ್ತವೆ. ಅಂದು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೇಗೆ ನಡೆಯುತ್ತಿತ್ತು ಅನ್ನೋ ಕಲಾಕೃತಿ ನೋಡಿದ ಪೇಟೆ ಯುವತಿಯರು ಸೀರೆ ತೊಟ್ಟು ನಾವು ಒಂದು ಕೈ ನೋಡೋಣ ಎನ್ನುವಂತಿದ್ದರು. ಮತ್ತೊಂದು ಕಡೆ ಗ್ರಾಮೀಣ ಭಾಗದ ಗುಡಿ ಕೈಗಾರಿಕೆ ದೃಶ್ಯಗಳು ವಿದ್ಯಾರ್ಥಿಗಳ ಮನಸೆಳೆಯಿತು.
ಹೀಗೆ ಹಲವಾರು ಗ್ರಾಮೀಣ ಸೊಗಡಿನ ಅನಾವರಣದ ದೃಶ್ಯಗಳು ಈಗಿನ ಪೀಳಿಗೆಯ ಮನಸೂರೆಗೊಂಡವು. ಈ ಕಲಾಕೃತಿಗಳ ಬಳಿ ನಿಂತು ಕಲರಫುಲ್ ಸೀರೆ ತೊಟ್ಟ ನಾರಿಯರು ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಅಲ್ಲಿ ಬಂದ ವಿದ್ಯಾರ್ಥಿಗಳ ಪೋಷಕರು ಕೂಡಾ ಈ ಸಂಭ್ರಮದಲ್ಲಿ ಪಾಲ್ಗೊಂಡರು. ಪ್ರತಿಯೊಬ್ಬ ವಿದ್ಯಾರ್ಥಿನಿ, ವಿದ್ಯಾರ್ಥಿನಿಯರು ಹಾಗೂ ಪ್ರೋಫೆಸರ್ ಗಳು ಕೂಡ ಇವತ್ತು ಖಾದಿ ಬಟ್ಟೆಗಳು ತೊಡುವ ಮೂಲಕ ಗಾಂಧಿಜೀಯವ್ರ ಖಾದಿ ಕನಸು ನನಸು ಮಾಡಿದಂತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ