• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ ಮಾತ್ರ ದೇಶದಲ್ಲಿ ಕಷ್ಟಗಳು: ಮಾಜಿ ಸಂಸದ ಕೆ.ಎಚ್. ಮುನಿಯಪ್ಪ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ ಮಾತ್ರ ದೇಶದಲ್ಲಿ ಕಷ್ಟಗಳು: ಮಾಜಿ ಸಂಸದ ಕೆ.ಎಚ್. ಮುನಿಯಪ್ಪ

ಕೆಎಚ್ ಮುನಿಯಪ್ಪ

ಕೆಎಚ್ ಮುನಿಯಪ್ಪ

ದೇಶದಲ್ಲಿ ಜಿಡಿಪಿ ಕುಸಿಯುತ್ತಿದ್ದು, ನಿರುದ್ಯೋಗ ಸಮಸ್ಯೆ, ಬಡತನದೇಶವನ್ನು ಕಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ವೇಳೆ ಇಂತಹ ಕಷ್ಟಕರ ದಿನಗಳು ಬಂದಿಲ್ಲ ಎಂದು ಕೋಲಾರದ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹೇಳಿದ್ದಾರೆ.

  • Share this:
    top videos

      ಕೋಲಾರ: ಭಾರತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಮಾತ್ರ ದೇಶಕ್ಕೆ ಕಷ್ಟದ ದಿನಗಳು  ಎದುರಾಗುತ್ತಿವೆ ಎಂದು ಕೋಲಾರದಲ್ಲಿ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಕೊರೋನಾ ಲಾಕ್ ಡೌನ್ ತೆರವು ನಂತರ ಮೊದಲ‌ ಬಾರಿಗೆ ಕೋಲಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ, ಡಿಕೆ ಶಿವಕುಮಾರ್​ಗೆ ಶುಭ ಹಾರೈಸಿದರು.

      ಡಿಕೆ ಶಿವಕುಮಾರ್ ಅವರು ನಿಷ್ಟಾವಂತ ಕಾಂಗ್ರೆಸ್ ನಾಯಕರಾಗಿದ್ದು ವರಿಷ್ಟರು ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಮುಂದೆ ಡಿಕೆಶಿ ಸಾರಥ್ಯ, ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಕಾಂಗ್ರೆಸ್  ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕೊರೊನಾ ಸಂಕಷ್ಟ ಸಮಯದಲ್ಲೂ ತೈಲಬೆಲೆ ಏರಿಕೆ ಜನರಿಗೆ‌ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ದೇಶದಲ್ಲಿ ಜಿಡಿಪಿ ಕುಸಿಯುತ್ತಿದ್ದು, ನಿರುದ್ಯೋಗ ಸಮಸ್ಯೆ, ಬಡತನದೇಶವನ್ನು ಕಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ವೇಳೆ ಇಂತಹ ಕಷ್ಟಕರ ದಿನಗಳು ಬಂದಿಲ್ಲ ಎಂದು ಅಭಿಪ್ರಾಯಪಟ್ಟ ಕೆಎಚ್ ಮುನಿಯಪ್ಪ ಅವರು, ಸೈನಿಕರ ವಿಚಾರದಲ್ಲಿ ವಿರೋಧ ಪಕ್ಷಗಳು ಮಾಹಿತಿ ಕೇಳುತ್ತಿದ್ದರೂ ಮೋದಿಯವರು ನಿರ್ಲಕ್ಷ್ಯ ತೋರಿದ್ದಾರೆಂದು ಕಿಡಿಕಾರಿದರು.

      ಇದನ್ನೂ ಓದಿ: MPM Factory: ಭದ್ರಾವತಿ ಎಂಪಿಎಂ ಕಾರ್ಖಾನೆ  ಪುನರಾರಂಭ?; ಕಾರ್ಮಿಕರಲ್ಲಿ ಹೊಸ ಭರವಸೆ ಮೂಡಿಸಿದ ಕೈಗಾರಿಕಾ ಸಚಿವರ ಭೇಟಿ

      27 ವರ್ಷದಿಂದ ಕೋಲಾರದಲ್ಲಿ ಅಭಿವೃದ್ಧಿ  ಆಗಿಲ್ಲವೆಂಬ ಆರೋಪಕ್ಕೆ ಮುನಿಯಪ್ಪ ಮೌನ:

      ಕಳೆದ ವಾರ ಕೋಲಾರ ಜಿಲ್ಲೆಯ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕಳೆದ 27 ವರ್ಷದಿಂದ ಕೋಲಾರ ಜಿಲ್ಲೆಯಲ್ಲಿ ನಡೆಯದ ಅಭಿವೃದ್ಧಿ ಕೆಲಸಗಳು, ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಆಯ್ಕೆಯಾದ ಒಂದು ವರ್ಷದಲ್ಲೇ ನೋಡುತ್ತಿದ್ದೇವೆ ಎಂದು, ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದರನ್ನ ಹಾಡಿ ಹೊಗಳಿದ್ದರು. ಇದೀಗ ಮಾಧ್ಯಮದವರು ಕೆಎಚ್ ಮುನಿಯಪ್ಪರನ್ನ ಈ ಬಗ್ಗೆ ಪ್ರಶ್ನೆ ಮಾಡಿದಾಗಲು, ಉತ್ತರ ನೀಡಲು ಮುನಿಯಪ್ಪ ಅವರು ಮುಂದಾಗಲಿಲ್ಲ.

      ಕೆಎಚ್ ಮುನಿಯಪ್ಪ ಅವರ ಪಕ್ಕದಲ್ಲೇ ಇದ್ದ ಕೆ ಚಂದ್ರಾರೆಡ್ಡಿ ಅವರು ಈ ವೇಳೆ ಮದ್ಯ ಪ್ರವೇಶಿಸಿದರು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ನಂತರ ಅವರೊಂದಿಗೆ ನಾನು ಚರ್ಚೆ ಮಾಡಿದ್ದೇನೆ. ಅವರ ಹೇಳಿಕೆ ಕಾರ್ಯಕಮಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಚಂದ್ರಾರೆಡ್ಡಿ ಸಮಜಾಯಿಷಿ ನೀಡಿದರು.



      ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆಎಚ್ ಮುನಿಯಪ್ಪ ವಿರುದ್ದದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರೇ ಕೆಲಸ ಮಾಡಿದ್ದಾರೆಂದು ವರಿಷ್ಟರಿಗೆ ಮುನಿಯಪ್ಪ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಕುರಿತ ಪ್ರಶ್ನೆಗೂ ಮುನಿಯಪ್ಪ ಅವರು ಉತ್ತರ ನೀಡದೆ "ಮುಂದೆ ಸಮಯ ಬಂದಾಗ ಮಾತಾಡುವೆ" ಎಂದರು. ಇದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನ ತೋರಿಸುವಂತಿದೆ.

      First published: