news18-kannada Updated:January 29, 2021, 2:57 PM IST
ಕೆರಗೋಡು ಅಂಚೆಕಚೇರಿ.
ಮಂಡ್ಯ: ಅಂಚೆ ಕಚೇರಿಯ ಉಳಿತಾಯ ಖಾತೆ ತೆರೆದು ಮಹಿಳೆಯೋರ್ವಳು ಅನಾರೋಗ್ಯದಿಂದ ಮೃತ ಪಟ್ಟಿದ್ದಳು. ಮೃತಪಟ್ಟಿದ್ದ ಆ ಮಹಿಳೆಯ ಖಾತೆಯಿಂದ ಸಾವಿರಾರು ರೂ. ಹಣವನ್ನು ಅಲ್ಲಿನ ಅಧಿಕಾರಿಗಳು ಡ್ರಾ ಮಾಡಿ ಗುಳುಂ ಮಾಡಿರುವ ಘಟನೆ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿ ಇದೀಗ ಡ್ರಾ ಮಾಡಿಕೊಂಡಿರುವ ಹಣ ಕೊಡುವುದಾಗಿ ಹೇಳಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾರೆ.
ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿರುವ ಅಂಚೆ ಕಚೇರಿಯಲ್ಲಿ ಈ ಒಂದು ಪ್ರ ಕರಣ ತಡವಾಗಿ ಬೆಳಕಿಗೆ ಬಂದಿದೆ.ಈ ಗ್ರಾಮದ ಉಪ ಅಂಚೆಕಚೇರಿಯಲ್ಲಿ ಅದೇ ಗ್ರಾಮದ ವಿಜಯಾಂಭ ಎಂಬ ಮಹಿಳೆ ಉಳಿತಾಯ ಖಾತೆ ತೆರೆದು ಅಲ್ಪಸ್ವಲ್ಪ ಹಣ ಉಳಿ ಸಿ ಇಟ್ಟಿದ್ರು. 2011ರಲ್ಲಿ ವಿಜಯಾಂಭ ಅನಾರೋಗ್ಯದಿಂದ ಮೃತಪಟ್ಟಿದ್ದರು .ಆದರೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದು ಹಣ ಇಟ್ಟಿರುವ ಬಗ್ಗೆ ಮನೆಯವರಿಗೆ ತಿಳಿದಿರಲಿಲ್ಲ. ಇತ್ತೀಚೆಗೆ ಮನೆಯನ್ನು ಸ್ವಚ್ಚಗೊಳಿಸುವ ವೇಳೆ ಮೃತ ವಿಜಯಾಂಭ ಗ್ರಾಮದ ಅಂಚೆ ಕಚೇರಿಯಲ್ಲಿ ತೆರೆದಿದ್ದ ಉಳಿತಾಯ ಖಾತೆಯ ಪಾಸ್ ಪುಸ್ತಕ ದೊರೆತಿದೆ. ಖಾತೆಯಲ್ಲಿ 20 ಸಾವಿರ ಹಣವಿರೋದು ಕಂಡು ಬಂದ ಹಿನ್ನೆಲೆಯಲ್ಲಿ ಸಂಬಂಧಿಕರು ಪಾಸ್ ಪುಸ್ತಕ ತೆಗೆದುಕೊಂಡು ಕೆರೆಗೋಡು ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ 2016 ರಲ್ಲಿ ಈ ಖಾತೆಯಿಂದ 19 ಸಾವಿರ ರೂ. ಹಣವನ್ನು ವಿತ್ ಡ್ರಾ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇದನ್ನು ಕೇಳಿದ ಸಂಬಂಧಿಕರಿಗೆ ಶಾಕ್ ಆಗಿದೆ. ಈ ಸಂಬಂಧ ಮಂಡ್ಯ ಮುಖ್ಯ ಅಂಚೆಕಚೇರಿಗೆ ಬಂದು ಸಂಬಂಧಿರು ದೂರು ನೀಡಿದ್ದಾರೆ.
ಇದನ್ನು ಓದಿ: President Speech - ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ದುರದೃಷ್ಟಕರ: ರಾಷ್ಟ್ರಪತಿ ರಾಮನಾಥ್ ಕೋವಿಂದ್
ಇನ್ನು ಈ ಪ್ರಕರಣ ಮುಖ್ಯ ಅಂಚೆ ಕಚೇರಿಯ ಅಧೀಕ್ಷಕರ ಗಮನಕ್ಕೆ ಬರುತ್ತಿದ್ದಂತೆ ಕೆರಗೋಡಿನ ಉಪ ಕಚೇರಿಯ ಅಧಿಕಾರಿಗಳು ದೂರುದಾರ ಸಂಬಂಧಿಕರನ್ನು ಸಂಪರ್ಕ ಮಾಡಿ ತಮ್ಮ ಸಂಬಂಧಿಕರ ಖಾತೆಯ ಹಣ ವಾಪಸ್ಸು ಕೊಡುವ ಭರವಸೆ ನೀಡಿದ್ದಾರೆ. ಬಳಿಕ ಮೇಲಧಿಕಾರಿಗಳಿಗೆ ನೀಡಿರುವ ದೂರು ವಾಪಸ್ಸು ಪಡೆಯುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಸಂಬಂಧಿಕರು ಮಾತ್ರ ದೂರು ವಾಪಸ್ಸು ಪಡೆಯದೆ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಆದರೆ ಮೇಲಧಿಕಾರಿಗಳು ಕೂಡ ಈ ಪ್ರಕರಣ ಮುಚ್ಚಿ ಹಾಕುವ ಕೆಲಸಕ್ಕೆ ಕೈ ಜೋಡಿಸಿದ್ದು, ಕ್ರಮ ಜರುಗಿಸಲು ಮೀನಾಮೇಷಾ ಎಣಿಸುತ್ತಿದ್ದಾರೆ. ಇ್ದರಿಂದ ಬೇಸತ್ತಿರುವ ಮೃತಳ ಸಂಬಂಧಿಕರು ಇದೀಗಿ ಬೆಂಗಳೂರಿನ ಕೇಂದ್ರ ಕಚೇರಿಗೆ ದೂರು ನೀಡಲು ಮುಂದಾಗಿದ್ದಾರೆ.
ಒಟ್ಟಾರೆ ಕೆರೆಗೋಡು ಉಪ ಅಂಚೆ ಕಚೇರಿಯಲ್ಲಿ ನಡೆದಿರುವ ಈ ಪ್ರಕರಣ ಜಿಲ್ಲೆಯ ಅಂಚೆ ಇಲಾಖೆಯಲ್ಲಿ ಈ ರೀತಿ ಯ ಸಾಕಷ್ಟು ಅಕ್ರಮಗಳು ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಕಚೇರಿಯ ಮೇಲಧಿಕಾರಿಗಳು ಹೆಚ್ಚಿನ ತನಿಖೆ ನಡೆಸುವ ಮೂಲಕ ಅಕ್ರಮ ಎಸಗುವ ಅಧಿಕಾರಿಗಳಿಗೆ ಬಿಸಿ ಮಟ್ಟಿಸುವ ಕೆಲಸ ಮಾಡಬೇಕಿದೆ.
Published by:
HR Ramesh
First published:
January 29, 2021, 2:57 PM IST