ರಾಜ್ಯಸಭೆ ಚುನಾವಣೆ ಹೆಸರಲ್ಲಿ ಕತ್ತಿ ಸಹೋದರರ ರಾಜಕೀಯ ದಾಳ; ಸಿಎಂಗೆ ತಲೆನೋವಾದ ಬೆಳಗಾವಿ ಬೆಂಕಿ..!

ಹಿರಿಯ ಬಿಜೆಪಿ ಶಾಸಕ ಉಮೇಶ ಕತ್ತಿಗೆ ಬೆಳಗಾವಿಯ ದಕ್ಷಿಣ ವಿಧಾನಸಭೆ ಕ್ಷೇತ್ರ ಶಾಸಕ ಅಭಯ ಪಾಟೀಲ್ ಸೇರಿ ಅನೇಕರು ಸಾಥ್ ನೀಡಿದ್ದಾರೆ. ಉಮೇಶ ಕತ್ತಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಜೈನ್ ಕೋಟಾದಡಿ ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಿ ಎಂದು ಅಭಯ ಪಾಟೀಲ್ ಸಹ ಬೇಡಿಕೆ ಇಟ್ಟಿದ್ದಾರೆ.

ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ

ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ

  • Share this:
ಬೆಳಗಾವಿ(29): ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದು ಬೆಳಗಾವಿಯ ರಾಜಕಾರಣ. ಇದೀಗ ಸಿಎಂ ಬಿಎಸ್ ಯಡಿಯೂರಪ್ಪನವರ ತಲೆನೋವಿಗೂ ಬೆಳಗಾವಿಯ ರಾಜಕಾರಣ ಕಾರಣವಾಗಿದೆ. ರಾಜ್ಯಸಭೆ ಚುನಾವಣೆ ಹೆಸರಲ್ಲಿ ಕತ್ತಿ ಸಹೋದರರು ಹೊಸ ದಾಳ ಉರುಳಿಸಿದ್ದಾರೆ. ಇದು ಯಾವ ರೀತಿಯ ಬೆಳೆಯಲಿದೆ ಎಂಬ ಕೂತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.

ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರು, ಕತ್ತಿ ಸಹೋದರರು ಪವರ್ ಫುಲ್. ಆದರೆ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಕತ್ತಿ ಸಹೋದರರಿಗೆ ರಾಜಕೀಯದಲ್ಲಿ ಹಿನ್ನಡೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಕತ್ತಿ ಬಿಜೆಪಿಯ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ರಮೇಶ್​ ಕತ್ತಿ ಕೈ ತಪ್ಪಿ ಅಣ್ಣಾಸಾಬ ಜೊಲ್ಲೆ ಪಾಲಾಗಿತ್ತು. ಆಗಲೇ ಕತ್ತಿ ಸಹೋದರರು ನಿಗಿನಿಗಿ ಕೆಂಡವಾಗಿದ್ದು. ಈ ಸಂದರ್ಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಕತ್ತಿ ಸಹೋದರರ ಸಮಾಧಾನ ಮಾಡಿದ್ದರು.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಮೇಶ್​ ಕತ್ತಿ ಸಚಿವರಾಗಿಯೇ ಬಿಟ್ಟರು ಅಂತ ಸುದ್ದಿ ಹಬ್ಬಿತ್ತು. ಆದರೆ ಕೊನೆ ಘಳಿಗೆಯಲ್ಲಿ ಈ ನೀರಿಕ್ಷೆ ಸಹ ಹುಸಿಯಾಗಿತ್ತು.  ಡಿಸಿಎಂ ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸವದಿ ಅವರನ್ನು ಎಂಎಲ್ ಸಿ ಮಾಡಿ ಡಿಸಿಎಂ ಮಾಡಲಾಗಿತ್ತು. ಇದು ಸಹ ಕತ್ತಿ ಸಹೋದರಿಗೆ ಇರುಸು-ಮುರುಸು ಉಂಟು ಮಾಡಿತ್ತು. ಎಲ್ಲಾ ಅವಮಾನ ಸಹಿಸಿಕೊಂಡು ಕಾಯುತ್ತಿದ್ದ ಕತ್ತಿ ಸಹೋದರರು ಇದೀಗ ರಾಜ್ಯಸಭಾ ಚುನಾವಣೆ ಹೆಸರಿನಲ್ಲಿ ರಾಜಕೀಯ ದಾಳ ಉರುಳಿಸಿದ್ದಾರೆ. ಬೆಂಗಳೂರಿನಲ್ಲಿ ಅತೃಪ್ತ ಉತ್ತರ ಕರ್ನಾಟಕ ಭಾಗದ ಶಾಸಕ ಸಭೆ ನಡೆಸುವ ಮೂಲಕ ಸಿಎಂ ಬಿ.ಎಸ್​. ಯಡಿಯೂರಪ್ಪಗೆ ಶಾಕ್ ನೀಡಿದ್ದಾರೆ.

ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆ ಮುಂದಿನ ಕೆಲ ತಿಂಗಳಲ್ಲಿ ನಡೆಯಲಿದೆ. ಈ ಚುನಾವಣೆಗೂ ಮುನ್ನ ಮಂತ್ರಿಯಾಗಬೇಕು ಎನ್ನುವುದು ಹಿರಿಯ ಶಾಸಕ ಉಮೇಶ್​ ಕತ್ತಿಯ ಆಸೆ. ಸಚಿವನಾದ ಬಳಿಕ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಸುಲಭವಾಗಲಿದೆ ಎನ್ನುವುದು ರಾಜಕೀಯ ಲೆಕ್ಕಾಚಾರ. ಉಮೇಶ್ ಕತ್ತಿಗೆ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಲವು ಶಾಸಕರು ಸಾಥ್ ನೀಡಿದ್ದಾರೆ. ನನ್ನನ್ನು ಮಂತ್ರಿ ಮಾಡಬೇಕು, ರಾಜ್ಯಸಭೆಗೆ ನಮ್ಮ ಸಹೋದರ ರಮೇಶ ಕತ್ತಿ ಹೆಸರು ಅಂತಿಮಗೊಳಿಸಬೇಕು ಎಂದು ಉಮೇಶ ಕತ್ತಿ ಬಿಜೆಪಿ ನಾಯಕರಿಗೆ ಸಭೆ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.

ಉಪ್ಪು, ರೊಟ್ಟಿ ತಿಂದು ನಮ್ಮೂರಲ್ಲೇ ಜೀವನ ಮಾಡ್ತೇವೆ: ವಲಸೆ ಕಾರ್ಮಿಕರ ಅಸಹಾಯಕತೆ

ಹಿರಿಯ ಬಿಜೆಪಿ ಶಾಸಕ ಉಮೇಶ ಕತ್ತಿಗೆ ಬೆಳಗಾವಿಯ ದಕ್ಷಿಣ ವಿಧಾನಸಭೆ ಕ್ಷೇತ್ರ ಶಾಸಕ ಅಭಯ ಪಾಟೀಲ್ ಸೇರಿ ಅನೇಕರು ಸಾಥ್ ನೀಡಿದ್ದಾರೆ. ಉಮೇಶ ಕತ್ತಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಜೈನ್ ಕೋಟಾದಡಿ ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಿ ಎಂದು ಅಭಯ ಪಾಟೀಲ್ ಸಹ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಜವಳಿ ಸಚಿವ ಶ್ರೀಮಂತ ಪಾಟೀಲ್ ಇದ್ದಾರೆ.

ಸಿಎಂ  ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಕೇವಲ 6 ಸಚಿವ ಸ್ಥಾನಗಳು ಖಾಲಿ ಇವೆ.  ರಾಜ್ಯದ ಅನೇಕ ಜಿಲ್ಲೆಗಳಿಗೆ ಪ್ರಾತ್ಯನಿಧ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಇನ್ನೆಷ್ಟು ಸಚಿವ ಸ್ಥಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಡಾ. ಪ್ರಭಾಕರ ಕೋರೆ ಪ್ರತಿನಿಧಿಸುವ ರಾಜ್ಯಸಭಾ ಸ್ಥಾನಕ್ಕೆ ಸಹ ಹಲವರು ಆಕಾಂಕ್ಷಿಗಳು ಇದ್ದಾರೆ. ಬಿಜೆಪಿ ಹೈಕಮಾಂಡ್ ಹಾಗೂ  ಸಿಎಂ ಬಿ. ಎಸ್ ಯಡಿಯೂರಪ್ಪ ಯಾರನ್ನು ಪರಿಗಣಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
First published: