HOME » NEWS » District » KARWAR NATIVES ARE SHOCKED AS THEY NEED TO PAY 2000 RS TO GO BACK TO GOA HK

ಗಣೇಶ ಹಬ್ಬಕ್ಕೆ ಬಂದು ವಾಪಸ್ಸಾಗುತ್ತಿದ್ದವರಿಗೆ ಗೋವಾ ಸರ್ಕಾರ ಶಾಕ್ ; ಗಡಿ ಪ್ರವೇಶಿಸಲು 2 ಸಾವಿರ ಕೊಡಬೇಕು..!

ಗಣೇಶ ಹಬ್ಬ ಆಚರಣೆ ಮಾಡಲು ಬಂದ ಗೋವಾದಲ್ಲಿ ನೆಲೆಸಿದ್ದ ಕಾರವಾರ ಮೂಲದವರಿಗೆ ಮರಳಿ ಗೋವಾ ಹೋಗುವಾಗ ಗೋವಾ ಸರಕಾರ ದೊಡ್ಡ ಶಾಕ್ ನೀಡಿದೆ.

news18-kannada
Updated:August 24, 2020, 10:27 PM IST
ಗಣೇಶ ಹಬ್ಬಕ್ಕೆ ಬಂದು ವಾಪಸ್ಸಾಗುತ್ತಿದ್ದವರಿಗೆ ಗೋವಾ ಸರ್ಕಾರ ಶಾಕ್ ; ಗಡಿ ಪ್ರವೇಶಿಸಲು 2 ಸಾವಿರ ಕೊಡಬೇಕು..!
ಕಾರವಾರ ಚೆಕ್ ಪೋಸ್ಟ್​
  • Share this:
ಕಾರವಾರ(ಆಗಸ್ಟ್​. 24): ಹಬ್ಬ ಆಚರಿಸಲು ಗೋವಾದಲ್ಲಿ ನೆಲೆಸಿದ ಕಾರವಾರ ಮೂಲದವರು ಊರಿಗೆ ಬಂದಿದ್ದರು, ಬರುವಾಗ ಗಡಿಯಲ್ಲಿ ಯಾವುದೇ ಸಮಸ್ಯೆ ಮಾಡದ ಗೋವಾ ಸರಕಾರ ಈಗ ಹಬ್ಬ ಮುಗಿಸಿ ಮರಳಿ ಹೋಗುವಾಗ ಪ್ರತಿಯೊಬ್ಬರಿಂದ ಕೋವಿಡ್ ಪರೀಕ್ಷೆ ನೆಪದಲ್ಲಿ ಎರಡು ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದು, ಗೋವಾ ಸರಕಾರದ ವಿರುದ್ದ ಜನಾಕ್ರೋಶ ಬುಗಿಲೆದ್ದಿದೆ. ಗೋವಾ ಸರಕಾರ ಹಗಲು ದರೋಡೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಅಂತರ್ ರಾಜ್ಯ ಗಡಿ ಬಂದ್ ಆಗಿ ಬರೋಬ್ಬರಿ 6 ತಿಂಗಳು ಈ ನಡುವೆ ಗೋವಾದಿಂದ ಕಾರವಾರಕ್ಕೆ ಬರುವವರು ಮತ್ತು ಕಾರವಾರದಿಂದ ಗೋವಾ ಹೋಗುವವರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ತುತ್ತಿನ ಚೀಲಕ್ಕಾಗಿ ಗೋವಾದಲ್ಲಿ ನೆಲೆಸಿದ್ದ ಕಾರವಾರ ಮೂಲದವರ ಸ್ಥಿತಿ ಅಂತೂ ಹೇಳತೀರದ್ದಾಗಿದೆ. ಕೊರೋನಾ ಜನರ ಬದುಕನ್ನು ಹಾಳು ಮಾಡಿದೆ. ಈಗ ಮೊನ್ನೆ ನಡೆದ ಗಣೇಶ ಚತುರ್ಥಿ ಹಬ್ಬಕ್ಕೆಂದು ಬಂದವರಿಗೆ ಗೋವಾ ಸರಕಾರ ಗಡಿಯಲ್ಲಿ ಯಾವುದೇ ಸಮಸ್ಯೆ ಮಾಡಲಿಲ್ಲ. ಆದರೆ, ಎರಡು ದಿನ ಹಬ್ಬ ಮುಗಿಸಿ ಮತ್ತೆ ಮರಳಿ ಹೋಗುವ ಜನರಿಗೆ ಎರಡು ಸಾವಿರ ರೂಪಾಯಿ ಕತ್ತರಿ ಹಾಕಿದೆ.

ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ಮಾಡಲು ಸಾವಿರ ರೂಪಾಯಿಯನ್ನು ಗಡಿಯಲ್ಲಿ ನೀಡಿ ಮುಂದಿನ ಪ್ರಯಾಣ ಬೆಳೆಸಬೇಕು. ಬಳಿಕ ಗೋವಾ ರಾಜ್ಯದ ಮಡಗಾಂವ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತೆ. ಈ ಪರೀಕ್ಷೆಗೋಸ್ಕರ ಎರಡು ಸಾವಿರ ಪಡೆದುಕೊಂಡು ಗೋವಾ ಸರಕಾರ ಹಗಲು ದರೋಡೆ ಮಾಡುತ್ತಿದೆ ಎಂಬ ಆರೋಪ ಜನರದ್ದಾಗಿದೆ.

ಈ ಹಿಂದೆಯೂ ಕೂಡಾ ಇದೆ ಮಾರ್ಗಸೂಚಿ ಇತ್ತು. ಆದರೆ, ಗಣೇಶ ಚತುರ್ಥಿ ಸಂದರ್ಭದಲ್ಲಿ ಕೊಂಚ ಸಡಿಲಿಕೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಹಿನ್ನಲೆಯಲ್ಲಿ ಗೋವಾದಿಂದ ಕಾರವಾರ ಮೂಲದವರು ಹಬ್ಬ ಆಚರಣೆಗೆ ಆಗಮಿಸಿದ್ದರು. ಬರುವಾಗ ಈ ಬಗ್ಗೆ ಚಕಾರ ಎತ್ತದ ಗೋವಾ ಸರಕಾರ ಹೋಗುವಾಗ ಎರಡು ಸಾವಿರ ನೀಡಿ ಹೋಗಬೇಕು ಎಂದು ಹೇಳಿದೆ.

ಇದನ್ನೂ ಓದಿ : ಭದ್ರಾ ಜಲಾಶಯ ಭರ್ತಿಗೆ ಕೇವಲ ಮೂರು ಅಡಿ ಬಾಕಿ ; ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ

ಇನ್ನೂ ಗೋವಾದಲ್ಲಿ ನೆಲೆಸಿದ್ದ ಕಾರವಾರ ಮೂಲದವರು ಹಬ್ಬ ಆಚರಣೆ ಮಾಡಲು  ಕಾರವಾರಕ್ಕೆ ಬರುವಾಗ ಯಾವುದೇ ಸಮಸ್ಯೆ ಮಾಡದ ಗೋವಾ ಸರಕಾರ ಆವಾಗಲೇ  2 ಸಾವಿರ ರೂಪಾಯಿ ನೀಡಿ ಮರಳಿ ಬರುವ  ಮಾರ್ಗಸೂಚಿ ಜನರಿಗೆ ಹೇಳಿದ್ರೆ ಬರುವವರು ಮುಂಚಿತವಾಗಿ ತಯಾರಿಯಲ್ಲಿ ಇರುತ್ತಿದ್ದರು. ಆದರೆ, ಆ ಸಂದರ್ಭದಲ್ಲಿ ಯಾವುದೇ ಮಾರ್ಗಸೂಚಿ ನೀಡದ ಸರಕಾರ ಈಗ ಹೋಗುವ ಸಂದರ್ಭದಲ್ಲಿ ಈ ಮಾರ್ಗಸೂಚಿ  ಜನರಿಗೆ ಹೇಳಿದ್ದು, ಈಗ ಜನರು ಗಡಿಯಲ್ಲಿ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರು ಬೇರೆ ದಾರಿ ಇಲ್ಲದೆ ಹಣ ನೀಡಿ ಮರಳಿ ಗೋವಾಕ್ಕೆ ಹೋಗುತ್ತಿದ್ದಾರೆ.
ಒಟ್ಟಾರೆ ವಿಘ್ನ ನಿವಾರಕನ ಹಬ್ಬ ಆಚರಣೆ ಮಾಡಲು ಬಂದ ಗೋವಾದಲ್ಲಿ ನೆಲೆಸಿದ್ದ ಕಾರವಾರ ಮೂಲದವರಿಗೆ ಮರಳಿ ಗೋವಾ ಹೋಗುವಾಗ ಗೋವಾ ಸರಕಾರ ದೊಡ್ಡ ಶಾಕ್ ನೀಡಿದೆ. ಆರ್ಥಿಕವಾಗಿ ಹಿಂಡಿ‌ಹಿಪ್ಪೆಯಾದ ಬದುಕು ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಗೋವಾ ಸರಕಾರದ ಈ ನೀತಿ ವಿರುದ್ದ ಜನಾಕ್ರೋಶ ಬುಗಿಲೆದ್ದಿದೆ.
Published by: G Hareeshkumar
First published: August 24, 2020, 9:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories