Karwar: ಫ್ಲೈ ಓವರ್ ಕಾಮಗಾರಿ: ಸುರಕ್ಷತಾ ಸಾಧನಗಳನ್ನ ಧರಿಸದೇ ಕಾರ್ಮಿಕರ ಕೆಲಸ

ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಹೆಲ್ಮೆಟ್ ಸೇರಿದಂತೆ ಸುರಕ್ಷತಾ ಸಾಧನಗಳನ್ನ ಧರಿಸದೇ ಕೆಲಸ ಮಾಡುತ್ತಿದ್ದು ಕಾಮಗಾರಿ ಪ್ರದೇಶದ ಸುತ್ತ ಯಾವುದೇ ಬ್ಯಾರಿಕೇಡ್‌ಗಳನ್ನ ಸಹ ಅಳವಡಿಸಲಾಗಿಲ್ಲ.

ಕಾರವಾರ ಫ್ಲೈ ಓವರ್ ಕಾಮಗಾರಿ

ಕಾರವಾರ ಫ್ಲೈ ಓವರ್ ಕಾಮಗಾರಿ

  • Share this:
ಕಾರವಾರ:  ಕೊರೊನಾ 2ನೇ ಅಲೆ(Corona Second Wave)ಯಬ್ಬರ ಹಾಗೂ ವರುಣಾರ್ಭಟದಿಂದಾಗಿ (Rainfall) ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾರ್ಯಗಳು ಮತ್ತೆ ಪ್ರಾರಂಭಗೊಂಡಿವೆ. ಅದರಲ್ಲೂ ಕಾರವಾರ (Karwar) ನಗರದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಫ್ಲೈಓವರ್ ನಿರ್ಮಾಣ (Fly Over Construction) ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಆದ್ರೆ ನಿರ್ಮಾಣ ಕಾಮಗಾರಿಯಲ್ಲಿ ಮಾತ್ರ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಕೆಲಸ ಮಾಡುತ್ತಿದ್ದು ಹೆದ್ದಾರಿಯಲ್ಲಿ (Highway) ವಾಹನ ಸವಾರರು ಆತಂಕದಲ್ಲೇ ಓಡಾಡುವಂತಾಗಿದೆ.  ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಗರಕ್ಕೆ ಹೊಂದಿಕೊಂಡೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯ ಕೈಗೊಂಡಿದ್ದು ಸುರಕ್ಷತೆ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿ ನಿರ್ಲಕ್ಷ್ಯವಹಿಸಿದೆ.

ಕಾರವಾರ ನಗರಕ್ಕೆ ಹೊಂದಿಕೊಂಡೇ ಚತುಷ್ಪಥ ಮಾರ್ಗವಿದ್ದು ರಸ್ತೆ ದಾಟಲು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. ನಗರದ ಲಂಡನ್ ಬ್ರಿಡ್ಜ್‌ನಿಂದ ಆರ್.ಟಿ.ಓ ಕಛೇರಿವರೆಗೆ ಸುಮಾರು 1.4 ಕಿಲೋ ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ.

ಹೆದ್ದಾರಿಯ ಪಕ್ಕದಲ್ಲೇ ಕಾಮಗಾರಿ ವಸ್ತುಗಳು, ಸಂಚಾರಕ್ಕೆ ಅಡಚಣೆ

ಕೊರೊನಾ 2ನೇ ಅಲೆಯ ಬಳಿಕ ಸ್ಥಗಿತಗೊಂಡಿದ್ದ ಕಾಮಗಾರಿ ಸದ್ಯ ಪುನರಾರಂಭಗೊಂಡಿದೆ. ಆದ್ರೆ ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಯಾವುದೇ ಸುರಕ್ಷತೆ ವಹಿಸುತ್ತಿಲ್ಲವಾಗಿದ್ದು. ಕಾಮಗಾರಿಯ ವಸ್ತುಗಳನ್ನ ಹೆದ್ದಾರಿಯ ಅಕ್ಕಪಕ್ಕ ಎಲ್ಲೆಂದರಲ್ಲಿ ಹಾಕಿಟ್ಟಿದ್ದಾರೆ.

ಇದನ್ನೂ ಓದಿ:   Hacker Sriki: ಜೈಲಿನಿಂದ ಬಿಡುಗಡೆಯಾದ ಬಳಿಕ ಹ್ಯಾಕರ್ ಶ್ರೀಕಿ ನಾಪತ್ತೆ, ವಿಚಾರಣೆಗೂ ಗೈರು, ಪೊಲೀಸರಿಗೆ ತಲೆನೋವು

ಹೀಗಾಗಿ ಒಂದೆಡೆ ಕಾರ್ಮಿಕರು ಅಪಾಯಕಾರಿಯಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದು ಇನ್ನೊಂದೆಡೆ ರಸ್ತೆಯಲ್ಲಿ ಸಂಚರಿಸುವ ಸವಾರರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Fly Over Works: No Safety Equipment
ಕಾರವಾರ ಫ್ಲೈ ಓವರ್ ಕಾಮಗಾರಿ


ಫ್ಲೈಓವರ್ ಕಾಮಗಾರಿ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಕಾರ್ಮಿಕರು ಸೇರಿದಂತೆ ವಾಹನ ಸವಾರರಿಗೂ ಸಹ ಅಪಾಯ ಎದುರಾಗುವ ಆತಂಕದ ವಾತಾವರಣ ಇದೆ ಅಂತಾರೇ ಸ್ಥಳೀಯರು.

ಮಳೆಯಿಂದಾಗಿ ಕಾಮಗಾರಿ ವಿಳಂಬ

ನಿರ್ಮಾಣ ಪ್ರಾರಂಭವಾಗಿ ಮೂರು ವರ್ಷಗಳೇ ಕಳೆಯುತ್ತಾ ಬಂದಿದ್ದು ಈ ವೇಳೆ ಕೊರೊನಾ ಅಬ್ಬರ ಹಾಗೂ ಧಾರಾಕಾರ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಾ ಸಾಗುತ್ತಿದೆ.

ಕೊರೊನಾ ಎರಡನೇಯ ಅಲೆಯ ಸಂದರ್ಭದಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ್ದು ಇದೀಗ ಮತ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಆದ್ರೆ ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಹೆಲ್ಮೆಟ್ ಸೇರಿದಂತೆ ಸುರಕ್ಷತಾ ಸಾಧನಗಳನ್ನ ಧರಿಸದೇ ಕೆಲಸ ಮಾಡುತ್ತಿದ್ದು ಕಾಮಗಾರಿ ಪ್ರದೇಶದ ಸುತ್ತ ಯಾವುದೇ ಬ್ಯಾರಿಕೇಡ್‌ಗಳನ್ನ ಸಹ ಅಳವಡಿಸಲಾಗಿಲ್ಲ.

ಇದನ್ನೂ ಓದಿ:  Hassan:ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ: ಎದೆಯತ್ತರದ ಮಗನಿದ್ರೂ ಸುಳ್ಳು ಹೇಳಿ ನಿಶ್ಚಿತಾರ್ಥ ಮಾಡ್ಕೊಂಡ!

ಜಿಲ್ಲಾಧಿಕಾರಿಗಳ ಹೇಳಿದ್ದೇನು?

ಕಾಮಗಾರಿ ಪ್ರದೇಶಕ್ಕೆ ಹೊಂದಿಕೊಂಡೇ ಸದ್ಯ ಸರ್ವಿಸ್ ರಸ್ತೆಯಿದ್ದು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದರಿಂದ ಅಪಾಯ ಎದುರಾಗುವ ಆತಂಕ ಇದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನ ನೀಡಬೇಕು ಎನ್ನುವ ಕಾನೂನು ಇದ್ದು ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆ ಕಂಪೆನಿಗೆ ಸೂಚನೆ ನೀಡಲಾಗುವುದು ಎಂದು ಹೇಳುತ್ತಾರೆ.

Fly Over Works: No Safety Equipment
ಕಾರವಾರ ಫ್ಲೈ ಓವರ್ ಕಾಮಗಾರಿ


ಆಮೆಗತಿಯಲ್ಲಿ ಸಾಗುತ್ತಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿ ಚುರುಕು ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆಯಾದ್ರೂ ಸಹ ಕಾರ್ಮಿಕರ ಸುರಕ್ಷತೆ ಕುರಿತು ನಿರ್ಲಕ್ಷ್ಯವಹಿಸಿರುವುದು ದುರಂತವೇ ಸರಿ.

ಇನ್ನಾದ್ರೂ ಸಂಬಂಧಪಟ್ಟ ಗುತ್ತಿಗೆ ಕಂಪೆನಿ ಕಾರ್ಮಿಕರಿಗೆ ಸುರಕ್ಷಾ ಸಾಧನಗಳನ್ನ ನೀಡುವುದರ ಜೊತೆಗೆ ಹೆದ್ದಾರಿ ಸವಾರರ ಸುರಕ್ಷತೆ ಕುರಿತು ಗಮನಹರಿಸಬೇಕಿದೆ.

ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ(Rainfall)ಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ (Winter) ಸಹ ರಾಜ್ಯದಲ್ಲಿ (Karnataka Rains) ಆರಂಭವಾಗಲಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.
Published by:Mahmadrafik K
First published: