HOME » NEWS » District » KARNATAKA WORKERS IN PUNE ANGUISH OVER BUS STRIKE NMPG SNVS

ಹಬ್ಬಕ್ಕೆ ಬರಲು ಆಗುತ್ತಿಲ್ಲ: ಪೂನಾದಲ್ಲಿ ಸಿಲುಕಿದ ಕಾರ್ಮಿಕರಿಂದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ

ಮುಂಬೈ, ಪುನಾ ಮೊದಲಾದ ಕಡೆ ಉತ್ತರ ಕರ್ನಾಟಕದ ಹಲವು ಮಂದಿ ಕೆಲಸಕ್ಕೆ ಹೋಗಿಬರುತ್ತಾರೆ. ಆದರೆ, ಕೊರೋನಾ ಹಾಗೂ ಯುಗಾದಿ ಹಬ್ಬದ ಕಾರಣಕ್ಕೆ ವಾಪಸ್ ಊರಿಗೆ ಬರಲು ಬಸ್​ಗಳಿಲ್ಲದೆ ಸಾಧ್ಯವಾಗುತ್ತಿಲ್ಲ ಎಂದು ಇವರು ಹತಾಶೆಗೊಂಡಿದ್ದಾರೆ.

news18-kannada
Updated:April 12, 2021, 1:53 PM IST
ಹಬ್ಬಕ್ಕೆ ಬರಲು ಆಗುತ್ತಿಲ್ಲ: ಪೂನಾದಲ್ಲಿ ಸಿಲುಕಿದ ಕಾರ್ಮಿಕರಿಂದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ
ಕಾರ್ಮಿಕ ಸಿದ್ದಯ್ಯ
  • Share this:
ಯಾದಗಿರಿ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಆತಂಕ ತಲೆದೋರಿದ್ದು ದಿನೇ ದಿನೇ ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಕಾರ್ಮಿಕರು ವಾಪಸ್ ಬರುತ್ತಿದ್ದಾರೆ. ರಾಜ್ಯದ ಸಾರಿಗೆ ನೌಕರರ ಮುಷ್ಕರದ ಬಿಸಿ ಈಗ ಮಹಾರಾಷ್ಟ್ರದಲ್ಲಿ ನೆಲೆಸಿರುವ ರಾಜ್ಯದ ಕಾರ್ಮಿಕರಿಗೆ ತಟ್ಟಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಾಗಿರುವ ಕೊರೋನಾ ಆತಂಕ ಹಾಗೂ ಯುಗಾದಿ ಹಬ್ಬಕ್ಕೆ ವಾಪಸ್ ಊರಿಗೆ ತೆರಬೇಕೆಂದಿರುವ ಜನರಿಗೆ ಈಗ ರಾಜ್ಯದ ಸಾರಿಗೆ ಮುಷ್ಕರ ಸಂಕಷ್ಟ ತಂದಿದ. ಊರಿಗೆ ಬರಲು ಕಾರ್ಮಿಕರು ಪರದಾಡುವಂತಾಗಿದೆ.

ಮಹಾರಾಷ್ಟ್ರದ ಪೂನಾ, ಮುಂಬೈ ಹಾಗೂ ಇನ್ನಿತರ ಕಡೆ ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು ಹಾಗೂ ‌ಮೊದಲಾದ ಭಾಗದ ಕಾರ್ಮಿಕರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈಗ ಮಹಾರಾಷ್ಟ್ರ ಸರಕಾರ ಕೋವಿಡ್ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಅದೇ ರೀತಿ ಶನಿವಾರ ಹಾಗೂ ಭಾನುವಾರ ಲಾಕ್ ಡೌನ್ ಜಾರಿ‌ ಮಾಡಿತ್ತು. ಪೂನಾ ನಗರ ಕೂಡ ಈ ಎರಡು ದಿನ ಬಂದ್ ಆಗಿತ್ತು. ಅಗತ್ಯ ವಸ್ತುಗಳ ದರ ಕೂಡ ಹೆಚ್ಚಳವಾಗಿದ್ದು ಕಾರ್ಮಿಕರು ಕೈಯಲ್ಲಿ ಹಣವಿಲ್ಲದೇ ಜೀವನ‌ ನಡೆಸಲು ಪರದಾಡುವಂತಾಗಿದೆ. ಪೂನಾದಲ್ಲಿ ಸಿಲುಕಿರುವ ಯಾದಗಿರಿ ಜಿಲ್ಲೆಯ ಕಾರ್ಮಿಕ ಸಿದ್ದಯ್ಯ ಈಗ ನೋವು ತೊಡಿಕೊಂಡಿದ್ದಾನೆ. ಪೂನಾ,ಮುಂಬೈ ರೈಲ್ವೆ ನಿಲ್ದಾಣದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಕಾರ್ಮಿಕರು ಊರಿಗೆ ತೆರಳುತ್ತಿದ್ದು, ಟ್ರೈನ್​ಗಳಲ್ಲಿ ಜಾಗದ ಕೊರತೆ ತಲೆದೊರಿದೆ. ರೈಲ್ವೆ ನಿಲ್ದಾಣಕ್ಕೆ ತೆರಳಬೇಕೆಂದರೆ ಪೊಲೀಸರು ಹೋಗಲು ಬಿಡುತ್ತಿಲ್ಲ. ಇನ್ನೂ ರಾಜ್ಯದ ಬಸ್ ಗಳಿಗೆ ಊರಿಗೆ ಬರಬೇಕೆಂದರೆ ಬಸ್ ಸಂಚಾರ ಬಂದ್ ಆಗಿರುವುದರಿಂದ ಊರಿಗೆ ಬರಲು ಪರದಾಡುವಂತಾಗಿದೆ.

ಇದನ್ನೂ ಓದಿ: Weekend Lockdown - ಬೆಂಗಳೂರಿನಲ್ಲಿ ವೀಕೆಂಡ್ ಲಾಕ್​ಡೌನ್ ಸಾಧ್ಯತೆ; ಏ. 16ರಂದು ನಿರ್ಧಾರ

ಸಾಯುವ ಪರಿಸ್ಥಿತಿ ತಲೆದೋರಿದೆ:

ಪೂನಾದಲ್ಲಿ ಸಿಲುಕಿರುವ ಕಾರ್ಮಿಕ ಸಿದ್ದಯ್ಯ ಈ ಬಗ್ಗೆ ಮಾತನಾಡಿ, ರೈಲ್ವೆ ನಿಲ್ದಾಣಕ್ಕೆ ತೆರಳಿ ಊರಿಗೆ ಬರಬೇಕೆಂದರೆ ಹೆಚ್ಚಿನ ಜನರಿಗೆ ಬಿಡುತ್ತಿಲ್ಲ. ರಾಜ್ಯದ ಬಸ್ ಗಳು ಬಂದ್ರೆ ನಾವು ಊರಿಗೆ ಬರುತ್ತೇವೆ. ಪೂನಾದಲ್ಲಿ ಜೋಳ, ಅಕ್ಕಿ‌ ಖರೀದಿ ಮಾಡಬೇಕೆಂದು ಕಷ್ಟವಾಗಿದೆ. ಎಲ್ಲಾ ವಸ್ತುಗಳ ದರ ದುಬಾರಿಯಾಗಿದೆ. ನಾವು ಹೊರ ರಾಜ್ಯದಲ್ಲಿ ಹೊಟ್ಟೆಪಾಡಿಗಾಗಿ ದುಡಿದು ಬದುಕು ಸಾಗಿಸುತ್ತೇವೆ. ನಾವು ಊರಿಗೆ ಬರಬೇಕೆಂದರೆ ಬಸ್ ಗಳ ಅನುಕೂಲವಿಲ್ಲ. ನಾವು ದುಡ್ಡು ಇಲ್ಲದೇ ಸತ್ತರೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಹೊಣೆಗಾರರಾಗುತ್ತಾರೆ. ಬಸ್ ಬಿಟ್ಟು ಅನುಕೂಲ ಮಾಡಬೇಕು ಎಂದು ಸಿದ್ದಯ್ಯ ನೋವು ತೊಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ ನಮ್ಮ ಗತಿ ಏನು? ಸಾರಿಗೆ ನೌಕರರ ಪ್ರತಿಭಟನೆಯಿಂದ ಯಾದಗಿರಿ ‌ಜಿಲ್ಲೆಯಲ್ಲಿರುವ ತಮ್ಮ ಊರಿಗೆ ತೆರಳಲು ಸಾಧ್ಯವಾಗದೆ ಸಾಯುವ ಪರಿಸ್ಥಿತಿ ತಲೆದೋರಿದೆ. ‌ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದರೆ ಹೇಗೆ? ಸಾರಿಗೆ ನೌಕರರು ಸಮಯ ಸಂದರ್ಭ ನೋಡಿಕೊಂಡು ಪ್ರತಿಭಟನೆ ಮಾಡಲಿ. ಕೂಡಲೇ ‌ಹೋರಾಟ ಬಿಟ್ಟು ನಮ್ಮ ಹಿತ ಕಾಪಾಡಬೇಕೆಂದು ಕಾರ್ಮಿಕರು ನೋವು ತೊಡಗಿಕೊಂಡಿದ್ದಾರೆ.

ವರದಿ: ನಾಗಪ್ಪ ಮಾಲಿಪಾಟೀಲ
Published by: Vijayasarthy SN
First published: April 12, 2021, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories