• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಿವಸೇನೆಗೆ ಕರವೇ ತೀರುಗೇಟು; ಬೆಳಗಾವಿಯಲ್ಲಿ ಮರಾಠಿ ನಾಮ ಫಲಕಗಳಿಗೆ ಮಸಿ ಬಳಿದು ಆಕ್ರೋಶ

ಶಿವಸೇನೆಗೆ ಕರವೇ ತೀರುಗೇಟು; ಬೆಳಗಾವಿಯಲ್ಲಿ ಮರಾಠಿ ನಾಮ ಫಲಕಗಳಿಗೆ ಮಸಿ ಬಳಿದು ಆಕ್ರೋಶ

ಶಿವಸೇನೆ ವಿರುದ್ಧ ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ.

ಶಿವಸೇನೆ ವಿರುದ್ಧ ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ.

ಎದುರಿಗೆ ಬಂದ ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳಕರ  ವಾಹನವನ್ನ ತಡೆದಿದ್ದಾರೆ. ಈ ಸಂದರ್ಭದಲ್ಲಿ ಕರವೇ ಮತ್ತು ಶಿವಸೇನೆ ಪುಂಡರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಇದರಿಂದ ರೊಚ್ಚಿಗೆದ್ದ ಕನ್ನಡ ಹೋರಾಟಗಾರರು ಶಿವಸೇನೆ ಮುಖಂಡನ ವಾಹನಕ್ಕೆ ಹಾಕಿದ್ದ  ಮರಾಠಿ ಬೋರ್ಡ ಕಿತ್ತು ಮಸಿ ಬಳಿದಿದ್ದಾರೆ.

ಮುಂದೆ ಓದಿ ...
  • Share this:

ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕನ್ನಡ ಅಕ್ಷರಗಳಿಗೆ ಮಸಿ ಬಳಿದಿದ್ದಕ್ಕೆ ಬೆಳಗಾವಿಯಲ್ಲಿ ಕರವೇ ತೀರುಗೇಟು ನೀಡಿದೆ. ಮರಾಠಿ ನಾಮಫಲಕಗಳಿಗೆ ಮಸಿ ಬಳಿದು, ಮರಾಠಿ ಪೋಸ್ಟರ್ ಹರಿದು ಆಕ್ರೋಶ ಹೊರಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಕರವೇ ಕಟ್ಟಾಳುಗಳು ಶಿವಸೇನೆ, ಎಂಇಎಸ ಕಚೇರಿ ಗೆ ಮುತ್ತಿಗೆಗೆ ಯತ್ನಿಸಿದ್ರು. ದಾರಿ ಮಧ್ಯೆಯೇ ಸಿಕ್ಕ ಶಿವಸೇನೆ ಮುಖಂಡನ ವಾಹನದ ಮರಾಠಿ ನಾಮಫಲಕಕ್ಕೆ ಮಸಿ ಬಳಿದು ಕಿತ್ತು ಬಿಸಾಕಿದ್ದಾರೆ. ನಿನ್ನೆ ಮಹಾರಾಷ್ಟ್ರ ದ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿನ ಅಂಗಡಿಗಳ ಮೇಲಿದ್ದ ಕನ್ನಡ ಅಕ್ಷರಗಳಿಗೆ ಶಿವಸೇನೆ ಪುಂಡರು ಮಸಿ ಬಳಿದಿದ್ದರು. ಶಿವಸೇನೆ ಪುಂಡಾಟ್ ಕನ್ನಡಿಗರ ಭಾವನೆಗಳು ಕೆರಳಿಸಿತ್ತು. ಹೀಗಾಗಿ ಇಂದು ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಬೆಳಗಾವಿಯಲ್ಲಿ ಮಸಿ ಬಳಿಯುವ ಅಭಿಯಾನ ನಡೆಸಿದರು.


ಮೊದಲಿಗೆ ಕನ್ನಡದ ಕಟ್ಟಾಳುಗಳು ಕಾಕತಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೋಟೆಲ್ ಗಳ ಮೇಲೆ ದಾಳಿ ನಡೆಸಿದರು. ಮರಾಠಿ ಅಕ್ಷರಗಳಿಗೆ ಮಸಿ ಬಳಿದ್ರು. ಮರಾಠಿ ಪೋಸ್ಟರಗಳನ್ನ ಹರಿದು ಬಿಸಾಕಿದ್ರು. ಆನಂತರ ಕರವೇ ಸೇನಾನಿಗಳು ನೇರವಾಗಿ ಬೆಳಗಾವಿ ಹೃದಯ ಭಾಗದ ರಾಮಲಿಂಗ ಕಿಂಡ್ ಗಲ್ಲಿಯ ಶಿವಸೇನೆ, ಎಂಇಎಸ ಕಚೇರಿ ನಾಮಫಲಕಕ್ಕೆ ಮಸಿ ಬಳಿಯಲು ಮುಂದಾಗಿದ್ದರು. ಅಷ್ಟರಲ್ಲಿ ತಕ್ಷಣವೇ ಪೊಲೀಸರು ಕರವೇ ಕಾರ್ಯಕರ್ತರನ್ನ ದಾರಿ ಮಧ್ಯಯೇ ತಡೆದಿದ್ದಾರೆ.


ಆಗ ಎದುರಿಗೆ ಬಂದ ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳಕರ  ವಾಹನವನ್ನ ತಡೆದಿದ್ದಾರೆ. ಈ ಸಂದರ್ಭದಲ್ಲಿ ಕರವೇ ಮತ್ತು ಶಿವಸೇನೆ ಪುಂಡರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಇದರಿಂದ ರೊಚ್ಚಿಗೆದ್ದ ಕನ್ನಡ ಹೋರಾಟಗಾರರು ಶಿವಸೇನೆ ಮುಖಂಡನ ವಾಹನಕ್ಕೆ ಹಾಕಿದ್ದ  ಮರಾಠಿ ಬೋರ್ಡ ಕಿತ್ತು ಮಸಿ ಬಳಿದಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಯಿತು.


ಇನ್ನೂ ಕರವೇ ಶಿವಸೇನೆ ಮುಖಂಡರ ಮಧ್ಯದ ವಾಗ್ವಾದ ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು. ಇದನ್ನ ಅರಿತು ಪೊಲೀಸರು ಕನ್ನಡ ಹೋರಾಟಗಾರರನ್ನ ಅಲ್ಲಿಂದ ಮನವೊಲಿಸಿ ಕಳುಹಿಸಿದ್ದಾರೆ. ಇನ್ನು ಹೆಚ್ಚು ನನ್ನೆ ಬೆಂಕಿ ಹಚ್ಚಿದ್ದ ಶಿವಸೇನೆ ಹಾಗೂ ಎಂಇಎಸ್ ಪುಂಡರು ಇವತ್ತು ಮತ್ತೆ ಸ್ಥಳದಲ್ಲಿ ತಮ್ಮ ಕಛೇರಿ ಬಳಿ ಜಮಾವನೆಗೊಂಡು ಕರವೇ ಕಾರ್ಯಕರ್ತರನ್ನ ಗೂಂಡಾಗಳೆಂದು ಘೋಷಣೆ ಕೂಗಿದ್ದಾರೆ. ಧರ್ಮವೀರ ಸಂಭಾಜಿ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ನಾಡದ್ರೋಹಿಗಳು ಕನ್ನಡ ಹೋರಾಟಗಾರರನ್ನ ಬಂಧಿಸುವಂತೆ ಒತ್ತಾಯಿಸಿದರು.


ಇದನ್ನೂ ಓದಿ: ಪಾರ್ಕ್‌ನಲ್ಲಿ ಮಗುವಿಗೆ ಹೆರಿಗೆ ನೀಡಿದ ಮೈಸೂರು ಮಹಿಳೆ: ಮುಂಬೈ ವೈದ್ಯೆಯಿಂದ ಫೋನ್‌ ಮೂಲಕ ಮಾರ್ಗದರ್ಶನ..!


ಈ ಸಂದರ್ಭದಲ್ಲಿ ಪೊಲೀಸರು ನಾಡದ್ರೋಹಿಗಳ ಮಧ್ಯೆ ಮಾತಿನ ಜತಾಪಟಿ ಕೂಡ ನಡೆಯಿತು. ಬಳಿಕ ಡಿಸಿಪಿ ವಿಕ್ರಮ್ ಆಮ್ಟೆ ಮನವೊಲಿಸಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ಇನ್ನು ಬೆಳಗಾವಿಯಲ್ಲಿ  ಶಿವಸೇನೆ, ಎಂಇಎಸ್ ಪದೆ ಪದೆ ಕನ್ನಡಿಗರನ್ನ ಕೆಣಕುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಶಿವಸೇನೆ ಹಾಗೂ ಎಂಈಎಸ್ ಸಂಘಟನೆಗಳನ್ನ  ನಿಷೇಧಿಸುವಂತೆ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ್ ಚಂದರಗಿ ಆಗ್ರಹಿಸಿದ್ದಾರೆ.


ಒಟ್ಟಿನಲ್ಲಿ ಶಿವಸೇನೆ ಪುಂಡರಿಗೆ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಮಸಿ ಬಳಿದು ತೀರುಗೇಟು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕವನ್ನೆ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ.

Published by:MAshok Kumar
First published: