Karnataka Rains: ಕರಾವಳಿಯಲ್ಲಿ ಮುಂಗಾರು ಮಳೆ ಚುರುಕು - ಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ಸೂಚನೆ

Monsoon 2020: ನಿಸರ್ಗ ಚಂಡಮಾರುತದ ಪ್ರಭಾವದಿಂದ ಮುಂಗಾರು ಆಗಮನವಾದರೂ ದುರ್ಬಲ ವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದ್ದಾರೆ

news18-kannada
Updated:June 11, 2020, 11:05 AM IST
Karnataka Rains: ಕರಾವಳಿಯಲ್ಲಿ ಮುಂಗಾರು ಮಳೆ ಚುರುಕು - ಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ಸೂಚನೆ
ಮಳೆ
  • Share this:
ಮಂಗಳೂರು(ಜೂ.11): ಕರಾವಳಿಯಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಕಳೆದ ಒಂದು ವಾರದ ಹಿಂದೆ ಮುಂಗಾರು ರಾಜ್ಯದ ಕರಾವಳಿಗೆ ಪ್ರವೇಶಿಸಿದರೂ ಮಳೆ ಅಷ್ಟೇನೂ ಸುರಿದಿರಲಿಲ್ಲ. ಆದರೆ, ಈಗ ಮುಂಗಾರು ಚರುಕನ್ನು ಪಡೆದಿದೆ. ಜೂನ್ 12 ರಿಂದ 15 ರವರೆಗೆ ಕರಾವಳಿ ಭಾಗದಲ್ಲಿ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಜೂನ್ 13  ಮತ್ತು 14 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ.

ಇಂದು ಮತ್ತು ನಾಳೆ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ 64.5 ಮೀಲಿ ಮೀಟರ್ ನಿಂದ 111.5 ಮಿಲಿ ಮೀಟರ್ ಮಳೆಯಾಗಲಿದೆ. ಜೂನ್‌13 ಮತ್ತು‌ 14 ನೇ ರಂದು 115.6 ಮಿಲಿ ಮೀಟರ್ ನಿಂದ 204.4 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಗಳಿವೆ.ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕಳೆದ ವರ್ಷ ಪ್ರವಾಹ ಪೀಡಿತ ಪ್ರದೇಶಗಳಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕಕ್ಕಿಂಜೆ, ಕೊಲ್ಲಿ, ಕುಕ್ಕಾವು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ  ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಮುಂಗಾರು ಪ್ರವೇಶಿಸಿದ ದಿನದಿಂದಲೇ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಆದರೆ, ಈ ಬಾರಿ ಮುಂಗಾರು ಜೂನ್ 4 ರಂದು ರಾಜ್ಯವನ್ನು ಪ್ರವೇಶಿಸಿದರೂ ಮಳೆಯಾಗಿರಲಿಲ್ಲ. ಆನಂತರದ ದಿನಗಳಲ್ಲಿ ಮುಂಗಾರು ಮಾರುತಗಳು ತೀವ್ರ ದುರ್ಬಲವಾಗಿದ್ದವು. ಅರಬೀ ಸಮುದ್ರ ದಲ್ಲಿ ಸೃಷ್ಟಿಯಾಗಿದ್ದ ನಿಸರ್ಗ ಚಂಡಮಾರುತ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸಿದ್ದವು. ಇದೇ ಕಾರಣಕ್ಕೆ ಕೇರಳ ಪ್ರವೇಶಿಸಿದ ಮುಂಗಾರು ರಾಜ್ಯಕ್ಕೆ ಅಪ್ಪಳಿಸುವುದು ವಿಳಂಬವಾಗಿತ್ತು. ಮಹಾರಾಷ್ಟ್ರ ಮೇಲೆ ಪರಿಣಾಮ ಬೀರಿದ್ದ ನಿಸರ್ಗ ಚಂಡಮಾರುತ ಕರಾವಳಿ ಭಾಗದಲ್ಲಿ ಮಳೆ ತರುವ ಮೋಡಗಳನ್ನು ಸೆಳೆದ ಕಾರಣದಿಂದ ರಾಜ್ಯದಲ್ಲಿ ಮುಂಗಾರು ದುರ್ಬಲ ಗೊಂಡಿತ್ತು.

ಇದನ್ನೂ ಓದಿ : ಎರಡು ದಿನದಲ್ಲಿ ಮದುವೆ ಆಗಬೇಕಿದ್ದ ಪಿಎಸ್ಐಗೆ ಕೊರೋನಾ ; ಆತಂಕದಲ್ಲಿ ಪೊಲೀಸರು

ಈ ಬಗ್ಗೆ ಹವಾಮಾನ ಇಲಾಖಾ ಅಧಿಕಾರಿಗಳು ವಾಸ್ತಾವಂಶವನ್ನು ಬಿಚ್ಚಿಟ್ಟಿದ್ದು, ನಿಸರ್ಗ ಚಂಡಮಾರುತದ ಪ್ರಭಾವದಿಂದ ಮುಂಗಾರು ಆಗಮನವಾದರೂ ದುರ್ಬಲ ವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದ್ದಾರೆ.
ಇನ್ನು ಅರಬ್ಬೀ ಸಮುದ್ರದಲ್ಲಿ ಸದ್ಯದಲ್ಲಿ ಯಾವುದೇ ಚಂಡಮಾರುತ ಏಳುವ ಸಾಧ್ಯತೆಗಳಿಲ್ಲ ಅಂತಾ ಹವಾಮಾನ ಇಲಾಖೆ ಹೇಳಿದೆ.  ಹಾಗಾಗಿ ಮುಂದಿನ ದಿನಗಳಲ್ಲಿ ಮುಂಗಾರು ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಪ್ರವೇಶಿಸಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಅಂತಾ ಹವಾಮಾನ ಇಲಾಖೆ ಅಭಿಪ್ರಾಯ ಪಟ್ಟಿದೆ.
First published: June 11, 2020, 10:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading