Karnataka Rain: ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಬಂದ್​; ನಿಂತಲ್ಲೆ ನಿಂತಿವೆ ನೂರಾರು ಲಾರಿಗಳು

ಹೋಗಲಾಗದ ಸ್ಥಿತಿ ಪ್ರವಾಹ ಮತ್ತು ಮಹಾಮಳೆಯಿಂದ ಉಂಟಾಗಿದೆ.ಒಂದೆಡೆ ಕಾರವಾರದ ಸದಾಶಿವಗಡ ಲೋಂಡಾ ರಾಜ್ಯ ಹೆದ್ದಾರಿ ಮದ್ಯೆ ಗುಡ್ಡ ಕುಸಿತದಿಂದ ಮತ್ತು ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಎಲ್ಲಿಯೂ  ದಾರಿ ಇಲ್ಲದಾಗಿದೆ.

ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿರುವ ಟ್ರಕ್​ಗಳು

ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿರುವ ಟ್ರಕ್​ಗಳು

  • Share this:
ಕಾರವಾರ: ಕಳೆದ ನಾಲ್ಕು ದಿನಗಳಿಂದ ರಾ.ಹೆ.63ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ- ಹುಬ್ಬಳ್ಳಿ ಮಾರ್ಗದ ಅರಬೈಲ್‌ನಲ್ಲಿ ಹೆದ್ದಾರಿ ಕುಸಿತ ಮತ್ತು ಸುಂಕಸಾಳ ಹೆದ್ದಾರಿ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿರುವುದರಿಂದ ಕರಾವಳಿ ಮತ್ತು ಬಯಲುಸೀಮೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಈ ಹೆದ್ದಾರಿಯಲ್ಲಿ ಸಂಚರಿಸಬೇಕಿದ್ದ ಸರಕು ಸಾಗಾಣಿಕೆಯ 700ಕ್ಕೂ ಹೆಚ್ಚು ಲಾರಿಗಳು ಅಂಕೋಲಾ ತಾಲೂಕಿನ ಬಾಳೇಗುಳಿಯಲ್ಲಿ ಸಾಲುಗಟ್ಟಿ ನಿಂತಿವೆ.

ಕಂಗಾಲಾದ ಲಾರಿ ಚಾಲಕರು, ಊಟಕ್ಕೆ ಪರದಾಟ

ಮಂಗಳೂರು, ಕೇರಳಗಳಿಂದ ಸರಕನ್ನು ತುಂಬಿಕೊಂಡು ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಮತ್ತು ಹುಬ್ಬಳ್ಳಿ, ಬೆಳಗಾವಿ ಭಾಗಗಳಿಗೆ ಸಾಗುವ ಲಾರಿಗಳು ಕಳೆದ ಮೂರು ದಿನದಿಂದ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಐಆರ್‌ಬಿ ಟೋಲ್‌ಗೇಟ್‌ನಿಂದ ಅಂಕೋಲಾ ಅಜ್ಜಿಕಟ್ಟಾದವರೆಗೆ ಸುಮಾರು 10 ಕಿ.ಮೀ. ದೂರ ಹೆದ್ದಾರಿಯ ಎರಡು ಬದಿಯಲ್ಲಿ  ಸಾಲುಗಟ್ಟಿ ನಿಂತಿವೆ.

ಈ ಹೆದ್ದಾರಿ ತಕ್ಷಣ ಸಂಚಾರ ಮುಕ್ತವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ. ಮಂಗಳೂರು ಬಂದರಿನಿಂದ ಅನಿಲ ತುಂಬಿದ ಟ್ಯಾಂಕರ್‌ಗಳು ಈ ಹೆದ್ದಾರಿ ಮೂಲಕವೇ ಸಾಗಬೇಕು. ಇದನ್ನು ಬಿಟ್ಟರೆ ಬೇರಾವ ದಾರಿ ಇಲ್ಲ. ಇಂತಹ ಅನಿಲ ತುಂಬಿದ ನೂರಾರು ಟ್ಯಾಂಕರ್ ಇಲ್ಲಿ ಸಿಲುಕಿಕೊಂಡಿದೆ. ಇತರೇ ಅಗತ್ಯ ವಸ್ತುಗಳ ಲಾರಿಗಳು ಸಹ ಇಲ್ಲಿ ಸಿಲುಕಿಕೊಡಿವೆ. ಮುಂದಿನ ಒಂದು ವಾರವಾದರೂ ಈ ಹೆದ್ದಾರಿ ಆರಂಭವಾಗುವುದು ಕಷ್ಟಸಾಧ್ಯ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಇಲ್ಲಿ ನಿಲ್ಲಿಸಿಟ್ಟ ಲಾರಿಯ ಚಾಲಕ ಮತ್ತು ಕ್ಲೀನರ್‌ಗಳು ಲಾರಿಯಲ್ಲಿಯೇ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಿದ್ದರೆ, ಇನ್ನೂ ಕೆಲವರು ಹೊಟೇಲ್‌ಗಳಲ್ಲಿ ಊಟ ಮಾಡುತ್ತಿದ್ದಾರೆ. ಮೂರು ದಿನಗಳಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಮೇಲೆ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ- ಬೇಳೆ ಮತ್ತು ಕೈಯಲ್ಲಿರುವ ಹಣವೂ ಖಾಲಿ ಆಗಿದೆ. ನಾವು ಉಪವಾಸ ಉಳಿಯುವ ಸ್ಥಿತಿ ಬಂದೊದಗಿದೆ ಎಂದು ಲಾರಿ ಚಾಲಕರು ತಮ್ಮ ಗೋಳು ಹೇಳಿಕೊಂಡರು.

ವರುಣನ‌ ಆರ್ಭಟ ಸ್ಥಬ್ಧವಾದ ಚಟುವಟಿಕೆ, ಹತ್ತಾರು ಸಂಪರ್ಕ ರಸ್ತೆಗಳು ಬಂದ್​

ಮಹಾಮಳೆ ಸೃಷ್ಟಿಸಿದ ಆವಂತರ ಒಂದೆರಡಲ್ಲ. ಹತ್ತಾರು ರಸ್ತೆ ಸಂಪರ್ಕ  ಕಡಿತವಾಗಿದೆ, ಹತ್ತಾರು ಸೇತುವೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ ಹೀಗಾಗಿ ಈ ಎಲ್ಲ ಲಾರಿಗಳು ಬೇರೆ ಮಾರ್ಗ ಇಲ್ಲದೆ ರಸ್ತೆಯಲ್ಲೆ ಸಾಲಾಗಿ ನಿಂತಿವೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಕಡೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ.

ಹೋಗಲಾಗದ ಸ್ಥಿತಿ ಪ್ರವಾಹ ಮತ್ತು ಮಹಾಮಳೆಯಿಂದ ಉಂಟಾಗಿದೆ.ಒಂದೆಡೆ ಕಾರವಾರದ ಸದಾಶಿವಗಡ ಲೋಂಡಾ ರಾಜ್ಯ ಹೆದ್ದಾರಿ ಮದ್ಯೆ ಗುಡ್ಡ ಕುಸಿತದಿಂದ ಮತ್ತು ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಎಲ್ಲಿಯೂ  ದಾರಿ ಇಲ್ಲದಾಗಿದೆ.

ಇದನ್ನೂ ಓದಿ: ವಿಜಯ್ ಮಲ್ಯ ದಿವಾಳಿಯೆಂದು ಘೋಷಿಸಿದ ಲಂಡನ್ ಹೈಕೋರ್ಟ್: ನಿಟ್ಟುಸಿರು ಬಿಟ್ಟ ಭಾರತೀಯ ಬ್ಯಾಂಕ್​ಗಳು

ಈಗ ಲಾರಿ ಚಾಲಕರು ಪರದಾಟ ನಡೆಸುತ್ತಿದ್ದಾರೆ. ಎಲ್ಲ‌ಕಡೆ ರಸ್ತೆ ಸಂಪರ್ಕ ಕಡಿತವಾಗಿರುವ ಕಾರಣ ಕಂಗಾಲಾಗಿದ್ದಾರೆ. ಬಹುತೇಕ ಲಾರಿಗಳು ಲೋಡ್​ ಆಗಿರುವ ಕಾರಣ ಇನ್ನಷ್ಟು ಸಮಸ್ಯೆ ಬಿಗಡಾಯಿಸಿದೆ. ಇನ್ನು ಒಂದು ವಾರಗಳ ಕಾಲ ಇದೆ ಸ್ಥಿತಿ ಮುಂದುವರಿಯಲಿದೆ ಎನ್ನಲಾಗುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: