Karnataka Politics: ಶೀಘ್ರದಲ್ಲೇ 40 ಬಿಜೆಪಿ ಶಾಸಕರು ಕಾಂಗ್ರೆಸ್​​ ಸೇರಲಿದ್ದಾರೆ; ಭವಿಷ್ಯ ನುಡಿದ ಮಾಜಿ ಶಾಸಕ ರಾಜು ಕಾಗೆ

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಕ್ಷಾಂತರ ಪರ್ವ ನಡೆಯಲಿದೆಯಾ? ಬಿಜೆಪಿ ಪಕ್ಷವನ್ನ ತೊರೆದು ಕಾಂಗ್ರೆಸ ಪಕ್ಷವನ್ನ ಸೇರ್ತಾರಾ 40 ಜನ ಶಾಸಕರು? ಬಿಜೆಪಿ ಪಾಳಯದಲ್ಲಿನ ಗುಂಪುಗಾರಿಗೆ, ಅಸಮಾಧಾನದ ಹೊಗೆ ದಟ್ಟವಾಗಿ ಆವರಿಸಿದೆ. ಇದನ್ನ ಕಾಂಗ್ರೆಸ್​​ ಪಕ್ಷ ರಾಜಕೀಯ ದಾಳವಾಗಿ ಬಳಸಿಕೊಂಡು ಆಪರೇಷನ್ ಹಸ್ತ ನಡೆಸುತ್ತಿದೆಯಾ? ಹೀಗೊಂದು ಅನುಮಾನಕ್ಕೆ, ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್​ ಮುಖಂಡ ರಾಜು ಕಾಗೆ

ಕಾಂಗ್ರೆಸ್​ ಮುಖಂಡ ರಾಜು ಕಾಗೆ

  • Share this:
ಚಿಕ್ಕೋಡಿ(ಅ.04): 2023ರ ಚುನಾವಣೆ ವೇಳೆಗೆ(Assembly Election 2023) ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ನಡೆಯಲಿದೆ. ಬಿಜೆಪಿಯ 40 ಶಾಸಕರು(BJP's 40 MLA's) ಕಾಂಗ್ರೆಸ್(Congress)​ ಸೇರುತ್ತಾರೆ ಹೀಗೊಂದು ಭವಿಷ್ಯ ನುಡಿದಿದ್ದಾರೆ ಮಾಜಿ ಶಾಸಕ, ಕಾಂಗ್ರೆಸ್​ ಮುಖಂಡ ರಾಜು ಕಾಗೆ(Congress Leader Raju Kage). ಕಾಗೆ ಸ್ಫೋಟಕ  ಹೇಳಿಕೆ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಹೌದು, ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಕ್ಷಾಂತರ ಪರ್ವ ನಡೆಯಲಿದೆಯಾ? ಬಿಜೆಪಿ ಪಕ್ಷವನ್ನ ತೊರೆದು ಕಾಂಗ್ರೆಸ ಪಕ್ಷವನ್ನ ಸೇರ್ತಾರಾ 40 ಜನ ಶಾಸಕರು? ಬಿಜೆಪಿ ಪಾಳಯದಲ್ಲಿನ ಗುಂಪುಗಾರಿಗೆ, ಅಸಮಾಧಾನದ ಹೊಗೆ ದಟ್ಟವಾಗಿ ಆವರಿಸಿದೆ. ಇದನ್ನ ಕಾಂಗ್ರೆಸ್​​ ಪಕ್ಷ ರಾಜಕೀಯ ದಾಳವಾಗಿ ಬಳಸಿಕೊಂಡು ಆಪರೇಷನ್ ಹಸ್ತ ನಡೆಸುತ್ತಿದೆಯಾ? ಹೀಗೊಂದು ಅನುಮಾನಕ್ಕೆ, ಚರ್ಚೆಗೆ ಎಡೆ ಮಾಡಿಕೊಟ್ಟಿದೆ ಬೆಳಗಾವಿ ಜಿಲ್ಲೆಯ ಕಾಗವಾಡದ ಮಾಜಿ‌ ಶಾಸಕ, ಕಾಂಗ್ರೆಸ ಮುಖಂಡ ರಾಜು ಕಾಗೆ ಅವರ ಸ್ಫೋಟಕ ಹೇಳಿಕೆ. ರಾಜು ಕಾಗೆ ಸಿಡಿಸಿರುವ ಬಾಂಬ್ ಕೇಸರಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ನಿನ್ನೆ ರಾಜು ಕಾಗೆ ಅಥಣಿ ತಾಲೂಕಿನ ಮದಬಾವಿಯಲ್ಲಿ ಬಾಂಬ್ ಸಿಡಿಸಿದ್ದಾರೆ. ಜನರು ಯಡಿಯೂರಪ್ಪ, ನರೇಂದ್ರ ಮೋದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಮಂತ್ರಿ ಮಂಡಲದಲ್ಲಿ ಬೆಳಗಾವಿಯ ಇಬ್ಬರು-ಮೂವರು ಶಾಸಕರನ್ನ ಕೈ ಬಿಟ್ಟಿದ್ದಾರೆ.  ಸಚಿವ ಸ್ಥಾನ ಸಿಗದ ಶಾಸಕರು ಸೇರಿ 40 ಜನ ಬಿಜೆಪಿ ಶಾಸಕರು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಅಂತಾ ಮಾಜಿ ಶಾಸಕ ರಾಜು ಕಾಗೆ ಸ್ಫೋಟ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:KS Eshwarappa: ಮುಂದಿನ ವಿಧಾನಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್​ ಎರಡು ಹೋಳಾಗುತ್ತೆ; ಸಚಿವ ಈಶ್ವರಪ್ಪ ಭವಿಷ್ಯ

ಇನ್ನು, 2023 ರ ಚುನಾವಣೆಗೆ ಸಿದ್ಧತೆ ನಡೆಸುವಂತೆ ರಾಜು ಕಾಗೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈಗ ರಾಜು ಕಾಗೆ ಹೇಳಿಕೆ ಬಿಜೆಪಿ ಪಾಳಯದಲ್ಲಿ ಸಂಚಲನ‌ ಮೂಡಿಸಿದೆ. ಮಂತ್ರಿ ಸ್ಥಾನ ಸಿಗದ ಬೆಳಗಾವಿ ಜಿಲ್ಲೆಯ ಮೂವರು ಶಾಸಕರು ಕಾಂಗ್ರೆಸ್​​ ಸೇರ್ತಾರೆ ಅಂತಾ ರಾಜು ಕಾಗೆ ಹೇಳಿಕೆ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಯಾಕೆಂದರೆ ಕಾಂಗ್ರೆಸ್​​​ ತೊರೆದು ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಮತ್ತು ಮಹೇಶ ಕುಮಟಳ್ಳಿ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂವರಲ್ಲಿ ಇಬ್ಬರು ಮಂತ್ರಿ ಆಗಿದ್ದರು. ಸಿಡಿ ಕೇಸ್​​ನಿಂದ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನ ಕಳೆದುಕೊಂಡರೆ, ಅತ್ತ ಶ್ರೀಮಂತ ಪಾಟೀಲ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಮೂರು ಬಾರಿ ಬೆಳಗಾವಿಗೆ ಬಂದರೂ ರಮೇಶ್ ಜಾರಕಿಹೊಳಿ ದೂರವೇ ಉಳಿದುಕೊಂಡಿದ್ದರು. ಅತ್ತ ಶ್ರೀಮಂತ ಪಾಟೀಲ್ ಉಳಿದ ನಾಲ್ಕು ಸ್ಥಾನದಲ್ಲಿ ಒಂದು ಮಂತ್ರಿ ಸ್ಥಾನ ನನಗೆ ಸಿಗುತ್ತೆ ಅಂತಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಇನ್ನು, ಮಹೇಶ್​​ ಕುಮಟಳ್ಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಬಿಜೆಪಿ ವರಿಷ್ಠರು ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ರಾಜು ಕಾಗೆ ಹೇಳಿಕೆ ಕಾಂಗ್ರೆಸ್​​ ಮತ್ತು ಬಿಜೆಪಿ ಪಾಳಯದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಒಟ್ಟಿನಲ್ಲಿ ಮಾಜಿ ಶಾಸಕ ರಾಜು ಕಾಗೆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟು ಹಾಕಿದೆ. ಕಾಗೆ ಭವಿಷ್ಯ ನಿಜವಾಗುತ್ತಾ ಇಲ್ಲವಾ ಅನ್ನೋದನ್ನ ಕಾಲವೇ ಉತ್ತರಿಸಲಿದೆ.
Published by:Latha CG
First published: