Karnataka Politics: ಸಿಎಂ ಮಕ್ಕಳು ಸಿಎಂ ಆದವರಲ್ಲಿ ಬಸವರಾಜ ಬೊಮ್ಮಾಯಿ ಎರಡನೆಯವರು

ಜನತಾದಳದ ಮೂಲಕೇ ರಾಜಕೀಯಕ್ಕೆ ಬಂದ ಬಸವರಾಜ ಬೊಮ್ಮಾಯಿ ಯುವ ಜನತಾದಳ ಬೆಳೆಯುವಲ್ಲಿ ಸಾಕಷ್ಟು ಕೊಡುಗೆ ನೀಡಿದವರು ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಬೆಳೆಸಿದವರು ಆದರೆ ರಾಜಕೀಯ ನಿಂತ ನೀರಲ್ಲ ಎಂಬುದನ್ನು ಅರಿತ ಇವರು 2008 ರಲ್ಲಿ ಬಿಜೆಪಿ ಪಾಳಯಕ್ಕೆ ಹಾರಿ ಯಡಿಯೂರಪ್ಪ ಅವರ ಗುಂಪಿನಲ್ಲಿ ಗುರುತಿಸಿಕೊಂಡು ನೀರಾವರಿ ಸಚಿವರಾಗಿ ಎರಡನೇ ಅವಧಿಗೆ ಗೃಹ ಸಚಿವರಾಗಿ ಈಗ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

 • Share this:
  ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜುಲೈ 27 ಮಂಗಳವಾರ ಒಂದು ವಿಶೇಷ ಘಟನೆಯೊಂದು ನಡೆಯಿತು. ಮುಖ್ಯಮಂತ್ರಿಯ ಮಗನೊಬ್ಬ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿದರು. ಈ ಮೂಲಕ ಸಿಎಂ ಮಕ್ಕಳಲ್ಲಿ ಸಿಎಂ ಆದವರಲ್ಲಿ ಬಸವರಾಜ ಬೊಮ್ಮಾಯಿ ಎರಡನೆಯವರಾದರು. ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಕರ್ನಾಟಕ ಮತ್ತೊಂದು ಅಪರೂಪದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

  ಹಾಗಾದರೆ ಮೊದಲನೇ ಆ ವ್ಯಕ್ತಿ ಯಾರು?

  ಕರ್ನಾಟಕದ ಹಿರಿಯ ಹಾಗೂ ರಾಜಕಾರಣಿ ಮುತ್ಸದಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಸೇರಿದಂತೆ ದೇಶದ ಮಾಜಿ ಪ್ರಧಾನಿ ಎಚ್​.ಡಿ.ದೇವೆಗೌಡರ ಮೂರನೇ ಪುತ್ರ ಎಚ್​.ಡಿ.ಕುಮಾರಸ್ವಾಮಿ. ಇವರು ಕರ್ನಾಟಕದ 18ನೇ ಮುಖ್ಯ ಮಂತ್ರಿಯಾಗಿ 2006ರಲ್ಲಿ ಗದ್ದುಗೆ ಏರಿದವರು.

  ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ ಸಹ ರಾಜಕೀಯದ ಸಹವಾಸ ಬೇಡ ಎಂದು ತಮ್ಮ ಪಾಡಿಗೆ ತಾವು ಚಲನಚಿತ್ರ ವಿತರಣೆ ಹಾಗೂ ನಿರ್ಮಾಪಕರಾಗಿದ್ದ ಕುಮಾರಸ್ವಾಮಿ ಅವರು 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಂಪಿಯಾದರು ಆನಂತರ 1998ರಲ್ಲಿ ನಡೆದ ಚುನಾವಣೆಯಲ್ಲಿ ಸೋತರು, ಸೋತ ಮೇಲೆ ರಾಜಕೀಯದಿಂದ ದೂರ ಸರಿಯುತ್ತಾರೆ ಎಂದು ಹೇಳಲಾಗಿತ್ತು ಆದರೆ 2004ರಲ್ಲಿ ರಾಮನಗರದಿಂದ ಆಯ್ಕೆಯಾದರು. ಆಗ ಜೆಡಿಎಸ್​ ಕಾಂಗ್ರೆಸ್​ ಜೊತೆ ಸೇರಿ ಸರ್ಕಾರ ರಚಿಸಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್​ಗೆ ಕೈ ಕೊಟ್ಟು ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಮತ್ತೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್​ ಬೆಂಬಲದಿಂದ ಎನ್ನುವುದು ಮಾತ್ರ ಆಶ್ಚರ್ಯದ ಸಂಗತಿ.

  ಕುಮಾರಸ್ವಾಮಿ ಅವರ ತಂದೆ ಎಚ್​.ಡಿ.ದೇವೆಗೌಡರು, 1994ರಲ್ಲಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದವರು. ಡಿಸೆಂಬರ್ 11, 1994ರಂದು ಇವರು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.  ಭಾರತದ 11ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೇ 30, 1996ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದರು.

  ಆ ಎರಡನೇ ವ್ಯಕ್ತಿ ಬಸವರಾಜ ಬೊಮ್ಮಾಯಿ

  ಮುಖ್ಯಮಂತ್ರಿಯ ಮಗ ಮತ್ತೆ ಮುಖ್ಯಮಂತ್ರಿ ಆದವರಲ್ಲಿ ಬಸವರಾಜ ಬೊಮ್ಮಾಯಿ ಅವರು ಎರಡನೆಯವರು. ಇವರ ತಂದೆ ಎಸ್​.ಆರ್​.ಬೊಮ್ಮಾಯಿ (ಸೋಮಪ್ಪ ರಾಯಪ್ಪ ಬೊಮ್ಮಾಯಿ) ಆಗಸ್ಟ್ 13, 1988 ರಿಂದ ಏಪ್ರಿಲ್ 21, 1989 ವರೆಗೆ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿದ್ದವರು.  ಜಯಪ್ರಕಾಶ್​ ನಾರಾಯಣ ಅವರಿಂದ ಪ್ರೇರಿತರಾಗಿದ್ದ ಬೊಮ್ಮಾಯಿ ಅವರು ಇಡೀ ಉತ್ತರ ಕರ್ನಾಟಕದ ತುಂಬಾ ಜೆಪಿ ಚಳುವಳಿ ಹಬ್ಬಲು ಕಾರಣರಾದರು. ಅಲ್ಲದೇ ಕಾಂಗ್ರೆಸ್​ ಸರ್ಕಾರದ ಕಟು ಟೀಕಾಕಾರರಾಗಿದ್ದ ಬೊಮ್ಮಾಯಿ ಅವರದು ಹೋರಾಟದ ಬದುಕು.

  ಕರ್ನಾಟಕದ ಅಂದಿನ ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯನವರು 1989ರ ಏಪ್ರಿಲ್ 21ರಂದು ಎಸ್.ಆರ್. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ, ಬಹುಮತ ಹೊಂದಿದ್ದ ಸರ್ಕಾರವನ್ನೇ ವಜಾ ಮಾಡಿದ್ದರು. ಇದರ ವಿರುದ್ದ ಗುಡುಗಿದ್ದ ಬೊಮ್ಮಾಯಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

  ಇದನ್ನೂ ಓದಿ: ಬಿಎಸ್​ವೈ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದ ಬಸವರಾಜ ಬೊಮ್ಮಾಯಿ: ಬುಧವಾರ 11 ಗಂಟೆಗೆ ಪ್ರಮಾಣ ವಚನ

  ಈಗ ಅವರ ಮಗ ಬಸವರಾಜ ಬೊಮ್ಮಾಯಿ ಬುಧವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಜನತಾದಳದ ಮೂಲಕ ರಾಜಕೀಯಕ್ಕೆ ಬಂದ ಬಸವರಾಜ ಬೊಮ್ಮಾಯಿ ಯುವ ಜನತಾದಳ ಬೆಳೆಯುವಲ್ಲಿ ಸಾಕಷ್ಟು ಕೊಡುಗೆ ನೀಡಿದವರು ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಬೆಳೆಸಿದವರು ಆದರೆ ರಾಜಕೀಯ ನಿಂತ ನೀರಲ್ಲ ಎಂಬುದನ್ನು ಅರಿತ ಇವರು 2008 ರಲ್ಲಿ ಬಿಜೆಪಿ ಪಾಳಯಕ್ಕೆ ಹಾರಿ ಯಡಿಯೂರಪ್ಪ ಅವರ ಗುಂಪಿನಲ್ಲಿ ಗುರುತಿಸಿಕೊಂಡು ನೀರಾವರಿ ಸಚಿವರಾಗಿ ಎರಡನೇ ಅವಧಿಗೆ ಗೃಹ ಸಚಿವರಾಗಿ ಈಗ ಮುಖ್ಯಮಂತ್ರಿಯಾಗುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: