ಕೊರೋನಾ ಭೀತಿ: ರಷ್ಯಾದಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳು; ತಾಯಿ ನಾಡಿಗೆ ಮರಳಲು ಸಿಎಂಗೆ ಮನವಿ

ಈ ಬಗ್ಗೆ ನ್ಯೂಸ್ 18 ಕ್ಕೆ ರಷ್ಯಾದಲ್ಲಿ ಸಿಲುಕಿದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಿಜಾಸಪುರ ಗ್ರಾಮದ ನಿವಾಸಿ ವಿದ್ಯಾರ್ಥಿ ವೆಂಕಟರೆಡ್ಡಿ ದೇಸಾಯಿ ಮಾತನಾಡಿ, ರಷ್ಯಾದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸರಕಾರ ನಮಗೆ ವಿಶೇಷ ವಿಮಾನ ಸೌಲಭ್ಯ ಕಲ್ಪಿಸಿ ತಾಯಿ ನಾಡಿಗೆ ಕರೆದುಕೊಂಡು ಹೋಗಬೇಕೆಂದು ನೋವು ತೋಡಿಕೊಂಡರು.

news18-kannada
Updated:June 30, 2020, 10:48 AM IST
ಕೊರೋನಾ ಭೀತಿ: ರಷ್ಯಾದಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳು; ತಾಯಿ ನಾಡಿಗೆ ಮರಳಲು ಸಿಎಂಗೆ ಮನವಿ
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ(ಜೂ.30): ರಷ್ಯಾದಲ್ಲಿರುವ  ಕನ್ನಡಿಗ ವಿದ್ಯಾರ್ಥಿಗಳು ಕೊರೋನಾ ಆತಂಕದಿಂದ ತಾಯಿ ನಾಡಿಗೆ ಮರಳಲು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದ ಬೆಂಗಳೂರು, ದಾವಣಗೆರೆ, ತುಮಕೂರು, ಗದಗ, ಯಾದಗಿರಿ, ಚಿತ್ರದುರ್ಗ ಹಾಗೂ ಇನ್ನಿತರ ಜಿಲ್ಲೆಗಳ ವಿದ್ಯಾರ್ಥಿಗಳು ರಷ್ಯಾ ದೇಶದ ಮಾಸ್ಕೋ ಸಿಟಿಯ  ವಿವಿಧ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ರಷ್ಯಾದಲ್ಲಿ ಕೂಡ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಸತಿ ನಿಲಯಗಳಲ್ಲಿ ವಾಸವಾಗಿದ್ದಾರೆ.

ಕೊರೋನಾದಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು  ಭಾರತಕ್ಕೆ  ತೆರಳಲು ಮುಂದಾಗಿದ್ದಾರೆ. ಈ ಬಗ್ಗೆ ರಷ್ಯಾದಲ್ಲಿನ ರಾಯಭಾರಿ ಕಚೇರಿಗೆ ಸಂಪರ್ಕ ಮಾಡಿದರೂ ಸಹ ಸರಿಯಾಗಿ ಸ್ಪಂದಿಸಿಲ್ಲವಂತೆ ಹೀಗೆಂದು ವಿದ್ಯಾರ್ಥಿಗಳು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳ ಮೂಲಕ  ತೊಡಿಕೊಂಡಿದ್ದಾರೆ. ಕೇಂದ್ರ ಸರಕಾರ ವಿದೇಶದಲ್ಲಿ ಸಿಲುಕಿರುವ ಭಾರತದ ನಿವಾಸಿಗಳನ್ನು ವಂದೇ ಭಾರತ ಮಿಷನ್ ಮೂಲಕ ವಿಶೇಷ ವಿಮಾನ ಸೌಕರ್ಯ ಕಲ್ಪಿಸಿ ದೇಶಕ್ಕೆ ಕರೆತರುವ ಕೆಲಸ ಮಾಡುತ್ತಿದೆ.

ಆದರೆ, ನಾವು ಈ ಬಗ್ಗೆ ಸಾಮಾಜಿಕ ಜಾಲತಾಣದ‌ ಮೂಲಕ ರಾಜಕೀಯ ನಾಯಕರ ಗಮನಕ್ಕೆ ತಂದರೂ ಬೇಗ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸಿಎಂ ಬಿಎಸ್ ವೈ ಅವರು ನಮಗೆ ಮಾಸ್ಕೋದಿಂದ ನೇರವಾಗಿ ಬೆಂಗಳೂರು ಕರೆದುಕೊಂಡು ಹೋಗಲು ಅವಕಾಶ ಮಾಡಿಕೊಡಿ. ನಿಮ್ಮ ಸಹಾಯ ನಿರೀಕ್ಷೆ ಮಾಡುತ್ತಿದ್ದೇವೆಂದು ವಿದ್ಯಾರ್ಥಿಗಳು ಸಿಎಂಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕ್ಕೆ ರಷ್ಯಾದಲ್ಲಿ ಸಿಲುಕಿದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಿಜಾಸಪುರ ಗ್ರಾಮದ ನಿವಾಸಿ ವಿದ್ಯಾರ್ಥಿ ವೆಂಕಟರೆಡ್ಡಿ ದೇಸಾಯಿ ಮಾತನಾಡಿ, ರಷ್ಯಾದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸರಕಾರ ನಮಗೆ ವಿಶೇಷ ವಿಮಾನ ಸೌಲಭ್ಯ ಕಲ್ಪಿಸಿ ತಾಯಿ ನಾಡಿಗೆ ಕರೆದುಕೊಂಡು ಹೋಗಬೇಕೆಂದು ನೋವು ತೋಡಿಕೊಂಡರು. ರಷ್ಯಾದ ವಿವಿಧ ಭಾಗದಲ್ಲಿ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯಕ್ಕೆ ತೆರಳಲು ಮುಂದಾಗಿದ್ದು ನಿತ್ಯವೂ ತಮ್ಮ ತಾಯಿ ನಾಡಿಗೆ ಯಾವಾಗ ತೆರಳುತ್ತೇವೆಂದು ಚಿಂತೆ ಮಾಡುವಂತಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಹ ಸದ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ.

ಈಗಾಗಲೇ ಸಾಕಷ್ಟು ಮಂದಿ ಕನ್ನಡಿಗರು ರಷ್ಯಾದಲ್ಲಿ ಸಿಲುಕಿದ್ದಾರೆ. ಅವರಲ್ಲಿ ರಾಜ್ಯಕ್ಕೆ ಬರಲು  ಎಷ್ಟು ಜನ ಮುಂದಾಗಿದ್ದಾರೆಂದು ಪಟ್ಟಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕೂಡಲೇ ರಾಜ್ಯ ಸರಕಾರ ರಷ್ಯಾದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ  ಪಡೆದು ವಿದ್ಯಾರ್ಥಿಗಳು ಹಿತ ಕಾಪಾಡಬೇಕಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading