HOME » NEWS » District » KARNATAKA MATERIAL TESTING AND RESEARCH CENTER GETS LAND IN HUBLI INDUSTRIAL AREA FOR 99 YEARS LEASE SNVS

ಕರ್ನಾಟಕ ಮೆಟೀರಿಯಲ್ ಟೆಸ್ಟಿಂಗ್ ಅಂಡ್ ರಿಸರ್ಚ್ ಸೆಂಟರ್​ಗೆ ಹುಬ್ಬಳ್ಳಿಯಲ್ಲಿ ಲೀಸ್ ಪತ್ರ ವಿತರಣೆ

ಸರಕಾರದ ಅನುದಾನದಡಿಯಲ್ಲಿ ಸ್ಥಾಪಿಸಿದ ಕರ್ನಾಟಕ ಮೆಟಿರಿಯಲ್ ಟೆಸ್ಟಿಂಗ್ ಅಂಡ್ ಸೆಂಟರ್ ಎನ್.ಎ.ಬಿ.ಎಲ್ ಪ್ರಮಾಣ ಪತ್ರ ಹೊಂದಿದೆ. 25 ವರ್ಷಗಳಿಂದ ವಿವಿಧ ಕೈಗಾರಿಕೆಗಳಿಗೆ ವಸ್ತುಗಳ ಗುಣಮಟ್ಟ ಪರೀಕ್ಷಿಸಿ ಕೊಡುವ ಈ ಸಂಸ್ಥೆಗೆ ಲೀಸ್ ಪತ್ರ ನೀಡುವ ಮೂಲಕ ಪರೀಕ್ಷಾ ಕೇಂದ್ರ ಅಭಿವೃಪಡಿಸಲು ಸರ್ಕಾರ ಒತ್ತು ನೀಡಿದೆ.

news18-kannada
Updated:August 5, 2020, 5:05 PM IST
ಕರ್ನಾಟಕ ಮೆಟೀರಿಯಲ್ ಟೆಸ್ಟಿಂಗ್ ಅಂಡ್ ರಿಸರ್ಚ್ ಸೆಂಟರ್​ಗೆ ಹುಬ್ಬಳ್ಳಿಯಲ್ಲಿ ಲೀಸ್ ಪತ್ರ ವಿತರಣೆ
ಕರ್ನಾಟಕ ಮೆಟೀರಿಯಲ್ ಟೆಸ್ಟಿಂಗ್ ಅಂಡ್ ರಿಸರ್ಚ್ ಸೆಂಟರ್​ಗೆ ಕೈಗಾರಿಕಾ ಪ್ರದೇಶದಲ್ಲಿ ಲೀಸ್ ಪತ್ರ ನೀಡಿದ ಜಗದೀಶ್ ಶೆಟ್ಟರ್
  • Share this:
ಹುಬ್ಬಳ್ಳಿ: ಕರ್ನಾಟಕ ಮೆಟೀರಿಯಲ್ ಟೆಸ್ಟಿಂಗ್ ಅಂಡ್ ರಿಸರ್ಚ್ ಸೆಂಟರ್ ಸಂಸ್ಥೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ಲೇಔಟ್​ನಲ್ಲಿ ಸ್ಥಳ ನೀಡಲಾಗಿದೆ. ಈ ವಸಾಹತುವಿನಲ್ಲಿರುವ G4, G5 ಶೆಡ್ಡುಗಳನ್ನು 99 ವರ್ಷಗಳ ಕಾಲ ಲೀಸ್​ಗೆ ನೀಡುವ ಪತ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಸ್ತಾಂತರಿಸಿದರು. 

ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಡಿಯಲ್ಲಿ ಸ್ಥಾಪಿಸಿದ ಕರ್ನಾಟಕ ಮೆಟಿರಿಯಲ್ ಟೆಸ್ಟಿಂಗ್ ಅಂಡ್ ಸೆಂಟರ್ ಸಂಸ್ಥೆ ಎನ್.ಎ.ಬಿ.ಎಲ್ (ನ್ಯಾಷಿನಲ್ ಅಕ್ರಿಡಿಯೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅ್ಯಂಡ್ ಕ್ಯಾಲಿಬರೇಷನ್ ಲ್ಯಾಬೋರೇಟರಿಸ್) ಪ್ರಮಾಣ ಪತ್ರ ಹೊಂದಿದೆ. ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ ಇದು ವಸ್ತುಗಳ ಗುಣಮಟ್ಟ ಪರೀಕ್ಷಿಸಿ ಕೊಡುತ್ತಿದೆ.

ಲೀಸ್ ಪತ್ರ ನೀಡುವ ಮುಖಾಂತರ ಈ ಪರೀಕ್ಷಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಒತ್ತು ನೀಡಿದೆ. ಉದ್ದಿಮೆದಾರರ ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಪ್ರಮಾಣದ ಟೆಸ್ಟಿಂಗ್ ಅನುಕೂಲತೆಯನ್ನು ಒದಗಿಸಲು ಸಂಸ್ಥೆಯನ್ನು‌ ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: ತುಮಕೂರಿನ ಸಿದ್ದಗಂಗಾ ಮಠದ ಮಕ್ಕಳಿಗೆ ಸ್ಪಿರುಲಿನಾ ಔಷಧಿ ವಿತರಣೆ

ಈ ಸಂದರ್ಭದಲ್ಲಿ ಕೆ.ಎಸ್.ಎಸ್.ಐ‌.ಡಿ.ಸಿ ಅಧಿಕಾರಿ ಡಿ.ಹೆಚ್.ನಾಗೇಶ್, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಮೋಹನ ಭರಮಕ್ಕನವರ, ಪರೀಕ್ಷಾ ಕೇಂದ್ರದ ಅಧ್ಯಕ್ಷ ನಾಗರಾಜ ದಿವಾಟೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಜಾಡರ್, ಕಾರ್ಯನಿರ್ವಾಹಕ ‌ಅಧಿಕಾರಿ ನರೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಜಯಪ್ರಕಾಶ್ ತೆಂಗಿನಕಾಯಿ, ಸಹ ಕಾರ್ಯದರ್ಶಿ ಎಂ.ಕೆ. ಪಾಟೀಲ, ಖಾಜಾಂಚಿ ಹೇಮಂತ್‌ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಶೀಘ್ರ ಗುಣಮುಖರಾಗಲಿ: ಸಚಿವ ಜಗದೀಶ್ ಶೆಟ್ಟರ್ ಹಾರೈಕೆ:

ನಾಡಿನ ಅಭಿವೃದ್ಧಿ ಹಾಗೂ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಹಗಲಿರುಳು ತಮ್ಮನ್ನು ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಪಾಸಿಟಿವ್ ಸೋಂಕಿನಿಂದ ಶೀಘ್ರ ಗುಣಮುಖರಾಗಿ ಹೊರ ಬರಲಿ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾರೈಸಿದ್ದಾರೆ.

ರೋಗ ಲಕ್ಷಣಗಳಿಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಗುಣಮುಖರಾಗಿ ರಾಜ್ಯದ ಜನತೆಗೆ ಪುನಃ ಅವರ ದಕ್ಷ ಮತ್ತು ನಿಸ್ವಾರ್ಥ ಸೇವೆ ಬೇಗ ದೊರಕುವಂತಾಗಲಿ ಎಂದು ಸಚಿವರಾದ ಶೆಟ್ಟರ್ ತಿಳಿಸಿದ್ದಾರೆ.
Published by: Vijayasarthy SN
First published: August 5, 2020, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories