• Home
  • »
  • News
  • »
  • district
  • »
  • Ankola-Hubli Railway: ಅಂಕೋಲಾ-ಹುಬ್ಬಳ್ಳಿ ರೈಲ್ವೇ ಯೋಜನೆ; ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ!

Ankola-Hubli Railway: ಅಂಕೋಲಾ-ಹುಬ್ಬಳ್ಳಿ ರೈಲ್ವೇ ಯೋಜನೆ; ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ!

ದಯವಿಟ್ಟು ಏನಾದರೂ ಬದಲಿ ವ್ಯವಸ್ಥೆ ಮಾಡಿ ನಮಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ದಯವಿಟ್ಟು ಏನಾದರೂ ಬದಲಿ ವ್ಯವಸ್ಥೆ ಮಾಡಿ ನಮಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಉತ್ತರಕನ್ನಡ ರೈಲ್ವೇ ಸೇವಾ ಸಮಿತಿಯವರು ತಡೆಯಾಜ್ಞೆ ತೆರವು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು ಇದೇ ತಿಂಗಳ 25 ರಂದು ಈ ಬಗ್ಗೆ ತೀರ್ಪು ಬರಲಿದೆ.

  • Share this:

ಕಾರವಾರ: ಅಂಕೋಲಾ-ಹುಬ್ಬಳ್ಳಿ ನಡುವಿನ ರೈಲ್ವೆ ಮಾರ್ಗ (Ankola Hubli Railway Project) ಉತ್ತರಕನ್ನಡ (Uttara Kannada) ಜಿಲ್ಲೆಯ ಜನರ ಬಹುದಿನದ ಕನಸ್ಸು. ಸುಮಾರು ಎರಡು ದಶಕಗಳ ಹಿಂದೆಯೇ ಯೋಜನೆಗೆ ಚಾಲನೆ ನೀಡಿದ್ದರೂ ಪರಿಸರವಾದಿಗಳ (Environmentalist) ವಿರೋಧದಿಂದ ಇನ್ನೂ ಕೂಡಾ ಯೋಜನೆ ಜಾರಿಯಾಗಿಲ್ಲ. ಸದ್ಯ ರಾಜ್ಯ ವನ್ಯ ಜೀವಿ (Wild Life) ಮಂಡಳಿಯ ಸಮ್ಮತಿಗೆ ತಡೆಯಾಜ್ಞೆ ಇರುವುದರಿಂದ ಉತ್ತರಕನ್ನಡ ರೈಲ್ವೇ ಸೇವಾ ಸಮಿತಿ, ಯೋಜನೆ ಜಾರಿಮಾಡಲು ತಡೆಯಾಜ್ಞೆ ತೆರವು ಮಾಡುವಂತೆ ನ್ಯಾಯಾಲಯ (Court) ಮೆಟ್ಟಿಲೇರಿದ್ದಾರೆ. ಅಂಕೋಲಾ ಹುಬ್ಬಳ್ಳಿ ನಡುವಿನ ರೈಲ್ವೆ ಯೋಜನೆ ಸುಮಾರು ನೂರು ವರ್ಷದ ಕನಸ್ಸಿನ ಯೋಜನೆಯಾಗಿದೆ. ಕರಾವಳಿ ಮತ್ತು ಘಟ್ಟದ ಮೇಲಿನ  ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ 1999ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದ್ದರು. ಆದರೆ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರ ವಾದಿಗಳು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿಲ್ಲ. 


ನ.25ರ ಮೇಲೆ ಉತ್ತರ ಕನ್ನಡ ಜಿಲ್ಲೆಯವ ಜನತೆಯ ಕಣ್ಣು 


ಕಳೆದ ವರ್ಷ ಅಂದಿನ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆ ಜಾರಿಗೆ ಸಮ್ಮತಿ ನೀಡಿದ್ದು, ಯೋಜನೆ ಜಾರಿಯಾಗಬೇಕು ಎಂದು ಕನಸ್ಸಿಟ್ಟುಕೊಂಡಿದ್ದ ಜಿಲ್ಲೆಯ ಜನರ ಮುಖದಲ್ಲಿ ಖುಷಿ ಮೂಡಿಸಿತ್ತು. ಆದರೆ ಬೆಂಗಳೂರಿನ ಎನ್.ಜಿ.ಓ ಒಂದು ವನ್ಯ ಜೀವಿ ಮಂಡಳಿಯ ಅನುಮೋದನೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿತ್ತು. ಇದೀಗ ಉತ್ತರಕನ್ನಡ ರೈಲ್ವೇ ಸೇವಾ ಸಮಿತಿಯವರು ತಡೆಯಾಜ್ಞೆ ತೆರವು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು ಇದೇ ತಿಂಗಳ 25 ರಂದು ಈ ಬಗ್ಗೆ ತೀರ್ಪು ಬರಲಿದೆ. ಈ ಹಿನ್ನೆಲೆ ತಡೆಯಾಜ್ಞೆ ತೆರವಾಗುವ ಮೂಲಕ ಹುಬ್ಬಳ್ಳಿ ಅಂಕೋಲಾ ನಡುವಿನ ರೈಲ್ವೆ ಮಾರ್ಗದ ಯೋಜನೆ ಕಾರ್ಯರೂಪಕ್ಕೆ ಬರಲು ಒಂದು ಹೆಜ್ಜೆ ಮುಂದೆ ಹೋಗಲಿದೆ ಎನ್ನುವ ವಿಶ್ವಾಸವನ್ನ ಸಮಿತಿ ಸದಸ್ಯರು ವ್ಯಕ್ತಪಡಿಸಿದ್ದಾರೆ.


ಯೋಜನೆಯ ಶೀಘ್ರ ಜಾರಿಗೆ ಬೇಡಿಕೆ 


ಇನ್ನು ಹುಬ್ಬಳ್ಳಿ ಮತ್ತು ಅಂಕೋಲಾ ನಡುವೆ ರೈಲ್ವೆ ಯೋಜನೆ ಜಾರಿಯಾದರೆ ಕರಾವಳಿ ಮತ್ತು ಘಟ್ಟದ ಮೇಲಿನ ಸಂಪರ್ಕ ಕಲ್ಪಿಸಲಿದೆ. ಬಂದರುಗಳಲ್ಲಿ ಹೊರದೇಶ, ಹೊರ ರಾಜ್ಯಗಳಿಂದ ಬರುವ ವಸ್ತುಗಳನ್ನ ಘಟ್ಟದ ಮೇಲಿನ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು, ಘಟ್ಟದ ಮೇಲಿನ ವಸ್ತುಗಳನ್ನ ಕರಾವಳಿಗೆ ತಂದು ಸಮುದ್ರ ಮಾರ್ಗವಾಗಿ ಬೇರೆ ದೇಶಗಳಿಗೆ ಕಳುಹಿಸಲು ಸಹಕಾರಿಯಾಗುವುದರಿಂದ ವ್ಯಾಪಾರ ವ್ಯವಹಾರ ಉದ್ದೇಶದಿಂದ ಯೋಜನೆ ಬಹಳ ಮುಖ್ಯವಾಗಿತ್ತು. ಆದರೆ ಈ ಬಗ್ಗೆ ಅರಿವೇ ಇಲ್ಲದ ಕೆಲವು ಪರಿಸರವಾದಿಗಳು ಬೆಂಗಳೂರಿನಲ್ಲಿ ಕುಳಿತು ಯೋಜನೆಗೆ ವಿರೋಧ ಮಾಡುತ್ತಿದ್ದು ಇದರಿಂದ ಜಿಲ್ಲೆಯ ಅಭಿವೃದ್ದಿಗೆ ಸಹ ಹಿನ್ನಡೆಯಾಗಲಿದೆ. ಏನೇ ಆದರೂ ಶೀಘ್ರದಲ್ಲಿ ಯೋಜನೆ ಜಾರಿಯಾಗಬೇಕು ಎನ್ನುವುದು ಜಿಲ್ಲೆಯ ಜನರ ಅಭಿಪ್ರಾಯ.


ಇದನ್ನೂ ಓದಿ: Tamil Cinema ಶೂಟಿಂಗ್ ವೇಳೆ ಎಡವಟ್ಟು; ಮೇಲುಕೋಟೆ ಚಲುವನಾರಾಯಣಸ್ವಾಮಿ ಅಭಿಷೇಕದ ತೀರ್ಥ ಕಲುಷಿತ


ಸದ್ಯ ರಾಜ್ಯ ವನ್ಯ ಜೀವಿ ಮಂಡಳಿ ಅನುಮೋದನೆ ತಡೆಯಾಜ್ಞೆಗೆ ತೆರವಾದರೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದು ಯೋಜನೆ ಪ್ರಾರಂಭಿಸುವ ಸಿದ್ದತೆಯನ್ನ ಸಹ ಸರ್ಕಾರ ಮಾಡಿಕೊಂಡಿದೆ. ಪರಿಸರವಾದಿಗಳ ವಿರೋಧದಿಂದ ಹಲವು ವರ್ಷಗಳಿಂದ ಯೋಜನೆ ಕಾರ್ಯರೂಪಕ್ಕೆ ಬರದೇ ಉಳಿದಿದ್ದು, ಇನ್ನಾದರೂ ಯೋಜನೆ ಜಾರಿಗೆ ಎದುರಾಗಿರುವ ಅಡ್ಡಿಗಳು ತೆರವಾಗಲಿದೆಯೇ ಅನ್ನೋದನ್ನ ಕಾದು ನೋಡಬೇಕಾಗಿದೆ.

Published by:Kavya V
First published: