ಸಾಮಾಜಿಕ ಜಾಲತಾಣ ಮೂಲಕ ಅಂಗೈಯಲ್ಲಿ ಅವಲೋಕನ ; ಹೊಸ ಪ್ರಯೋಗದ ಮೂಲಕ ಎಸ್​ಎಸ್​ಎಲ್​​ಸಿ ಉತ್ತಮ ಫಲಿತಾಂಶಕ್ಕೆ ಯತ್ನ

ಶಿಕ್ಷಣ ಇಲಾಖೆ ಮತ್ತು ಬಿಜಿವಿಎಸ್ ಸೇರಿ ಎಸ್​ಎಸ್​ಎಲ್​​ಸಿ ಉತ್ತಮ ಫಲಿತಾಂಶಕ್ಕಾಗಿ ಹೊಸ ಪ್ರಯತ್ನ ಮಾಡಿವೆ.

ಯುಟ್ಯೂಬ್ ಪಾಠ ಮಾಡುತ್ತಿರುವ ಶಿಕ್ಷಕ

ಯುಟ್ಯೂಬ್ ಪಾಠ ಮಾಡುತ್ತಿರುವ ಶಿಕ್ಷಕ

  • Share this:
ರಾಯಚೂರು(ಜೂ.05): ಕೊರೋನಾಕ್ಕೆ ದೇಶವೇ ತತ್ತರಿಸಿದೆ. ಹತ್ತಾರು ಚಟುವಟಿಕೆಗಳ ಮೇಲೆ ಗಾಢ ಪರಿಣಾಮ ಉಂಟಾಗಿದ್ದು, ಇದಕ್ಕೆ  ಶೈಕ್ಷಣಿಕ ಕ್ಷೇತ್ರವು ಹೊರತಾಗಿಲ್ಲ, ಲಾಕ್ ಡೌನ್ ನಿಂದಾಗಿ ಶಾಲೆಗಳು ಬಂದ್ ಆಗಿದ್ದವು. ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ದವಾದ ಮಕ್ಕಳಿಗೆ ಪರೀಕ್ಷೆ ಗ್ಯಾಪ್ ಆಗಿದೆ, ಇಂಥ ಸಂದರ್ಭದಲ್ಲಿ ಬಿಸಿಲು ನಾಡಿದ ಶಿಕ್ಷಣ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಿಂದ‌ ವಿದ್ಯಾರ್ಥಿಗಳಿಗೆ ಪುನರ್​ ಮನನ ಮಾಡುತ್ತಿದ್ದಾರೆ. ಅಂಗೈಯಲ್ಲಿ ಅವಲೋಕನ ಎಂಬ ಕಾನ್ಸೆಪ್ಟ್ ಮೂಲಕ ಎಸ್​ಎಸ್​​ಎಲ್​​ಸಿ  ಉತ್ತಮ‌ ಫಲಿತಾಂಶ‌ಕ್ಕಾಗಿ ಯತ್ನಿಸಲಾಗುತ್ತಿದೆ.

ಜಿಲ್ಲೆಯ ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ಎಂಬ ಯೋಚನೆಯೊಂದಿಗೆ 12 ಘಟಕ ಪರೀಕ್ಷೆಗಳನ್ನ ಮಾಡಲಾಗಿತ್ತು. ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಪ್ರಶ್ನೆ ಪತ್ರಿಕೆ ತಯಾರಿಸಿ ಘಟಕ ಪರೀಕ್ಷೆಗಳನ್ನು‌ ಕೈಗೊಂಡಿತ್ತು. ನಿಗಧಿತ ಅವಧಿಯಲ್ಲಿ ಪರೀಕ್ಷೆ ನಡೆದಿದ್ದರೆ ಉತ್ತಮ ಫಲಿತಾಂಶ ಬರುತ್ತದೆ ಎಂದು ಶಿಕ್ಷಣ ಇಲಾಖೆ ನಂಬಿತ್ತು. ಆದರೆ, ಮಾರಕ ಕೊರೋನಾ ವಕ್ಕರಿಸಿ ಎಲ್ಲಾ ತಲೆಕೆಳಗಾಗಿಸಿತು.

ಎಸ್ಎಸ್​​ಎಲ್​​ಸಿ ಪರೀಕ್ಷೆ ಮುಂದೆ ಹೋಯಿತು. ಈ ಮಧ್ಯದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿಷಯಗಳು‌ ಮರೆಯದಂತೆ ತಡೆಯಲು ಶಿಕ್ಷಣ ಇಲಾಖೆ , ಭಾರತ ಜ್ಞಾನ ವಿಜ್ಞಾನ (ಬಿಜಿವಿಎಸ್), ಶಿಕ್ಷಣ ಕಿರಣ  ಸಂಸ್ಥೆಯ ಸಹಭಾಗಿತ್ವದಲ್ಲಿ ಆನ್​​ಲೈನ್​​ (ಯು ಟ್ಯೂಬ್) ಮೂಲಕ ವಿಷಯ ಪರಿಣಿತರೊಂದಿಗೆ ಪಾಠ ಮಾಡಿಸಿ ಅಪಲೋಡ್ ಮಾಡಲಾಗಿದೆ, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಪ್ರತಿ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ರಾಯಚೂರು ಕೊನೆಯ ಸ್ಥಾನಕ್ಕಿಂತ ಮೂರ್ನಾಲ್ಕು ಸ್ಥಾನ ಮೇಲಿರುತ್ತಿತ್ತು. ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದೊಂದಿಗೆ ಅಂಗೈಯಲ್ಲಿ ಅವಲೋಕನ ಎಂಬ ಯೋಚನೆ ಮಾಡಿ ವಿಷಯಗಳ ಪಾಠ ಮಾಡುವುದನ್ನ ರೆಕಾರ್ಡ್ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಮೊಬೈಲನಲ್ಲಿ ಪಾಠಗಳ ನೋಡಿ ಕೇಳಬಹುದಾಗಿದ್ದು, ಉತ್ತಮ ಫಲಿತಾಂಶ ಕೂಡ ಬರಬಹದೆಂಬ ಆಶಾ ಭಾವನೆ ಹೊಂದಲಾಗಿದೆ.

ಸ್ಥಳೀಯ ಶಿಕ್ಷಕರನ್ನು ಬಳಸಿಕೊಂಡು ಒಂದು ಘಟಕದಲ್ಲಿ 3-4 ಪಾಠಗಳನ್ನು ಜೋಡಿಸಿ 12 ಘಟಕಗಳ ಮುಖಾಂತರ ಎಲ್ಲಾ ವಿಷಯಗಳನ್ನು ಮನ ಮುಟ್ಟುವಂತೆ ಪಾಠ ಮಾಡಿಸಿದ್ದು, ಮೊಬೈಲ್ ನಲ್ಲಿಯೂ ಸಹ ವಿದ್ಯಾರ್ಥಿಗಳು ಪಾಠವನ್ನು ಕೇಳಬಹುದು.

ಅಪಲೋಡ ಮಾಡಿದ ಒಂದು ವಾರದಲ್ಲಿ ಈಗಾಗಲೇ 15 ಸಾವಿರ ವಿದ್ಯಾರ್ಥಿಗಳು ಯುಟ್ಯೂಬ್ ನಲ್ಲಿ ಪಾಠ ವೀಕ್ಷಿಸಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಬಿಜಿವಿಎಸ್ ಸೇರಿ ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶಕ್ಕಾಗಿ ಹೊಸ ಪ್ರಯತ್ನ ಮಾಡಿವೆ.

ಇದನ್ನೂ ಓದಿ : ಪ್ರಯಾಣಿಕರ ಸುರಕ್ಷತೆಗೆ ಆಟೋಗಳಿಗೆ ಫೈಬರ್ ಪ್ಲಾಸ್ಟಿಕ್ ಕವರ್ ಅಳವಡಿಸಲು ಸೂಚನೆ ; ಗಾಯದ ಮೇಲೆ ಬರೆ ಎಳೆದ ಆರ್​ಟಿಒ

ವಿದ್ಯಾರ್ಥಿಗಳು ಅಂಗೈಯಲ್ಲಿ ಅವಲೋಕನ ಮಾಡಿ ಹೆಚ್ಚಿನ ಅಂಕ‌ ಪಡೆದು ಉತ್ತಮ ಫಲಿತಾಂಶ ಬರುವ ಮೂಲಕ ಶಿಕ್ಷಣ ಇಲಾಖೆ ಮತ್ತು ಬಿಜಿವಿಎಸ್ ನ‌ ಶ್ರಮ ಸಾರ್ಥಕವಾಗುವಂತೆ ಮಾಡುವರೆ ಎಂಬುದನ್ನು ಕಾದು ನೋಡಬೇಕು.
First published: