Coronavirus: ಕೋಲಾರದ ನರ್ಸಿಂಗ್ ಕಾಲೇಜಿನಲ್ಲಿ 32 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್; ಎಲ್ಲರೂ ಕೇರಳದಿಂದ ಬಂದವರೇ..!

ಆರೋಗ್ಯ ಸಚಿವ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ, ಕಾಲೇಜು ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ‌ ನೀಡಿದರು. ನಾಳೆ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಸೆ.1): ಕೋಲಾರದ ಕೆಜಿಎಫ್​​‌ನ  ನೂರುನ್ನೀಸಾ ಕಾಲೇಜಿನಲ್ಲಿ ಕೊರೋನಾ ಸ್ಪೋಟಗೊಂಡಿದ್ದು, ಸೋಮವಾರ  ಮತ್ತೆ 32 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್​ ದೃಢಪಟ್ಟಿದೆ. ಭಾನುವಾರದಿಂದ ಒಟ್ಟು 65 ವಿದ್ಯಾರ್ಥಿನಿಯರಲ್ಲಿ ಸೋಂಕು ಪತ್ತೆಯಾಗಿದೆ. ಈ ನರ್ಸಿಂಗ್​ ಕಾಲೇಜಿನಲ್ಲಿ  ಒಟ್ಟು 265 ಜನರು ವ್ಯಾಸಂಗ ಮಾಡುತ್ತಿದ್ದರು. ಕೇರಳದಿಂದ ಬಂದಿದ್ದ 146 ಜನರ ಪೈಕಿ 65 ಮಂದಿಗೆ ಪಾಸಿಟಿವ್ ಆಗಿದೆ. ಕೇರಳ ಮೂಲದ ವಿದ್ಯಾರ್ಥಿಗಳಿಂದಲೇ ಕೊರೋನಾ ಸೋಂಕು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಭಾನುವಾರ ಹಾಗೂ ಸೋಮವಾರ ಕಾಲೇಜಿನ 265 ವಿದ್ಯಾರ್ಥಿಗಳಿಗೆ RTPCR ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ಒಟ್ಟು 65 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ. ಸೋಂಕಿತರನ್ನು ಕೆಜಿಎಫ್​ನ ಬಿಜಿಎಂಎಲ್​ ಕೋವಿಡ್​ ಕೇರ್​ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ನ್ಯೂಸ್ 18 ಗೆ ಕೆಜಿಎಫ್​ ತಾಲೂಕು ವೈದ್ಯಾಧಿಕಾರಿ ಡಾ ಸುನಿಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:LPG Gas Price Hike: ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಮತ್ತೆ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆ

ಕೋಲಾರದ ಕೆಜಿಎಫ್​ನ ನೂರುನ್ನೀಸಾ ಕಾಲೇಜಿನಲ್ಲಿ ಕೊರೋನಾ ಸ್ಪೋಟ ಹಿನ್ನಲೆ, ನರ್ಸಿಂಗ್ ಕಾಲೇಜಿಗೆ ನೋಟೀಸ್ ಜಾರಿ ಮಾಡಲಾಗಿದೆ. ಮಾಹಿತಿ ನೀಡದೆ ಕೇರಳದಿಂದ ವಿದ್ಯಾರ್ಥಿಗಳನ್ನ ಕರೆತಂದಿದ್ದಕ್ಕೆ ನೋಟೀಸ್ ಕೊಡಲಾಗಿದೆ. ಕಳೆದ 1 ವಾರದ ಹಿಂದೆ 146 ವಿದ್ಯಾರ್ಥಿಗಳನ್ನ ಕಾಲೇಜು ಆಡಳಿತ ಮಂಡಳಿ ಕೇರಳದಿಂದ ಕರೆಸಿಕೊಂಡಿತ್ತು.

ಕೇರಳದಿಂದ ಬರುವಾಗಲೇ 146 ಮಂದಿ ವಿದ್ಯಾರ್ಥಿಗಳ ಬಳಿ ಕೊರೋನಾ ನೆಗೆಟಿವ್ ವರದಿಯಿತ್ತು. ಆದರೆ  3 ದಿನದ ಹಿಂದೆ ನರ್ಸಿಂಗ್ ಕಾಲೇಜಿನಲ್ಲಿ ಸೋಂಕಿನ ಲಕ್ಷಣ ಪತ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ,   ನೂರುನ್ನೀಸಾ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್​ನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಕೋಲಾರ ಡಿಎಚ್​ಒ ಡಾ.ಜಗದೀಶ್ ನ್ಯೂಸ್​ 18ಗೆ ಹೇಳಿದ್ದಾರೆ.ಇದನ್ನೂ ಓದಿ:Bombay Ravi: ಸುಪಾರಿ ಕಿಲ್ಲರ್, ಡಾನ್ ಬಾಂಬೆ ರವಿ ಕೊರೋನಾಗೆ ಬಲಿ

ಕೋಲಾರದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಕೋವಿಡ್ ಪಾಸಿಟಿವ್ ಆಗಿರುವ ವಿಚಾರವಾಗಿ ಆರೋಗ್ಯ ಸಚಿವ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ, ಕಾಲೇಜು ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ‌ ನೀಡಿದರು. ನಾಳೆ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೇರಳದಿಂದ ಬರುವವರೆಗೆ ಕಡ್ಡಾಯವಾಗಿ RTPCR ನೆಗಟಿವ್ ವರದಿ ಇರಬೇಕು. ಇದು ಸರ್ಕಾರದ ನಿಯಮ. ಆದ್ರೆ ಸರ್ಕಾರದ ನಿಯಮ ಮೀರಿ ಹೇಗೆ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದರು. ಒಂದೇ ಕಾಲೇಜಿನ 32 ಮಂದಿಗೆ ಪಾಸಿಟಿವ್ ಆಗಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Latha CG
First published: