ಕಲಬುರ್ಗಿಯಲ್ಲಿ ಒಂದೇ ದಿನ 28 ಕೊರೋನಾ ಪಾಸಿಟಿವ್; ಕ್ವಾರಂಟೈನ್ ಕೇಂದ್ರಗಳಲ್ಲಿ ತಲ್ಲಣ

Kalburgi Coronavirus: ಮಹಾರಾಷ್ಟ್ರ ರಾಜ್ಯದಿಂದ‌ ಮರಳಿ ಬಂದು ಸರ್ಕಾರಿ ಕ್ವಾರಂಟೈನ್ ನಲ್ಲಿರುವ 28 ಜನರಿಗೆ ಕೊರೋನಾ ಸೋಂಕು‌ ದೃಢಪಟ್ಟಿದೆ. ಇದರಿಂದಾಗಿ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ  ತಳಮಳ ಶುರುವಾಗಿದೆ.  

news18-kannada
Updated:May 27, 2020, 8:33 PM IST
ಕಲಬುರ್ಗಿಯಲ್ಲಿ ಒಂದೇ ದಿನ 28 ಕೊರೋನಾ ಪಾಸಿಟಿವ್; ಕ್ವಾರಂಟೈನ್ ಕೇಂದ್ರಗಳಲ್ಲಿ ತಲ್ಲಣ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಮೇ 27): ಕಲಬುರ್ಗಿ ಜಿಲ್ಲೆಗೆ ಇಂದೂ ಸಹ 'ಮಹಾ' ಆಘಾತ ಅಪ್ಪಳಿಸಿದೆ. ಇಂದು ಒಂದೇ ದಿನ ಬರೋಬ್ಬರಿ 28 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎಂಟು ಮಕ್ಕಳು, ಓರ್ವ ಯುವತಿ, ಇಬ್ಬರು ಮಹಿಳೆಯರು ಮತ್ತು 17 ಪುರುಷರಿದ್ದಾರೆ. ಎಲ್ಲರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ. ನಿನ್ನೆ ಒಂದೂ ಪ್ರಕರಣ ಬಂದಿರಲಿಲ್ಲ. ಇಂದು ದಿಢೀರಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಮಹಾರಾಷ್ಟ್ರ ರಾಜ್ಯದಿಂದ‌ ಮರಳಿ ಬಂದು ಸರ್ಕಾರಿ ಕ್ವಾರಂಟೈನ್ ನಲ್ಲಿರುವ 28 ಜನರಿಗೆ ಕೊರೋನಾ ಸೋಂಕು‌ ದೃಢಪಟ್ಟಿದೆ. ಇದರಿಂದಾಗಿ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ  ತಳಮಳ ಶುರುವಾಗಿದೆ.  ಜೇವರ್ಗಿ ತಾಲೂಕಿನ 13, ಕಮಲಾಪುರ ಹಾಗೂ ಆಳಂದ ತಾಲೂಕುಗಳ ತಲಾ 5, ಸೇಡಂ ತಾಲೂಕಿನ 3, ಚಿತ್ತಾಪುರ ಹಾಗೂ ಯಡ್ರಾಮಿ ತಾಲೂಕುಗಳ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಜೇವರ್ಗಿ ತಾಲೂಕಿನ ರೇವನೂರು ಗ್ರಾಮದ 38 ವರ್ಷದ ಪುರುಷ, 17 ವರ್ಷದ ಬಾಲಕಿ, 13 ವರ್ಷದ ಬಾಲಕ, 18 ವರ್ಷದ ಯುವತಿ, 50 ವರ್ಷದ ಪುರುಷ, 40 ವರ್ಷದ ಪುರುಷ, 35 ವರ್ಷದ ಮಹಿಳೆ, 26 ವರ್ಷದ ಯುವಕ, ಗುಡೂರ ಗ್ರಾಮದ 17 ವರ್ಷದ ಬಾಲಕ, 10 ವರ್ಷದ ಬಾಲಕ, ಲಕನಾಪುರ ಗ್ರಾಮದ 34 ವರ್ಷದ ಪುರುಷ, ಕೋಟನೂರ ಗ್ರಾಮದ 7 ವರ್ಷದ ಹೆಣ್ಣು ಮಗು ಹಾಗೂ 4 ವರ್ಷದ ಹೆಣ್ಣು‌ ಮಗುವಿಗೂ ಕೊರೋನಾ ಸೋಂಕಿರೋದು ದೃಢಪಟ್ಟಿದೆ.

ಇದನ್ನೂ ಓದಿ: ಸಾವರ್ಕರ್ ಬಗ್ಗೆ ತಿಳಿದು ಮಾತನಾಡಿ ನಾಮದಾರ್ ಸಿದ್ದರಾಮಯ್ಯನವರೇ; ಟ್ವಿಟ್ಟರ್​ನಲ್ಲಿ ಪ್ರಹ್ಲಾದ್​ ಜೋಶಿ ಎಚ್ಚರಿಕೆ

ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದ 22 ವರ್ಷದ ಪುರುಷ,  55 ವರ್ಷದ ಮಹಿಳೆ,  ನಾಗೂರ ತಾಂಡಾದ‌ 49 ವರ್ಷದ ಪುರುಷ, ಡೊಂಗರಗಾಂವ ಬಳಿಯ ಭೀಮನಾಳ  ತಾಂಡಾದ 36 ವರ್ಷದ ಪುರುಷ ಹಾಗೂ ಅಂಬಲಗಾ ಗ್ರಾಮದ 36 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ 34 ವರ್ಷದ ವ್ಯಕ್ತಿಗೆ, ಆಳಂದ ತಾಲೂಕಿನ ನರೋಣಾ‌ ಬಳಿಯ ಧರಿ ತಾಂಡಾದ 41 ವರ್ಷದ ಪುರುಷ ಮತ್ತು 20 ವರ್ಷದ ಯುವಕ, ಕಡಗಂಚಿ ತಾಂಡಾದ 23 ವರ್ಷದ ಯುವಕ, 16 ವರ್ಷದ ಬಾಲಕ ಹಾಗೂ 22 ವರ್ಷದ ಯುವಕನಿಗೂ ಸೋಂಕು ತಗಿಲಿದೆ. ಸೇಡಂ ಪಟ್ಟಣದ 7 ವರ್ಷದ ಬಾಲಕ, ತಾಲೂಕಿನ ಶಂಕರಾಜಿಪುರ ಗ್ರಾಮದ 27 ವರ್ಷದ ವ್ಯಕ್ತಿ ಮತ್ತು 11 ವರ್ಷದ ಬಾಲಕಿಗೂ ಸೋಂಕು ತಗುಲಿದೆ. ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾದ 40 ವರ್ಷದ ಪುರುಷನಿಗೂ ಸೋಂಕಿರೋದು ದೃಢವಾಗಿದೆ.

ಇದನ್ನೂ ಓದಿ: ಕೊರೋನಾ ಅಟ್ಟಹಾಸಕ್ಕೆ ನಲುಗಿದ ಬಸವ ಕಲ್ಯಾಣ: ಮಹಾರಾಷ್ಟ್ರ ಲಿಂಕ್​ನಿಂದಲೇ ಹಲವರಿಗೆ ಸೋಂಕು

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 185ಕ್ಕೆ ಏರಿಕೆಯಾಗಿದೆ. ಇದರಲ್ಲಿ 75 ಜನ ಗುಣಮುಖರಾಗಿದ್ದರೆ, 7 ಜನರು ನಿಧನ ಹೊಂದಿದ್ದಾರೆ. ಉಳಿದಂತೆ 103 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ. ಇಂದು ಇಬ್ಬರು ಗುಣಮುಖರಾಗಿದ್ದಾರೆ. ಪಿ-983 ಮತ್ತು ಪಿ-1039 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಿ-983 80 ವರ್ಷದ ವೃದ್ಧೆಯಾಗಿದ್ದು, ಸರಾಫ್ ಬಜಾರ್ ಪುಟಾಣಿ ಗಲ್ಲಿ ನಿವಾಸಿಗೆ ಪಿ-587 ರಿಂದ ಸೋಂಕು ತಗುಲಿತ್ತು. ಪಿ-1039 80 ವರ್ಷದ ಪುರುಷನಾಗಿದ್ದು, ಅಫಜಲಪುರ ತಾಲೂಕಿನ ಅಳ್ಳಗಿ ನಿವಾಸಿ., ಈತನಿಗೆ ಹೇಗೆ ಸೋಂಕು ಬಂತೆಂಬ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.
First published: May 27, 2020, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading