ಗಡಿ ದಾಟಿ ಬಂದ ವಲಸಿಗರು - ಕಲಬುರ್ಗಿಯಲ್ಲಿ ಸಾವಿರದ ಗಡಿ ದಾಟಿದ ಸೋಂಕಿತರು

ನಾಲ್ವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಮೂವರ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ಉಳಿದವರೆಲ್ಲರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ

news18-kannada
Updated:June 16, 2020, 7:44 PM IST
ಗಡಿ ದಾಟಿ ಬಂದ ವಲಸಿಗರು - ಕಲಬುರ್ಗಿಯಲ್ಲಿ ಸಾವಿರದ ಗಡಿ ದಾಟಿದ ಸೋಂಕಿತರು
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜೂ.16): ಗಡಿ ದಾಟಿ ಬರುತ್ತಿರುವ ವಲಸಿಗರ ಸಂಖ್ಯೆ ಏರುತ್ತಲೇ ಇದ್ದು, ಕಲಬುರ್ಗಿ ಜಿಲ್ಲೆಯ ಸೋಂಕಿತರ ಸಂಖ್ಯೆ ಇಂದು ಸಾವಿರದ ಗಡಿ ದಾಟಿದೆ. ದೇಶದ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ.

ಇಂದು ಒಂದೇ ದಿನ ಇಂದು 63 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 9 ಮಕ್ಕಳು, 22 ಮಹಿಳೆಯರು, 32 ಪುರುಷರಿದ್ದಾರೆ. ಮೂವರು ವಿದೇಶದಿಂದ ವಾಪಸ್ಸಾದವರಾದರೆ, ಓರ್ವ ಸೋಂಕಿತ ಗೋವಾದಿಂದ ವಾಪಸ್ಸಾದಾತ. ನಾಲ್ವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಮೂವರ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ಉಳಿದವರೆಲ್ಲರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1007 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ 15 ಜನ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 474 ಜನ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಸೋಂಕು ದಿನೇ ದಿನೇ ವ್ಯಾಪಕಗೊಳ್ಳಲಾರಂಭಿಸಿದ್ದು, ಸಾವಿರದ ಗಡಿ ದಾಟುವುದರೊಂದಿಗೆ ಜನತೆಯಲ್ಲಿ ಆತಂಕ ಮೂಡಿದೆ. ನಿತ್ಯ ಮಹಾರಾಷ್ಟ್ರದಿಂದ ವಲಸಿಗರು ವಾಪಸ್ಸಾಗುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ವ್ಯಾಪಕಗೊಳ್ಳುವ ಭೀತಿ ಸೃಷ್ಟಿಯಾಗಿದೆ.

ಇದನ್ನೂ ಓದಿ : ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಗ್ರಾಮೀಣ ಕ್ಷೇತ್ರಕ್ಕಾಗಿ ಫೈಟ್..!

ಕಲ್ಯಾಣ ಕರ್ನಾಟಕಕ್ಕೆ ಇಂದೂ ಮಹಾ ಕಂಟಕ ತಪ್ಪಿಲ್ಲ. ಈ ಭಾಗದ ಕಲಬುರ್ಗಿ ಜಿಲ್ಲೆಯಲ್ಲಿ ಇಂದು ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಕಲಬುರ್ಗಿ ಜಿಲ್ಲೆಯಲ್ಲಿ ಇಂದು 63 ಜನರಿಗೆ ಸೋಂಕು ದೃಢಪಟ್ಟಿವೆ. ಯಾದಗಿರಿ ಮತ್ತು ರಾಯಚೂರುಗಳಲ್ಲಿ ತಲಾ 6, ಕೊಪ್ಪಳ 4 ಹಾಗೂ ಬೀದರ್ ನಲ್ಲಿ ಇಬ್ಬರಿಗೆ ಸೋಂಕಿರುವುದು ಖಾತ್ರಿಯಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಇಂದು 81 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 12 ಮಕ್ಕಳಿದ್ದಾರೆ. ಸೋಂಕಿತರ ಪೈಕಿ ಹೆಚ್ಚಿನವರು ಮಹಾರಾಷ್ಟರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ. ವಿದೇಶದಿಂದ ಬಂದ ಕೆಲವರಿಗೂ ಸೋಂಕು ಹರಡಿದೆ. ಕಲ್ಯಾಣ ಕರ್ನಾಟಕದ ಸೋಂಕಿತರ ಸಂಖ್ಕೆ 2649 ಗೆ ಏರಿಕೆಯಾಗಿದೆ. ಇಂದು ಈ ಭಾಗದಲ್ಲಿ 111 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.
First published: June 16, 2020, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading