HOME » NEWS » District » KARNATAKA CM BS YEDIYURAPPA OFFERING BAGINA PUJA AT KRS FOR KAVERI RIVER TOMORROW HK

ಸಂಪೂರ್ಣ ಭರ್ತಿಯಾದ ಕೆಆರ್​ಎಸ್ ಜಲಾಶಯ; ನಾಳೆ ಸಿಎಂ ಯಡಿಯೂರಪ್ಪ ಬಾಗೀನ ಅರ್ಪಣೆ

ನಾಳೆ ಮಧ್ಯಾಹ್ನ 12.05 ರ ಅಭಿಜಿನ್ ಲಗ್ನದಲ್ಲಿ ಅರ್ಚಕ ವೇದ ಬ್ರಹ್ಮ ಡಾ.ಭಾನು ಪ್ರಕಾಶ್ ಪೂಜಾ ಕೈಂಕರ್ಯ ಸಲ್ಲಿಸಿ ಮುಖ್ಯಮಂತ್ರಿಗಳು ಕಾವೇರಿಗೆ ಬಾಗೀನ ಅರ್ಪಿಸಲಿದ್ದಾರೆ.

news18-kannada
Updated:August 20, 2020, 4:58 PM IST
ಸಂಪೂರ್ಣ ಭರ್ತಿಯಾದ ಕೆಆರ್​ಎಸ್ ಜಲಾಶಯ; ನಾಳೆ ಸಿಎಂ ಯಡಿಯೂರಪ್ಪ ಬಾಗೀನ ಅರ್ಪಣೆ
ಕೆಆರ್​ಎಸ್​ ಡ್ಯಾಂ
  • Share this:
ಮಂಡ್ಯ(ಆಗಸ್ಟ್​. 20): ಜಿಲ್ಲೆಯ ರೈತರ ಜೀವನಾಡಿ ಎನಿಸಿರುವ ಕೆಆರ್​ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸಂಪ್ರದಾಯದಂತೆ ಭರ್ತಿಯಾಗಿರುವ ಕಾವೇರಿಗೆ ಬಾಗೀನ ಅರ್ಪಣೆಗೆ ನಾಳೆ ದಿನಾಂಕ ನಿಗದಿಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಬಾಗೀನ ಅರ್ಪಿಸಲಿದ್ದಾರೆ. ತುಂಬಿ ತುಳುಕುತ್ತಿರುವ ಕಾವೇರಿ ಮಾತೆಗೆ ಮೊದಲು ಪೂಜೆ ಸಲ್ಲಿಸಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ‌. ರಾಜ್ಯದ ಜೀವನದಿ ಕಾವೇರಿ ಈ ಬಾರಿ ಮುಂಗಾರು ಮಳೆಯಿಂದ ಉಕ್ಕಿ ಹರಿದಿದ್ದಾಳೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ರೈತರ ಜೀವ ನಾಡಿಯಾಗಿರುವ ಕೆಆರ್​ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನೀರಿನಿಂದ ತುಂಬಿ ತುಳುತ್ತಿದೆ. ಸಂಪ್ರದಾಯದಂತೆ ತುಂಬಿದ ಜಲಾಶಯಕ್ಕೆ ಬಾಗೀನ ಅರ್ಪಿಸಲು ನಾಳೆ ದಿನಾಂಕ ನಿಗದಿಯಾಗಿದೆ.

ಸಿ.ಎ ಬಿ ಎಸ್ ಯಡಿಯೂರಪ್ಪ ನವರು ನಾಳೆ ಬಾಗೀನ ಅರ್ಪಿಸಲು ಆಗಮಿಸುತ್ತಿದ್ದು, ಅತಿ ಹೆಚ್ಚು ಬಾರಿಗೆ ಕಾವೇರಿಗೆ ಬಾಗೀನ ಅರ್ಪಿಸಿದ ಸಿಎಂ ಎಂಬ ದಾಖಲೆ ಬಿಎಸ್​ವೈ ರವರದಾಗಲಿದೆ. ನಾಳೆ ಮಧ್ಯಾಹ್ನ 12.05 ರ ಅಭಿಜಿನ್ ಲಗ್ನದಲ್ಲಿ ಅರ್ಚಕ ವೇದ ಬ್ರಹ್ಮ ಡಾ.ಭಾನು ಪ್ರಕಾಶ್ ಪೂಜಾ ಕೈಂಕರ್ಯ ಸಲ್ಲಿಸಿ ಕಾವೇರಿಗೆ ಸಿಎಂ ಬಾಗೀನ ಅರ್ಪಿಸಲಿದ್ದಾರೆ. ಕೊರೋನಾ ಕಾರಣದಿಂದ ಸಿಎಂ ಆಗಮನದ ಹಿನ್ನೆಲೆ ಪೊಲೀಸರು ಕೂಡ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಇನ್ನುನಾಳೆ ಸಿಎಂ ಯಡಿಯೂರಪ್ಪನವರು ಕೆಆರ್​ಎಸ್​ಗೆ ಆಗಮನದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್​ ಕೆಆರ್​ಎಸ್ ಬಳಿಯ 2 ಹೆಲಿಪ್ಯಾಡ್ ಸೇರಿದಂತೆ ಜಲಾಶಯದ ಬಳಿಗೆ ಭೇಟಿ ನೀಡಿ ಅಗತ್ಯ ಕ್ರಮ‌ ಮತ್ತು ಭದ್ರತೆ ಕುರಿತಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಭರ್ಜರಿ ಮುಂಗಾರಿನಿಂದ ಸಂಪೂರ್ಣ ಭರ್ತಿಯಾದ ಕೆಆರ್​ಎಸ್ ಜಲಾಶಯ; ಮುಖ್ಯಮಂತ್ರಿಗಳಿಂದ ಬಾಗೀನ ಅರ್ಪಣೆಗೆ ಕ್ಷಣಗಣನೆ

ಮತ್ತೊಂದು ರೈತ ಹೋರಾಟಗಾರರು ಸಭೆ ನಡೆಸಿದ್ದು, ಡ್ಯಾಂ ನ ಸುತ್ತಲು ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ಶಾಶ್ವತ ವಾಗಿ ನಿಷೇಧ ಮಾಡುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಇದೀಗ ಸಿಎಂ ಆಗಿದ್ರು ಇದು‌‌ವರೆಗೂ ಆ ಭರವಸೆ ಈಡೇರಿಸಿದ್ದ ಕಾರಣಕ್ಕೆ ನಾಳೆ ಬಾಗೀನ ಅರ್ಪಿಸಲು ಬರುವ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿ  ಪ್ರತಿಭಟನೆ ಮಾಡಲು ರೈತ ಹೋರಾಟಗಾರರು  ನಿರ್ಧರಿಸಿದ್ದಾರೆ.

ಒಟ್ಟಾರೆ  ಜೀವನದಿ ಕಾವೇರಿಗೆ ನಾಳೆ  ಬಾಗೀನ ಸಲ್ಲಿಕೆ ಕಾರ್ಯಕ್ರಮ ನಿಗದಿಯಾಗಿದ್ದು ಸಿಎಂ ‌ಯಡೊಯೂರಪ್ಪ ತುಂಬಿ ತುಳುಕುತ್ತಿರುವ ಕಾವೇರಿಗೆ ಬಾಗೀನ ಅರ್ಪಣೆ ಮಾಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚಿನ‌ ಬಾರಿ  ಸಿ.ಎಂ. ಆಗಿ ಕಾವೇರಿಗೆ ಬಾಗೀನ‌ ಸಲ್ಲಿಸಿದ ದಾಖಲೆಸಿಎಂ ಬಿಎಸ್​ವೈ ಪಾಲಾಗಲಿದೆ.
Published by: G Hareeshkumar
First published: August 20, 2020, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories