Karnataka Cabinet Expansion: ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಬಿಜೆಪಿ ಶಾಸಕರಲ್ಲಿ ತೀವ್ರ ಪೈಪೋಟಿ; 13 ಮಂದಿ ಪೈಕಿ ಯಾರಿಗೆ ಒಲಿಯಲಿದೆ ಅದೃಷ್ಟ?

ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯನ್ನು ಶಶಿಕಲಾ ಜೊಲ್ಲೆ ವಹಿಸಿಕೊಂಡಿದ್ದರು. ಜತೆಗೆ ಜವಳಿ ಸಚಿವರಾಗಿ ಶ್ರೀಮಂತ ಪಾಟೀಲ್ ಕೆಲಸ ಮಾಡಿದ್ದರು.

ಶ್ರೀಮಂತ ಪಾಟೀಲ್- ಶಶಿಕಲಾ ಜೊಲ್ಲೆ

ಶ್ರೀಮಂತ ಪಾಟೀಲ್- ಶಶಿಕಲಾ ಜೊಲ್ಲೆ

  • Share this:
ಬೆಳಗಾವಿ(ಜುಲೈ 31): ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ  ವಹಿಸಿಕೊಂಡಿದ್ದಾರೆ. ಬೊಮ್ಮಾಯಿ ಅವರು ಕೆಲವೇ ದಿನಗಳಲ್ಲಿ ತಮ್ಮ ಸಂಪುಟ ವಿಸ್ತರಣೆ ಮಾಡಲಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಬಿ ಆರಂಭವಾಗಿದೆ. ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರು ಸದ್ಯ ತಮ್ಮ ನಾಯಕರು ಹಾಗೂ ಸಂಘದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಪೈಕಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜಾತಿ, ಮೂಲ, ವಲಸಿಗ ಸೇರಿ ಎಲ್ಲಾ ವರ್ಗಗಳಲ್ಲಿಯೂ ಬೆಳಗಾವಿ ಜಿಲ್ಲೆಯ ಶಾಸಕರು ಲಾಬಿಯನ್ನು ಆರಂಭಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಬೆಳಗಾವಿ ಜಿಲ್ಲೆ ಪ್ರಮುಖ ಪಾತ್ರ ವಹಿಸಿತ್ತು. ನಂತರ ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಜಿಲ್ಲೆಯ 5 ಜನ ಶಾಸಕರಿಗೆ ಮಂತ್ರಿಗಿರಿ ಭಾಗ್ಯ ಸಿಕ್ಕಿತ್ತು. ಈ ಪೈಕಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿ ಸಹ ಕೆಲಸ ನಿರ್ವಹಣೆ ಮಾಡಿದ್ದರು. ಇನ್ನೂ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿಯನ್ನು ರಮೇಶ ಜಾರಕಿಹೊಳಿಗೆ ವಹಿಸಲಾಗಿತ್ತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜವಾಬ್ದಾರಿಯನ್ನು ಉಮೇಶ ಕತ್ತಿ ವಹಿಸಿಕೊಂಡರೆ, ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯನ್ನು ಶಶಿಕಲಾ ಜೊಲ್ಲೆ ವಹಿಸಿಕೊಂಡಿದ್ದರು. ಜತೆಗೆ ಜವಳಿ ಸಚಿವರಾಗಿ ಶ್ರೀಮಂತ ಪಾಟೀಲ್ ಕೆಲಸ ಮಾಡಿದ್ದರು.

ಇದನ್ನೂ ಓದಿ:Gold Price Today: ಕೊಂಚ ಏರಿಕೆ ಕಂಡ ಚಿನ್ನ-ಬೆಳ್ಳಿ ದರ; ಇಲ್ಲಿದೆ ಇಂದಿನ ರೇಟ್..!

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಜಿಲ್ಲೆಯ ಅನೇಕ ಬಿಜೆಪಿ ಶಾಸಕರು ಕಸರತ್ತು ಆರಂಭಿಸಿದ್ದಾರೆ. ಈ ಪೈಕಿ ಶಾಸಕರು ಹಿರಿಯ, ಕಿರಿಯ, ದಲಿತ ಎಡಗೈ, ದಲಿತ ಬಲಗೈ, ಮರಾಠ, ಜೈನ, ಮೂಲ, ವಲಸಿಗ, ಲಿಂಗಾಯತ ಪಂಚಮಸಾಲಿ ಹಾಗೂ ಜಾರಕಿಹೊಳಿ ಸಹೋದರರು ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹುಕ್ಕೇರಿ ಶಾಸಕ ಉಮೇಶ ಕತ್ತಿ, 8 ಸಲ ವಿಧಾನಸಭೆಯ ಪ್ರವೇಶ ಮಾಡಿದ್ದು ಹಿರಿಯ ಕೋಟಾದಲ್ಲಿ ತಮಗೆ ಮತ್ತೊಮ್ಮೆ ಮಂತ್ರಿಗಿರಿ ಕೊಡಬೇಕು ಎಂದು ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಇನ್ನೂ ರಾಯಭಾಗ ಕ್ಷೇತ್ರದ ಶಾಸಕ ದುರ್ಯೋದನ ಐಹೊಳೆ ಸಹ ದಲಿತ ಎಡಗೈ ಕೋಟಾದಲ್ಲಿ ತಮಗೆ ಮಂತ್ರಿ ಮಾಡಿ ಎಂದು ಬೆಂಬಲಿಗರ ಮೂಲಕ ಪ್ರಯತ್ನ ಆರಂಭಿಸಿದ್ದಾರೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಸಹ ಸತತವಾಗಿ ಮೂರು ಸಲ ಸವದತ್ತಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಮಂತ್ರಿ ಮಾಡಿದ್ರೆ ರಾಜ್ಯದ ಸೇವೆ ಮಾಡೋ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇನ್ನೂ ಮರಾಠ ಕೋಟಾದಡಿ ಶ್ರೀಮಂತ ಪಾಟೀಲ್ ಹಾಗೂ ಅನಿಲ್ ಬೆನಕೆ ಸಹ ಪರ ಸಹ ಲಾಭಿ ಆರಂಭಿಸಲಾಗಿದೆ. ಜೈನ ಕೋಟಾದಡಿಯಲ್ಲಿ ಶಾಸಕ ಅಭಯ ಪಾಟೀಲ್ ಸಹ ಆಕಾಂಕ್ಷಿಯಾಗಿದ್ದು, ಸಂಘ ಪರಿವಾರದ ನಾಯಕರ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇಂದು ಸಾಧಾರಣ ಮಳೆ ಸಾಧ್ಯತೆ; ಬೆಂಗಳೂರಿನ ಹವಾಮಾನ ಹೇಗಿರಲಿದೆ?ರಾಜ್ಯದಲ್ಲಿ 2004ರಿಂದ ಯಾವುದೇ ಸರ್ಕಾರ ಬಂದ್ರ ಜಾರಕಿಹೊಳಿ ಸಹೋದರರ ಪೈಕಿ ಓರ್ವರಿಗೆ ಮಂತ್ರಿಗಿರಿ ಫಿಕ್ಸ್ ಎಂಬ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಸದ್ಯ ಬೊಮ್ಮಾಯಿ ಸಂಪುಟ ಸೇರಲು ರಮೇಶ ಜಾರಕಿಹೊಳಿ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಅವರಿಗೆ ಸಿಡಿ ಪ್ರಕರಣ ಹಿನ್ನಡೆಯಾಗೋ ಸಾಧ್ಯತೆ ಇದ್ದು, ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿ ಪರ ಲಾಬಿ ಮಾಡುವ ಸಾಧ್ಯತೆ ಇದೆ.
Published by:Latha CG
First published: