Karnataka Assembly: ಹಿಜಾಬ್ ಹಿಂದಿರೋ ಕಾಣದ ಕೈಗಳು ಯಾವುದು ಗೊತ್ತಾ?, ಹರ್ಷ ಕೊಲೆ ಹಿಂದಿನ ಸತ್ಯ ಜನರಿಗೆ ತಿಳಿಸಿ- HDK ಆಗ್ರಹ

ಹಿಜಾಬ್​ ಕುರಿತ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದಾರೆ ಈ ಪ್ರಕರಣ ಹಿಂದೆ ಕಾಣದ ಕೈಗಳು ಇದೆ ಎಂದು ಇದು ನಿಜ, ಸಂಘರ್ಷದ ಹಿಂದೆ ಕಾಣದ ಕೈಗಳಿವೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ

ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ

  • Share this:
ಬೆಂಗಳೂರು (ಮಾ.23) : ರಾಜ್ಯದಲ್ಲಿ ಕೋಲಾಹಾಲ ಎಬ್ಬಿಸಿದ್ದ ಹಿಜಾಬ್ (Hijab) ಸಂಘರ್ಷ ವಿಚಾರವನ್ನು ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (Kumarsaway) ಪ್ರಸ್ತಾಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಗಿದೆ. ಉಡುಪಿ (Udupi) ಸರ್ಕಾರಿ‌ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿಚಾರ ಇನ್ನೂ ಜೀವಂತವಾಗಿ ಮುಂದುವರೆಯುತ್ತಿದೆ. ಆಗ ಉಡುಪಿ ಕಾಲೇಜಿನ ಪ್ರಿನ್ಸಿಪಾಲ್ ಸರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದಿದ್ರೆ. ಹಿಜಾಬ್ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಹೋಗ್ತಿರ್ಲಿಲ್ಲ. ಉಡುಪಿ ಕಾಲೇಜಿನ ಪ್ರಿನ್ಸಿಪಾಲ್ ಕೇರ್ ಲೆಸ್ (Care less) ಆಗಿ ತೀರ್ಮಾನಗಳನ್ನು ಕೈಗೊಂಡ್ರು ಇದ್ರಿಂದ ಬೇರೆ ಜಿಲ್ಲೆಗಳಿಗೆ ಸಂಘರ್ಷ ಕಿಚ್ಚು ಹಬ್ಬಿತು. ಉಡುಪಿ‌ ಬಳಿಕ ಹಲವು ಜಿಲ್ಲೆಗಳಲ್ಲಿ ಇದೀಗ ಎರಡು ಸಮುದಾಯಗಳ ಮಧ್ಯೆ ಸಂಘರ್ಷ ಆರಂಭವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು

‘ಹಿಜಾಬ್​ ಹಿಂದಿದೆ ಕಾಣದ ಕೈ’

ಹೈಕೋರ್ಟ್ ತೀರ್ಪಿನಲ್ಲಿ ಕಾಣದ ಕೈಗಳು ಇದರ ಹಿಂದೆ ಇದೆ ಅಂತ ಉಲ್ಲೇಖ ಮಾಡಿದೆ. ಇದು ನಿಜ, ಸಂಘರ್ಷದ ಹಿಂದೆ ಕಾಣದ ಕೈಗಳಿವೆ ಸಿಎಫ್ಐ ವಿದ್ಯಾರ್ಥಿಗಳಿಗೆ ಚಿತಾವಣೆ ಮಾಡಿದೆ. ಎರಡು ಕಡೆಯ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಸಂಘರ್ಷ ಪ್ರಾರಂಭ ಆಯ್ತು. ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಸಾಮರಸ್ಯ ಇದೆ. ಕರ್ನಾಟಕ ಶಿಕ್ಷಣದಲ್ಲಿ ಕಾಶಿ ಇದ್ದಂತೆ. ಇಂಥಾ ನಾಡಿನಲ್ಲಿ ಸಂಘರ್ಷ ತರವಲ್ಲ. ಮನಸ್ಸುಗಳನ್ನು ಒಡೆಯುತ್ತಿರೋದು ಸರಿಯಲ್ಲ. ಮುಗ್ಧ ಮನಸುಗಳ ಮೇಲೆ ಈ ಪ್ರಕರಣ ‌ಪರಿಣಾಮ ಬೀರುತ್ತೆ ಎಂದ್ರು ಕುಮಾರಸ್ವಾಮಿ

ಹರ್ಷನ ಕೊಲೆ ಬಗ್ಗೆ ಸೂಕ್ತ ತನಿಖೆಯಾಗ್ಲಿ

ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು. ಹಿಜಾಬ್ ಸಂಘರ್ಷ ಇದಕ್ಕೆ ಕಾರಣ ಅಂತ ಎಲ್ಲರಲ್ಲೂ ಪ್ರಾಥಮಿಕ ಭಾವನೆ ಬಂದಿದ್ದು ನಿಜ. ಆ ಯುವಕನ ಸಹೋದರಿ ಕೆಲವು ಮಾತು ಹೇಳಿದ್ರು ಅವರ ಮಾತು ಬಗ್ಗೆ ನಾವೆಲ್ಲ ಯೋಚನೆ ಮಾಡಬೇಕು. ಶಿವಮೊಗ್ಗದಲ್ಲಿ ಮಂತ್ರಿಗಳೇ 144 ಉಲ್ಲಂಘಿಸಿದ್ರು ಅಂತ ಚರ್ಚೆ ನಡೀತು. ಹರ್ಷನ‌ ಕೊಲೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹರ್ಷನ‌ ಕೊಲೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಿ ಸತ್ಯವನ್ನು ಸರ್ಕಾರ ಜನರ ಮುಂದಿಡಲಿ ಅಂತ ಕುಮಾರಸ್ವಾಮಿ ಆಗ್ರಹಿಸಿದ್ರು. ಎಚ್ಡಿಕೆ ಚರ್ಚೆ ಮಧ್ಯೆ ಈಶ್ವರಪ್ಪ ಮಧ್ಯಪ್ರವೇಶ

‘ಹಿಜಾಬ್ ಗಲಾಟೆಗೆ ಎಸ್​ಡಿಪಿಐ, ಪಿಎಫ್ಐ ಕಾರಣ’

ಯು.ಟಿ ಖಾದರ್ ನೇತೃತ್ವದಲ್ಲಿ ಮುಸಲ್ಮಾನ ಶಾಸಕರೇ ಹೇಳಿದ್ದಾರೆ. ಇವತ್ತಿನ ಹಿಜಾಬ್ ಗಲಾಟೆಗೆ ಎಸ್​ಡಿಪಿಐ, ಪಿಎಫ್ಐ ಕಾರಣ, ಅವುಗಳ ವಿರುದ್ಧ ಕ್ರಮ ತಗೊಳ್ಳಿ ಅಂದಿದ್ದಾರೆ. ಒಂದು ಪತ್ರಿಕೆಯಲ್ಲಿ ಮುಸ್ಲಿಂ ಶಾಸಕರ ಈ ಹೇಳಿಕೆ ಬಂದಿದೆ. ಅದೇ ಪತ್ರಿಕೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಹೇಳಿಕೆಗಳೂ ವರದಿಯಾಗಿವೆ ಹಿಜಾಬ್ ಸಂಘರ್ಷಕ್ಕೆ RSS ಮತ್ತು ಭಜರಂಗ ದಳ ಕಾರಣ ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಿಕೆಗಳು ವರದಿಯಾಗಿವೆ

ಇದನ್ನೂ ಓದಿ: Yadagiri: ಅರ್ಧಕ್ಕೆ ನಿಂತ ವಂದೇ ಮಾತರಂ ಹಾಡು, ಡಿಕೆಶಿ ನೇತೃತ್ವದ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗೆ ಅಗೌರವ

ಉಡುಪಿಯಲ್ಲಿ 96 ಮಕ್ಕಳು ಹಿಜಾಬ್ ಹಾಕ್ಕೊಂಡು ಹೋಗ್ತಿದ್ದರು.ಆದ್ರೆ ಆರು ಮಕ್ಕಳು ಮಾತ್ರ ಹಿಜಾಬ್ ಬೇಕು ಅಂತ ಪಟ್ಟು ಹಿಡಿದು ಹೊರಗೆ ಬಂದ್ರು. ಆ ಆರು ಮಕ್ಕಳನ್ನು ಆಗಲೇ ಕರೆದು ಮನವರಿಕೆ ಮಾಡಿದ್ದಿದ್ರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ. ಹರ್ಷನೂ ಸಾಯ್ತಿರ್ಲಿಲ್ಲ. ಈ ವೇಳೆ ಮಧ್ಯ ಪ್ರವೇಶಿಸಿದ ಈಶ್ವರಪ್ಪ ಸಂಘರ್ಷವನ್ನು ರಾಜಕೀಯ ಮಾಡಿಕೊಂಡಿದ್ದಾರೆ ಅಂತ ಹೇಳಿದರು'

ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ; ಸರ್ಕಾರ ಒಳಗೊಳಗೆ ಖುಷಿ ಪಡ್ತಿದೆ: UT Khader ಆರೋಪ

ರಿವೇಂಜ್​ ತೀರಿಸಿಕೊಳ್ಳಲು ಹೋಗ್ಬೇಡಿ

ಸಮಸ್ಯೆ ಬಂದಿದ್ದು ಕೋರ್ಟಿಗೆ ಉಡುಪಿ ವಿಚಾರ ಹೋದಾಗ ಎಂದು ಈಶ್ವರಪ್ಪ ಮಾತಿಗೆ ಯುಟಿ ಖಾದರ್​ ಉತ್ತರಿಸಿದ್ರು. ಕುಂದಾಪುರದ ಭಂಡಾರ್ಕರ್ ಕಾಲೇಜು, ಎಂಜಿಎಂ ಕಾಲೇಜುಗಳಲ್ಲೂ ಶುರುವಾಯ್ತು. ಅಲ್ಲೆಲ್ಲಾ ಹಿಜಾಬ್​ಗೆ ಅವಕಾಶ ಇತ್ತು. ಆದ್ರೆ ಕೆಲ ಯುವಕರು ಹಿಜಾಬ್ ಗೆ ಅವಕಾಶ ಕೊಡದಂತೆ ಪ್ರಿನ್ಸಿಪಾಲ್ ಗಳಿಗೆ ಒತ್ತಾಯಿಸಿದ್ರು ಮಾರನೇ ದಿನದಿಂದ ಹಿಜಾಬ್ ಧರಿಸಿದವ್ರಿಗೆ ಕಾಲೇಜುಗಳ ಗೇಟ್ ಬಂದ್ ಆಯ್ತು.

ಹಿಜಾಬ್​ಗೆ ಅವಕಾಶ ಇಲ್ಲದ ಕಡೆ ಕೊಡ್ಬೇಡಿ. ಹಿಂದಿನಿಂದಲೂ ಅವಕಾಶ ಇದ್ದ ಕಡೆ ಅವಕಾಶ ಕೊಡಿ, ಅದೇ ರೀತಿ ಪರೀಕ್ಷೆಗೂ ಅವಕಾಶ ಕೊಡಿ. ಇದನ್ನ ರಿವೇಂಜ್ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗೋದು ಬೇಡ ಅಂತ ಯುಟಿ ಖಾದರ್​ ಹೇಳಿದ್ದಾರೆ
Published by:Pavana HS
First published: