ತರಕಾರಿ ವ್ಯಾಪಾರಿಯ ಮಗಳ ಸಾಧನೆ; ವಿಜ್ಞಾನ ವಿಭಾಗದಲ್ಲಿ ಶೇ. 94.5 ಪಡೆದ ಹುಕ್ಕೇರಿ ವಿದ್ಯಾರ್ಥಿನಿ

ತಂದೆ-ತಾಯಿ ಇಬ್ಬರು ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಮಗಳನ್ನು ಓದಿಸಿದ್ದು, ಮಗಳ ಇವತ್ತಿನ ಫಲಿತಾಂಶಕ್ಕೆ  ಹರ್ಷ ವ್ಯಕ್ತಪಡಿಸಿದ್ದಾರೆ‌. ಮುಂದೆಯೂ ತಮ್ಮ ಮಗಳು ಯಾವುದೇ ಕ್ಷೇತ್ರದಲ್ಲಿ ಓದಲು ಇಚ್ಚಿಸಿದರೂ ಅವಳನ್ನು ಓದಿಸುತ್ತೇವೆ ಎಂಬುದು ಅನುಷಾ ಹೆತ್ತವರ ಆಶಯವಾಗಿದೆ.

ಬೆಳಗಾವಿ ವಿದ್ಯಾರ್ಥಿನಿ

ಬೆಳಗಾವಿ ವಿದ್ಯಾರ್ಥಿನಿ

  • Share this:
ಚಿಕ್ಕೋಡಿ(ಜು.14): ಕೊರೋನಾ ಆತಂಕದ ನಡುವೇ ಇಂದು ದ್ವೀತಿಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಪ್ರತಿ ಸಲದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಾಗದು ಎಂಬ ಮಾತಿನಂತೆ ಸಾಮಾನ್ಯ ತರಕಾರಿ ಮಾರುವವರ ಮಗಳು  ಕಾಲೇಜಿಗೆ ದ್ವೀತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಅಣ್ಣಪ್ಪ ಭಮ್ಮನ್ನವರ ಅವರ ಮಗಳು ಅನುಷಾ ಭಮ್ಮನ್ನವರ ದ್ವಿತೀಯ ಪಿಯುಸಿಯಲ್ಲಿ ಶೇ.94.5ರಷ್ಟು ಫಲಿತಾಂಶ ಪಡೆದಿದ್ದಾಳೆ. ಈಕೆ ಹುಕ್ಕೇರಿ ತಾಲೂಕಿನ  ನೀಡಸೊಸಿಯ ಎಸ್ ಜೆ.ಪಿಎನ್ ಕಾಲೇಜುನಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದಳು.

ಇಂದು ಹೊರಬಿದ್ದ ಪಿಯುಸಿ ದ್ವೀತಿಯ ವರ್ಷದ ಪರೀಕ್ಷೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 94.5 % ಅಂಕಗಳನ್ನು ಪಡೆದು ನೀಡಸೊಸಿ ಕಾಲೇಜಿಗೆ ದ್ವೀತಿಯ ಸ್ಥಾ‌ನ ಪಡೆದಿದ್ದಾಳೆ .

ರಿಲಾಯನ್ಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಈಗ ವಿಶ್ವದ ಆರನೇ ಶ್ರೀಮಂತ ವ್ಯಕ್ತಿ

ಇನ್ನು ವಿಷಯವಾರು ಪಡೆದ ಅಂಕಗಳನ್ನು ನೋಡುವುದಾದರೆ, ಇಂಗ್ಲಿಷ್​​ನಲ್ಲಿ 86, ಹಿಂದಿಯಲ್ಲಿ 94, ಭೌತಶಾಸ್ತ್ರದಲ್ಲಿ 99, ರಾಸಾಯನಶಾಸ್ತ್ರದಲ್ಲಿ 93, ಗಣಿತದಲ್ಲಿ 98, ಹಾಗೂ ಜೀವಶಾಸ್ತ್ರದಲ್ಲಿ 97 ಅಂಕ ಹೀಗೆ ಒಟ್ಟು 567 ಅಂಕಗಳನ್ನ ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಪಡೆದಿದ್ದಾಳೆ.

ತಂದೆ-ತಾಯಿ ಇಬ್ಬರು ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಮಗಳನ್ನು ಓದಿಸಿದ್ದು, ಮಗಳ ಇವತ್ತಿನ ಫಲಿತಾಂಶಕ್ಕೆ  ಹರ್ಷ ವ್ಯಕ್ತಪಡಿಸಿದ್ದಾರೆ‌. ಮುಂದೆಯೂ ತಮ್ಮ ಮಗಳು ಯಾವುದೇ ಕ್ಷೇತ್ರದಲ್ಲಿ ಓದಲು ಇಚ್ಚಿಸಿದರೂ ಅವಳನ್ನು ಓದಿಸುತ್ತೇವೆ ಎಂಬುದು ಅನುಷಾ ಹೆತ್ತವರ ಆಶಯವಾಗಿದೆ.

ಇನ್ನು, ತನ್ನ ಸಾಧನೆಗೆ ಕಾಲೇಜಿನ ಎಲ್ಲಾ ಉಪನ್ಯಾಸಕರು ,  ತಂದೆ ತಾಯಿ ಹಾಗೂ ಕುಟುಂಬದ ಎಲ್ಲರ ಸಹಕಾರ , ಪ್ರೋತ್ಸಾಹವೇ ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಗಿದೆ. ಮುಂದೆ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಎಬುದು ಈ ವಿದ್ಯಾರ್ಥಿನಿಯದ್ದಾಗಿದೆ.

ಒಟ್ಟಿನಲ್ಲಿ ಇಂದು ಪ್ರಕಟಗೊಂಡ ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಸಾಧನೆಗೆ ಬಡತನ , ಗ್ರಾಮೀಣ ಪ್ರದೇಶ ಯಾವುದೂ ಅಡ್ಡಿಯಾಗದು ಎಂದು ಸಾಧಿಸಿ ತೋರಿಸಿದ್ದಾರೆ .
Published by:Latha CG
First published: