Karawara: ನೀಲಿಕಲ್ಲು ಮತ್ಸ್ಯ ಕೃಷಿಯತ್ತ ಕಾರವಾರದ ಮೀನುಗಾರ ಸಮುದಾಯದ ಮಹಿಳೆಯರ ಚಿತ್ತ

ನೀಲಿ ಕಲ್ಲುಗಳು ಬಹಳ ರುಚಿಕರವಾಗಿದ್ದು, ಸುಕ್ಕಾ, ಚಿಲ್ಲಿಯಂಥ ಖಾದ್ಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ವಿಶೇಷವಾಗಿ ಕರ್ನಾಟಕ ಹಾಗೂ ಗೋವಾದ ಕರಾವಳಿಯ ಭಾಗದಲ್ಲಿ, ಹೋಟೆಲ್ ಗಳಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ.

ಸಮುದ್ರ ಪಾಚಿ ಕೃಷಿ ಕಾರ್ಯದಲ್ಲಿ ನಿರತರಾಗಿರುವ ಮೀನುಗಾರ.

ಸಮುದ್ರ ಪಾಚಿ ಕೃಷಿ ಕಾರ್ಯದಲ್ಲಿ ನಿರತರಾಗಿರುವ ಮೀನುಗಾರ.

  • Share this:
ಕಾರವಾರ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಉತ್ತರ ಕನ್ನಡ (Uttara Kannada District) ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಸಮುದ್ರ ಪಾಚಿ (Sea algae) ಹಾಗೂ ನೀಲಿಕಲ್ಲು (Blue Stone Farming) ಕೃಷಿಗೆ ಚಾಲನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karawara) ನಂದನಗದ್ದಾದಲ್ಲಿ ಇಲ್ಲಿನ ಮಹಿಳೆಯರು ಮತ್ಸ್ಯ ಕೃಷಿ ಮಾಡಲು ಮುಂದಾಗಿದ್ದು ಕೇಂದ್ರ ಸರಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಪ್ರಥಮ ಬಾರಿಗೆ ಸಮುದ್ರ ಪಾಚಿ ಕೃಷಿಯನ್ನು ಕುಮಟಾ ತಾಲ್ಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದೆ. ತಲಾ 50 ಕೆಜಿ ಸಾಮರ್ಥ್ಯದ 10 ರಾಫ್ಟ್ ಗಳನ್ನು ಹಾಕಲಾಗಿದೆ. ಇನ್ನು ಕಾರವಾರ ತಾಲ್ಲೂಕಿನ ಕಾಳಿನದಿ ಅಳಿವೆಯಲ್ಲಿ ಪ್ರಥಮ ಬಾರಿಗೆ ನೀಲಿಕಲ್ಲು ಕೃಷಿ (Bivalve culture)ಯನ್ನು ರಾಫ್ಟ್ ವಿಧಾನದಲ್ಲಿ ಕೈಗೊಳ್ಳಲಾಗಿದೆ. ನಂದನಗದ್ದಾದ 10 ಮೀನುಗಾರ ಮಹಿಳೆಯರ ಸಂಗಡಿಗರ ಜೊತೆ ಸೇರಿ 10 ರಾಫ್ಟ್ ಗಳನ್ನು ಹಾಕಲಾಗಿದೆ. ಇವೆರಡು ಕೂಡ ಮೀನುಗಾರರಿಗೆ, ಅದರಲ್ಲೂ ಮೀನುಗಾರ ಮಹಿಳೆಯರಿಗೆ ಪರ್ಯಾಯ ಉದ್ಯೋಗವಾಗಿದೆ.

ಏನಿದು ಮೀನಿನ ಕೃಷಿ? ಹೇಗೆ ಮಾಡೋದು?

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳನ್ನು ಮೀನುಗಾರಿಕೆ ಇಲಾಖೆ ಆಯ್ಕೆ ಮಾಡುತ್ತದೆ. ಶೇಕಡಾ 60ರಷ್ಟು ಸಬ್ಸಿಡಿ ಮಹಿಳೆಯರಿಗೆ ಹಾಗೂ ಶೇಕಡಾ 40ರಷ್ಟು ಸಬ್ಸಿಡಿ ಪುರುಷ ಫಲಾನುಭವಿಗಳಿಗೆ ನೀಡಲಾಗುತ್ತದೆ. ಸಮುದ್ರ ಪಾಚಿಯನ್ನು ಒಂದು ಕಂಬಕ್ಕೆ ಕಟ್ಟಿ ಸಮುದ್ರದ ನೀರಿನಲ್ಲಿ ಇಳಿಬಿಡಲಾಗುತ್ತದೆ. ಸುಮಾರು ನಾಲ್ಕು ತಿಂಗಳ ಬಳಿಕ ಈ ಪಾಚಿ ದ್ವಿಗುಣಗೊಳ್ಳಲಿದೆ. ಈ ಬೆಳೆಯನ್ನು ಕಟಾವು ಮಾಡಿ ಔಷಧಿ, ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಇದೇ ಕಾರಣದಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕೂಡ ಈ ಪಾಚಿಗೆ ಇದೆ.

ಇನ್ನು ನೀಲಿ ಕಲ್ಲುಗಳನ್ನು ರೋಪ್ ನಂತೆ ಕಟ್ಟಿ ನೀರಿನಲ್ಲಿ ಇಳಿಬಿಡಲಾಗುತ್ತದೆ. ಇದು ಬೆಳೆದು ದೊಡ್ಡ ಗಾತ್ರ ಹೊಂದಿದ ಬಳಿಕ ಮಾರುಕಟ್ಟೆಗೆ ನೀಡಲಾಗುತ್ತದೆ. ನೀಲಿ ಕಲ್ಲುಗಳು ಬಹಳ ರುಚಿಕರವಾಗಿದ್ದು, ಸುಕ್ಕಾ, ಚಿಲ್ಲಿಯಂಥ ಖಾದ್ಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ವಿಶೇಷವಾಗಿ ಕರ್ನಾಟಕ ಹಾಗೂ ಗೋವಾದ ಕರಾವಳಿಯ ಭಾಗದಲ್ಲಿ, ಹೋಟೆಲ್ ಗಳಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ.

ಇದನ್ನು ಓದಿ: Bitcoin Scam ಸಂಬಂಧ ಸರ್ಕಾರದ ಸ್ಪಷ್ಟನೆ; ಕಾಂಗ್ರೆಸ್ ಆರೋಪಗಳಿಗೆ ಸಚಿವ Sudhakar ಉತ್ತರ!

ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಸಮುದ್ರ ಪಾಚಿ ಹಾಗೂ ನೀಲಿಕಲ್ಲುಗಳ ಕೃಷಿಯನ್ನು ಕುಮಟಾ ಹಾಗೂ ಕಾರವಾರದಲ್ಲಿ ಕೈಗೊಳ್ಳಲಾಗಿದೆ. ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ. ಇವುಗಳಿಗೆ ಹೆಚ್ಚು ಉಪ್ಪಿನಂಶ ಇರುವ ನೀರು ಬೇಕಾಗುತ್ತದೆ. ಉಪ್ಪಿನಂಶ ಕಡಿಮೆಯಾದರೂ ಕೂಡ ಇವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳುವುದರಿಂದ, ಉಪ್ಪಿನಂಶ ಸಮಪ್ರಮಾಣದಲ್ಲಿ ನೋಡಿಕೊಳ್ಳಲು ಹೆಚ್ಚಿನ ಗಮನ ವಹಿಸಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೇರಳವಾಗಿ ಸಿಗುತ್ತಿದ್ದ ನೀಲಿ ಕಲ್ಲು ಈಗ ಜಿಲ್ಲೆಯ ಕರಾವಳಿಯಲ್ಲಿ ಅಪರೂಪವಾಗಿದೆ. ಇಂತ ಮತ್ಸ್ಯ ಕೃಷಿಯನ್ನ ಈಗ ಮತ್ತೆ ಮಾಡುತ್ತಿರುವುದು ಉತ್ತಮ‌ ಬೆಳವಣಿಗೆ ಈ‌ ಹಿನ್ನಲೆಯಲ್ಲಿ ಉತ್ತಮ ಬೆಳೆಯತ್ತ ಮೀನುಗಾರ ಮಹಿಳೆಯರು ಕಾದು‌ ಕುಳಿತ್ತಿದ್ದಾರೆ.
Published by:HR Ramesh
First published: